Homeತಾಜಾ ಸುದ್ದಿBantwal : ಕೌಟುಂಬಿಕ ಕಲಹ; ಪತಿಯೇ ಹಲ್ಲೆ ನಡೆಸಿ ಹೆಂಡತಿಯನ್ನು ಕೊಲೆಗೈದ ಶಂಕೆ, ಆರೋಪಿ ವಶಕ್ಕೆ!

Bantwal : ಕೌಟುಂಬಿಕ ಕಲಹ; ಪತಿಯೇ ಹಲ್ಲೆ ನಡೆಸಿ ಹೆಂಡತಿಯನ್ನು ಕೊಲೆಗೈದ ಶಂಕೆ, ಆರೋಪಿ ವಶಕ್ಕೆ!

Bantwal : ಬಂಟ್ವಾಳ ತಾಲೂಕಿನ ವಾಗ್ಗದಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯೇ ಹಲ್ಲೆ ನಡೆಸಿ 34 ವರ್ಷದ ಮಹಿಳೆಯೊಬ್ಬರು ಶವವಾಗಿರುವ ದಾರುಣ ಘಟನೆ ನಡೆದಿದೆ. ಮೃತರನ್ನು ಸುನಿತಾ ಮಹಾದೇವ ದೇಸಂಗಿ (34) ಎಂದು ಗುರುತಿಸಲಾಗಿದೆ. ಈ ದಂಪತಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಮೂಲದವರಾಗಿದ್ದು, ಬಂಟ್ವಾಳದ ವಾಗ್ಗದಲ್ಲಿ ವಾಸವಾಗಿದ್ದರು. ಮೃತರ ಸಹೋದರ ಅರುಣ್ ಮಹಾದೇವ ದೇಸಂಗಿ ನೀಡಿದ ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದಂಪತಿ ನಡುವೆ ಆಗಾಗ ಕೌಟುಂಬಿಕ ವಿಚಾರಕ್ಕೆ ಭಿನ್ನಾಭಿಪ್ರಾಯಗಳಿದ್ದು, ಈ ಹಿಂದೆ ಸಂಬಂಧಿಕರು ಮಧ್ಯಪ್ರಧಾನಿ ನಡೆಸಿ ರಾಜಿ ಮಾಡಿಸಿದ್ದರು. ಹೆರಿಗೆಯ ಬಳಿಕ ಸುನಿತಾ ತಮ್ಮ ತವರು ಮನೆಯಲ್ಲಿದ್ದರು. ಅಕ್ಟೋಬರ್ 4ರಂದು ಪತಿ ಸಂಜೀವ್‌ಕುಮಾರ್ (36) ಆಕೆಯನ್ನು ವಾಪಸ್ ವಾಗ್ಗದ ಮನೆಗೆ ಕರೆದುಕೊಂಡು ಬಂದಿದ್ದನು. ಅಕ್ಟೋಬರ್ 22ರಂದು ರಾತ್ರಿ ಸುನಿತಾ ತನ್ನ ಸಹೋದರನಿಗೆ ಫೋನ್ ಮಾಡಿ, ಪತಿ ತನಗೆ ನಿರಂತರವಾಗಿ ಕಿರುಕುಳ ನೀಡಿ ಹಲ್ಲೆ ಮಾಡುತ್ತಿರುವುದಾಗಿ ಅಳಲು ತೋಡಿಕೊಂಡಿದ್ದರು.

ಮರುದಿನ ಅಂದರೆ ಅಕ್ಟೋಬರ್ 23ರ ಬೆಳಿಗ್ಗೆ ಆರೋಪಿ ಸಂಜೀವ್‌ಕುಮಾರ್ ಸಹೋದರನಿಗೆ ಫೋನ್ ಮಾಡಿ, ಸುನಿತಾ ಆರೋಗ್ಯ ಹದಗೆಟ್ಟಿದೆ ಎಂದು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವುದಾಗಿ ಸುಳ್ಳು ಮಾಹಿತಿ ನೀಡಿದ್ದನು. ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಸುನಿತಾ ಮೃತಪಟ್ಟಿರುವುದು ತಿಳಿದುಬಂದಿದ್ದು, ಶವದ ಮೇಲೆ ಹಲ್ಲೆಯ ಗಾಯಗಳು ಹಾಗೂ ರಕ್ತದ ಕಲೆಗಳು ಪತ್ತೆಯಾಗಿವೆ. ಅಕ್ಟೋಬರ್ 22ರ ರಾತ್ರಿ ಅಥವಾ 23ರ ಮುಂಜಾನೆ ಕೌಟುಂಬಿಕ ಜಗಳದ ವಿಕೋಪದಿಂದ ಪತಿಯೇ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಪೊಲೀಸರು ಆರೋಪಿ ಸಂಜೀವ್‌ಕುಮಾರ್‌ನನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.

ಇದನ್ನು ಓದಿ : Bengaluru : ಜ್ವರಕ್ಕೆಂದು ಆಸ್ಪತ್ರೆಗೆ ಹೋದ 57 ದಿನಗಳ ಹಸುಗೂಸಿನ ಕಾಲ್ಬೆರಳುಗಳೇ ಕಟ್! ವೈದ್ಯರ ನಿರ್ಲಕ್ಷ್ಯಕ್ಕೆ ಪೋಷಕರ ಆಕ್ರೋಶ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments