Kaup : ಕಾಪು ಸಮೀಪದ ನಿವಾಸಿ ಸಂಜೀವ ಕುಂದರ್ (67) ಮೃತಪಟ್ಟ ದುರ್ದೈವಿ. ಆಗಸ್ಟ್ 26ರಂದು ಮಧ್ಯಾಹ್ನ ಸುಮಾರು 2:30ಕ್ಕೆ ಮನೆಯಲ್ಲಿ ಎಂದಿನಂತೆ ಊಟ ಮಾಡಿದ ಬಳಿಕ ಅವರು ತಮ್ಮ ಕೊಠಡಿಗೆ ತೆರಳಿ ಮಲಗಿದ್ದರು. ಆದರೆ, ಸಂಜೆ 3:30ರ ಸುಮಾರಿಗೆ ಅವರ ಪುತ್ರಿ ಅನುರಾಧ ಅವರು ಕೊಠಡಿಗೆ ತೆರಳಿ ನೋಡಿದಾಗ ಘೋರ ದುರಂತ ಬೆಳಕಿಗೆ ಬಂದಿದೆ.
ಕೊಠಡಿಯಲ್ಲಿದ್ದ ಪ್ಲಾಸ್ಟಿಕ್ ಚೇರ್ ಸಹಾಯದಿಂದ ಮೇಲ್ಛಾವಣಿಯ ಕಬ್ಬಿಣದ ಪಕ್ಕಾಸಿಗೆ ನೈಲಾನ್ ಹಗ್ಗವನ್ನು ಕುತ್ತಿಗೆಗೆ ಕಟ್ಟಿ ಸಂಜೀವ ಕುಂದರ್ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಕಾಪು ಠಾಣಾ ಪೊಲೀಸರು ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಕಾಪು ಪೊಲೀಸ್ ಠಾಣೆಯಲ್ಲಿ ಯುಡಿಆರ್ ಕ್ರಮಾಂಕ 25/2026 ಕಲಂ 194 ಬಿಎನ್‌ಎಸ್‌ಎಸ್ (BNSS) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ವೃದ್ಧರ ಈ ಕಠಿಣ ನಿರ್ಧಾರಕ್ಕೆ ನಿಖರ ಕಾರಣವೇನು ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನು ಓದಿ : Delhi : ಸ್ನೇಹ ನಿರಾಕರಿಸಿದ್ದಕ್ಕೆ 21 ವರ್ಷದ ಮಾಡೆಲ್ ಮುಸ್ಕಾನ್ ಮನೆಗೆ ನುಗ್ಗಿ ಹತ್ಯೆ; ಜಿಮ್ ಟ್ರೇನರ್ ಇಮ್ರಾನ್ ಪರಾರಿ!