Homeತಾಜಾ ಸುದ್ದಿMoodbidri : ಬಟ್ಟೆ ಒಣಗಿಸುವಾಗ ದುರಂತ — ಕರೆಂಟ್ ಶಾಕ್ ತಗುಲಿ ತಾಯಿ, ಮಗ...

Moodbidri : ಬಟ್ಟೆ ಒಣಗಿಸುವಾಗ ದುರಂತ — ಕರೆಂಟ್ ಶಾಕ್ ತಗುಲಿ ತಾಯಿ, ಮಗ ಸಾವು!

Moodbidri : ಮೂಡುಬಿದಿರೆ ತಾಲೂಕಿನ ಪಾಲಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ವರ್ಣಬೆಟ್ಟು ಪ್ರದೇಶದಲ್ಲಿ ನಡೆದ ಆಘಾತಕಾರಿ ವಿದ್ಯುತ್ ಅಪಘಾತದಲ್ಲಿ ತಾಯಿ ಹಾಗೂ ಕಾಲೇಜು ವಿದ್ಯಾರ್ಥಿಯಾದ ಮಗ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ.

ಮೃತರನ್ನು ಮರ್ಸಿ ಮಸ್ಕರೇನಸ್ (45) ಹಾಗೂ ಅವರ ಪುತ್ರ, ಮೂಡುಬಿದಿರೆ ಹೋಲಿ ರೋಸರಿ ಕಾಲೇಜಿನ ವಿದ್ಯಾರ್ಥಿ ಶೋನ್ ಮಸ್ಕರೇನಸ್ (18) ಎಂದು ಗುರುತಿಸಲಾಗಿದೆ.

ಗುರುವಾರ ಬೆಳಗ್ಗೆ ಶೋನ್ ಅವರು ಮನೆಯಲ್ಲಿ ಬಟ್ಟೆ ಒಣಗಿಸಲು ಹಾಕಿದ್ದ ತಂತಿಯ ಬಳಿ ತೆರಳಿದ್ದ ವೇಳೆ ಈ ಅನಾಹುತ ಸಂಭವಿಸಿದೆ. ಬಟ್ಟೆ ಹಾಕುವ ತಂತಿಗೆ ಆಕಸ್ಮಿಕವಾಗಿ ಹೈಟೆನ್ಷನ್ ವಿದ್ಯುತ್ ತಂತಿ ಸ್ಪರ್ಶಿಸಿ, ಅಪಾರ ಪ್ರಮಾಣದ ವಿದ್ಯುತ್ ಪ್ರವಹಿಸಿತ್ತು ಎನ್ನಲಾಗಿದೆ.

ವಿದ್ಯುತ್ ಪ್ರವಾಹಕ್ಕೆ ಸಿಲುಕಿ ಒದ್ದಾಡುತ್ತಿದ್ದ ಮಗನನ್ನು ರಕ್ಷಿಸಲು ಪಕ್ಕದಲ್ಲೇ ಇದ್ದ ತಾಯಿ ಮರ್ಸಿ ಧಾವಿಸಿದ್ದಾರೆ. ಆದರೆ, ಮಗನನ್ನು ಉಳಿಸಲು ಹೋದ ತಾಯಿಗೂ ವಿದ್ಯುತ್ ಆಘಾತ ತಗುಲಿ ಇಬ್ಬರೂ ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ.

ಬೆಳಗ್ಗೆ ಸುಮಾರು 7ರಿಂದ 8ರ ಸುಮಾರಿಗೆ ತೋಟದ ಕೆಲಸಕ್ಕೆ ಆಗಮಿಸಿದ ಕಾರ್ಮಿಕರೊಬ್ಬರು ಈ ದಾರುಣ ದೃಶ್ಯವನ್ನು ಕಂಡು ಸ್ಥಳೀಯರಿಗೆ ತಿಳಿಸಿದ್ದಾರೆ. ವಿಷಯ ತಿಳಿದ ಕೂಡಲೇ ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಇದನ್ನು ಓದಿ : Kadaba : ನಿಂತಿದ್ದ ಗ್ಯಾಸ್ ಟ್ಯಾಂಕರ್‌ಗೆ ಕಾರು ಡಿಕ್ಕಿ — ಪಿಯುಸಿ ವಿದ್ಯಾರ್ಥಿ ಸಾವು!

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments