Homeತಾಜಾ ಸುದ್ದಿWest Bengal : ಟಿಎಂಸಿ ಬಿಡಲು ಬಯಸುವವರು ಪಕ್ಷ ಬಿಡಬಹುದು ; ಮಮತಾ ಬ್ಯಾನರ್ಜಿ

West Bengal : ಟಿಎಂಸಿ ಬಿಡಲು ಬಯಸುವವರು ಪಕ್ಷ ಬಿಡಬಹುದು ; ಮಮತಾ ಬ್ಯಾನರ್ಜಿ

ಕೋಲ್ಕತ್ತಾ : ಇತ್ತೀಚೆಗೆ ಮುಕ್ತಾಯಗೊಂಡ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಹಿನ್ನಡೆ ಅನುಭವಿಸಿರುವ ಹಿನ್ನೆಲೆಯಲ್ಲಿ ಕೋಲ್ಕತ್ತಾದಲ್ಲಿ ಮಹತ್ವದ ಸಭೆ ನಡೆದಿದೆ. ಈ ವೇಳೆ ಮಾತನಾಡಿದ ಮಮತಾ ಬ್ಯಾನರ್ಜಿ, “ಪಕ್ಷವನ್ನು ಯಾರೆಲ್ಲಾ ತೊರೆಯಲು ಬಯಸುತ್ತಾರೋ, ಅವರೆಲ್ಲಾ ಹೊರ ಹೋಗಬಹುದು” ಎಂದು ಖಡಕ್ ಆಗಿ ಹೇಳಿದ್ದಾರೆ. ಇತ್ತೀಚಿನ ಚುನಾವಣೆಯಲ್ಲಿ ಪರಾಭವಗೊಂಡಿರುವ ಅಭ್ಯರ್ಥಿಗಳು ತಮ್ಮ  ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಪುನರ್ ಸಂಘಟನೆಯತ್ತ ಗಮನ ಹರಿಸಬೇಕು ಎಂದು ಸೂಚಿಸಿದ್ದಾರೆ.

ಶುಕ್ರವಾರ ತಮ್ಮ ಕಾಲಿಘಾಟ್ ನಿವಾಸದಲ್ಲಿ ಆಯೋಜಿಸಲಾಗಿದ್ದ ಈ ಟಿಎಂಸಿ ಸಭೆಯಲ್ಲಿ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಕೂಡ ಭಾಗವಹಿಸಿದ್ದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, ತಮ್ಮ ಪಕ್ಷ ಪರಾವಭ ಅನುಭವಿಸಿರುವ ಹೊರತಾಗಿಯೂ ಮತ್ತೆ  ಪುಟಿದೆೇಳಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. “ಯಾರೆಲ್ಲಾ ಬೇರೆ ಪಕ್ಷಗಳಿಗೆ ಹೋಗುತ್ತಿದ್ದಾರೋ, ಅವರೆಲ್ಲಾ ಹೋಗಲಿ. ನಾನು ಮತ್ತೆ ಹೊಸದಾಗಿ ಪಕ್ಷವನ್ನು ಪುನರ್ ಸಂಘಟಿಸಲಿದ್ದೇನೆ” ಎಂದು ಸವಾಲು ಹಾಕಿದ್ದಾರೆ.

ಇದೇ ವೇಳೆ ಕಾರ್ಯಕರ್ತರಿಗೆ ಕರೆ ನೀಡಿದ ಅವರು, ದಾಳಿಯಿಂದ ಹಾನಿಗೀಡಾಗಿರುವ ಪಕ್ಷದ ಕಚೇರಿಗಳನ್ನು ಮರು ನಿರ್ಮಾಣ ಮಾಡಿ, ಅವುಗಳಿಗೆ ಬಣ್ಣ ಬಳಿದು ಮತ್ತೆ ತೆರೆಯಿರಿ ಎಂದು ಸೂಚಿಸಿದ್ದಾರೆ. ಅಗತ್ಯ ಬಿದ್ದರೆ ತಾವೂ ಕೂಡ ಬಣ್ಣ ಬಳಿಯುವುದಾಗಿ ಹೇಳಿದ ಮಮತಾ, ತೃಣಮೂಲ ಕಾಂಗ್ರೆಸ್ ಪಕ್ಷ ಎಂದಿಗೂ ತಲೆ ಬಾಗುವುದಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದೇ ವೇಳೆ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಬಂಗಾಳದಲ್ಲಿ “ಜನಮತವನ್ನು ಲೂಟಿ ಮಾಡಲಾಗಿದೆ” ಎಂದು ಗಂಭೀರ ಆರೋಪ ಮಾಡಿದ್ದಾರೆ.

ಇದನ್ನು ಓದಿ : Lakshmi Hebbalkar : ಜನರಿಗೆ ಹೇಳೋದಾಯ್ತು “ಮೋದಿ ಏನು ಮಾಡಿದ್ದಾರೆ ಮೊದಲು ಹೇಳಲಿ!” ಉಡುಪಿಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ನೇರ ಸವಾಲು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments