Homeತಾಜಾ ಸುದ್ದಿKundapur : ಹಾಲಿನ ಅಂಗಡಿ ಮಾಡಿನ ತಗಡು ಒಡೆದು 1.10 ಲಕ್ಷ ರೂ. ನಗದು ಕಳವು!

Kundapur : ಹಾಲಿನ ಅಂಗಡಿ ಮಾಡಿನ ತಗಡು ಒಡೆದು 1.10 ಲಕ್ಷ ರೂ. ನಗದು ಕಳವು!

ಕುಂದಾಪುರ : ವಡೇರಹೋಬಳಿ ಗ್ರಾಮದ ಬಸ್ರೂರು ಮೂರ್ಕೈನಲ್ಲಿ ಹಾಲಿನ ಅಂಗಡಿಯ ಮಾಡಿನ ತಗಡು ಒಡೆದು ಒಳನುಗ್ಗಿದ ಕಳ್ಳರು 1.10 ಲಕ್ಷ ರೂಪಾಯಿ ನಗದು ಹಣ ದೋಚಿಕೊಂಡು ಪರಾರಿಯಾಗಿರುವ ಘಟನೆ ಸೆಪ್ಟೆಂಬರ್ 6ರ ಮಧ್ಯರಾತ್ರಿ ಸಂಭವಿಸಿದೆ.

ವಡೇರಹೋಬಳಿ ನಿವಾಸಿ ಹಾಗೂ ಅಂಗಡಿ ಮಾಲೀಕ ಸುರೇಶ್‌ ಅವರು ಸೆ. 6ರ ರಾತ್ರಿ 10.30ರ ಸುಮಾರಿಗೆ ಅಂಗಡಿಗೆ ಬೀಗ ಹಾಕಿ ಮನೆಗೆ ತೆರಳಿದ್ದರು. ಸೆ. 7ರ ಬೆಳಿಗ್ಗೆ 6 ಗಂಟೆಗೆ ಅಂಗಡಿ ತೆರೆಯಲು ಬಂದಾಗ, ಮಾಡಿನ ತಗಡು ಒಡೆದಿರುವುದು ಹಾಗೂ ಕ್ಯಾಶ್‌ ಡ್ರಾಯರ್‌ನಲ್ಲಿದ್ದ ಹಣ ಕಾಣೆಯಾಗಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments