ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ 11ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 43 ರನ್ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಆರ್ಸಿಬಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಲಗ್ಗೆ ಇಟ್ಟಿದೆ.
ಪಂದ್ಯದ ಪೂರ್ಣ ಸ್ಕೋರ್ಕಾರ್ಡ್ ಮತ್ತು ಮುಖ್ಯಾಂಶಗಳು ಇಲ್ಲಿದೆ:
-
ಆರ್ಸಿಬಿ: 250/3 (20 ಓವರ್ಗಳು)
-
ಸಿಎಸ್ಕೆ: 207/9 (20 ಓವರ್ಗಳು)
-
ಫಲಿತಾಂಶ: ಆರ್ಸಿಬಿಗೆ 43 ರನ್ಗಳ ಜಯ.
ಬ್ಯಾಟಿಂಗ್ ಅಬ್ಬರ: ಟಿಮ್ ಡೇವಿಡ್ ಮೃತ್ಯುಕಾಂಡ!
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ, ಈ ಸೀಸನ್ನ ದಾಖಲೆಯ ಮೊತ್ತ ಪೇರಿಸಿತು.
-
ಟಿಮ್ ಡೇವಿಡ್: ಕೇವಲ 25 ಎಸೆತಗಳಲ್ಲಿ 70 ರನ್* (8 ಸಿಕ್ಸರ್, 3 ಬೌಂಡರಿ).
-
ದೇವದತ್ ಪಡಿಕ್ಕಲ್: 29 ಎಸೆತಗಳಲ್ಲಿ 50 ರನ್.
-
ರಜತ್ ಪಾಟೀದಾರ್: 19 ಎಸೆತಗಳಲ್ಲಿ 48* ರನ್ (6 ಸಿಕ್ಸರ್).
-
ಫಿಲ್ ಸಾಲ್ಟ್: 30 ಎಸೆತಗಳಲ್ಲಿ 46 ರನ್.
ಸಿಎಸ್ಕೆ ಹೋರಾಟ ವ್ಯರ್ಥ:
251 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ ಸಿಎಸ್ಕೆ, ಆರ್ಸಿಬಿ ಬೌಲರ್ಗಳ ಶಿಸ್ತುಬದ್ಧ ದಾಳಿಗೆ ತತ್ತರಿಸಿತು.
-
ಸರ್ಫರಾಜ್ ಖಾನ್: 25 ಎಸೆತಗಳಲ್ಲಿ 50 ರನ್ ಗಳಿಸಿ ಹೋರಾಟ ನಡೆಸಿದರು.
-
ಪ್ರಶಾಂತ್ ವೀರ್: 43 ರನ್ (29 ಎಸೆತ).
-
ಜೆಮಿ ಓವರ್ಟನ್: 37 ರನ್.
-
ಎಂ.ಎಸ್. ಧೋನಿ: 10 ರನ್ ಗಳಿಸಿ ಔಟಾದರು.
ಬೌಲಿಂಗ್ ಪರಾಕ್ರಮ:
-
ಭುವನೇಶ್ವರ್ ಕುಮಾರ್: 31 ರನ್ ನೀಡಿ 2 ಪ್ರಮುಖ ವಿಕೆಟ್ ಪಡೆದರು.
-
ಕರುಣಾಲ್ ಪಾಂಡ್ಯ: 36 ರನ್ ನೀಡಿ 2 ವಿಕೆಟ್.
-
ಸುಯಶ್ ಶರ್ಮಾ: 4 ಓವರ್ಗಳಲ್ಲಿ ಕೇವಲ 19 ರನ್ ನೀಡಿ 1 ವಿಕೆಟ್ ಪಡೆದು ರನ್ ವೇಗಕ್ಕೆ ಬ್ರೇಕ್ ಹಾಕಿದರು.
ಇದನ್ನು ಓದಿ : CSK VS RCB SCORE : ಸಿಎಸ್ಕೆ ಗೆಲುವಿಗೆ ಬೇಕಿದೆ 23 ಎಸೆತಗಳಲ್ಲಿ 73 ರನ್!

