Homeತಾಜಾ ಸುದ್ದಿGermany Fire Accident : ತಾಯ್ನಾಡಿಗೆ ತಲುಪಿದ ಕೇರಳದ ಮೂವರು ಯುವಕರ ಮೃತದೇಹಗಳು, ಕುಟುಂಬಸ್ಥರ ಆಕ್ರೋಶ

Germany Fire Accident : ತಾಯ್ನಾಡಿಗೆ ತಲುಪಿದ ಕೇರಳದ ಮೂವರು ಯುವಕರ ಮೃತದೇಹಗಳು, ಕುಟುಂಬಸ್ಥರ ಆಕ್ರೋಶ

Germany Fire Accident : ಜರ್ಮನಿಯ ಅಪಾರ್ಟ್‌ಮೆಂಟ್ ಒಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಮೃತಪಟ್ಟಿದ್ದ ಕೇರಳದ ಮೂವರು ಯುವಕರ ಮೃತದೇಹಗಳನ್ನು ಶುಕ್ರವಾರ ತವರಿಗೆ ತರಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಮೃತರನ್ನು ಎರ್ನಾಕುಲಂ ಜಿಲ್ಲೆಯ ಕಳಡಿ ನಿವಾಸಿ ಸಿವಿನ್ ಜಾನಿ (26), ಇಡುಕ್ಕಿ ಜಿಲ್ಲೆಯ ಕತ್ತಪ್ಪನ ಗ್ರಾಮದ ನೋವಾ ಸಾಬು (25) ಹಾಗೂ ಕೊಲ್ಲಂ ಜಿಲ್ಲೆಯ ಚೆಮಕಾಡ್ ಗ್ರಾಮದ ಅಂಜಲಿ ಶೀಲಾ ಜಾಯ್ (27) ಎಂದು ಗುರುತಿಸಲಾಗಿದೆ. ಕಳೆದ ವಾರ ಜರ್ಮನಿಯ ಬೋಚುಮ್‌ನ ಕಟ್ಟಡವೊಂದರಲ್ಲಿ ಸಂಭವಿಸಿದ ಅನಿರೀಕ್ಷಿತ ಅಗ್ನಿ ಅವಘಡದಲ್ಲಿ ಈ ಮೂವರು ದುರ್ಮರಣಕ್ಕೀಡಾಗಿದ್ದರು.

ಶುಕ್ರವಾರ ಮುಂಜಾನೆ ಜಾನಿ ಹಾಗೂ ಜಾಯ್ ಅವರ ಮೃತದೇಹಗಳು ಕೊಚ್ಚಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ತಲುಪಿದವು.ವಿಮಾನ ನಿಲ್ದಾಣದಲ್ಲಿ ಮೃತರ ಸಂಬಂಧಿಕರು ಹಾಗೂ ಸಾರ್ವಜನಿಕ ಪ್ರತಿನಿಧಿಗಳು ಮೃತದೇಹಗಳನ್ನು ಸ್ವೀಕರಿಸಿದರು. ಬಳಿಕ ಆಂಬುಲೆನ್ಸ್ ಮೂಲಕ ಅವುಗಳನ್ನುಯಾವಾ ಊರುಗಳಿಗೆ ಕೊಂಡೊಯ್ಯಲಾಯಿತು. ರಾಜ್ಯ ಸರ್ಕಾರದ ಸಂಸ್ಥೆಯು ಮೃತದೇಹಗಳನ್ನು ಕೇರಳಕ್ಕೆ ತರಲು ಅಗತ್ಯ ವ್ಯವಸ್ಥೆಗಳನ್ನು ಮಾಡಿತ್ತು. ಇದಕ್ಕೂ ಮುನ್ನ, ಮೃತದೇಹಗಳನ್ನು ಕೇರಳಕ್ಕೆ ಕರೆತರುವ ಸಂಪೂರ್ಣ ಖರ್ಚು-ವೆಚ್ಚಗಳನ್ನು ರಾಜ್ಯ ಸರ್ಕಾರವೇ ಭರಿಸಲಿದೆ ಎಂದು ಕೇರಳ ಮುಖ್ಯಮಂತ್ರಿಗಳು ಪ್ರಕಟಿಸಿದ್ದರು. ವಿದೇಶದಲ್ಲಿ ನಡೆದ ಈ ದಾರುಣ ಘಟನೆಯಿಂದ ಮೃತರ ಕುಟುಂಬಸ್ಥರ ಆಕ್ರೋಶ ಹಾಗೂ ಶೋಕ ಮುಗಿಲುಮುಟ್ಟಿದೆ.

ಇದನ್ನು ಓದಿ : Jokatte : ಶಾರ್ಟ್ ಸರ್ಕ್ಯೂಟ್‌ನಿಂದ ಮನೆ ಸಂಪೂರ್ಣ ಹಾನಿ, ಯುವಕನಿಗೆ ಸುಟ್ಟ ಗಾಯ!

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments