ಬೆಂಗಳೂರು : ಇನ್ಸ್ಟಾಗ್ರಾಮ್, ಫೇಸ್ಬುಕ್, ವಾಟ್ಸಾಪ್ ಸೇರಿದಂತೆ ಸೋಷಿಯಲ್ ಮೀಡಿಯಾಗಳಲ್ಲಿ ಈಗ 80ರ ದಶಕದ ವಿಂಟೇಜ್ ಶೈಲಿಯ ಪೋಸ್ಟರ್ಗಳು ಹಾಗೂ ರೆಟ್ರೋ ಲುಕ್ಗಳು ಸಕ್ಕತ್ ಸದ್ದು ಮಾಡುತ್ತಿವೆ. ಎಐ (AI) ತಂತ್ರಜ್ಞಾನ ಬಳಸಿ ಬೆಲ್ ಬಾಟಮ್ ಪ್ಯಾಂಟ್, ಹಳೆಯ ಕ್ಯಾಮೆರಾ ಫಿಲ್ಮ್ ಹಾಗೂ ಕ್ಲಾಸಿಕ್ ಬ್ಯಾಕ್ಗ್ರೌಂಡ್ನಲ್ಲಿ ತಮ್ಮ ಫೋಟೋಗಳನ್ನು 1980ರ ಶೈಲಿಗೆ ಬದಲಾಯಿಸಿಕೊಳ್ಳುವುದು ಈಗಿನ ಹೊಸ ಕ್ರೇಜ್ ಆಗಿದೆ.
ಆದರೆ, ಈ ರೀತಿ ಆಕರ್ಷಕವಾಗಿ ಕಾಣುವ ’80s ಫೋಟೋ ವೈಬ್’ ಅತ್ಯಂತ ಅಪಾಯಕಾರಿ ಎಂದು ಸೈಬರ್ ತಜ್ಞರು ಎಚ್ಚರಿಸಿದ್ದಾರೆ.
ಸೈಬರ್ ಎಕ್ಸ್ಪರ್ಟ್ ಡಾ. ಶುಭಮಂಗಳ ಎಚ್ಚರಿಕೆ: ಈ ವೈರಲ್ ಟ್ರೆಂಡ್ ಬಗ್ಗೆ ನ್ಯೂಸ್18 ಕನ್ನಡದೊಂದಿಗೆ ಮಾತನಾಡಿದ ಸೈಬರ್ ಎಕ್ಸ್ಪರ್ಟ್ ಡಾ. ಶುಭಮಂಗಳ, “ಇಂತಹ ಎಐ ಆ್ಯಪ್ಗಳಿಗೆ ನಿಮ್ಮ ಒರಿಜಿನಲ್ ಫೋಟೋಗಳನ್ನು ಅಪ್ಲೋಡ್ ಮಾಡುವುದರಿಂದ, ಸೈಬರ್ ಅಪರಾಧಿಗಳಿಗೆ ಹಾಗೂ ಅಜ್ಞಾತ ಥರ್ಡ್ ಪಾರ್ಟಿ ಆ್ಯಪ್ಗಳಿಗೆ ನೀವೇ ಖುದ್ದಾಗಿ ನಿಮ್ಮ ಮುಖದ ಸ್ಪಷ್ಟ ಚಿತ್ರಣ ಮತ್ತು ಖಾಸಗಿ ವಿವರಗಳನ್ನು ನೀಡಿದಂತಾಗುತ್ತದೆ. ಈ ಫೋಟೋಗಳನ್ನು ದುಷ್ಟರು ಸೈಬರ್ ಅಪರಾಧ ಕೃತ್ಯಗಳಿಗೆ ಹಾಗೂ ಡಿಜಿಟಲ್ ದುರುಪಯೋಗಕ್ಕೆ ಬಳಸಿಕೊಳ್ಳುವ ಸಾಧ್ಯತೆ ಅಧಿಕವಾಗಿರುತ್ತದೆ” ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.
ಆದ್ದರಿಂದ, ಸೋಷಿಯಲ್ ಮೀಡಿಯಾದಲ್ಲಿ ಮುಗಿಬಿದ್ದು ಇಂತಹ ಟ್ರೆಂಡ್ಗಳನ್ನು ಫಾಲೋ ಮಾಡುವ ಮುನ್ನ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕಾಗಿದೆ.
ಇದನ್ನು ಓದಿ : Puttur : ನೆಲ್ಯಾಡಿಯಲ್ಲಿ ತಲೆಮರೆಸಿಕೊಂಡಿದ್ದ ಪೋಕ್ಸೋ (POCSO) ಆರೋಪಿ ಬಂಧನ!