Homeತಾಜಾ ಸುದ್ದಿKadaba : ನಿಂತಿದ್ದ ಗ್ಯಾಸ್ ಟ್ಯಾಂಕರ್‌ಗೆ ಕಾರು ಡಿಕ್ಕಿ — ಪಿಯುಸಿ ವಿದ್ಯಾರ್ಥಿ ಸಾವು!

Kadaba : ನಿಂತಿದ್ದ ಗ್ಯಾಸ್ ಟ್ಯಾಂಕರ್‌ಗೆ ಕಾರು ಡಿಕ್ಕಿ — ಪಿಯುಸಿ ವಿದ್ಯಾರ್ಥಿ ಸಾವು!

ಕಡಬ, ಅಕ್ಟೋಬರ್ 22: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾರೊಂದು ರಸ್ತೆ ಬದಿ ನಿಲ್ಲಿಸಿದ್ದ ಗ್ಯಾಸ್ ಟ್ಯಾಂಕರ್‌ಗೆ ಡಿಕ್ಕಿಹೊಡೆದ ಪರಿಣಾಮ, ಪ್ರಥಮ ಪಿಯುಸಿ ವಿದ್ಯಾರ್ಥಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಈ ದುರ್ಘಟನೆಯು ಗುರುವಾರ ಮುಂಜಾನೆ ರಾಷ್ಟ್ರೀಯ ಹೆದ್ದಾರಿಯ ನೆಲ್ಯಾಡಿಯ ಕರ್ಬಾಸಂಕ ಬಳಿ ಸಂಭವಿಸಿದೆ ಎಂದು ವರದಿಯಾಗಿದೆ.

ಮೃತರನ್ನು ನೆಲ್ಯಾಡಿಯಲ್ಲಿ ‘ಫ್ಲವರ್ಸ್ ಹೋಟೆಲ್’ ನಡೆಸುತ್ತಿರುವ ಜೋಜೋ ಟಿ. ಜಾರ್ಜ್ ಅವರ ಪುತ್ರ, 16 ವರ್ಷದ ಅಶ್ವಿನ್ ಜೋಜೋ ಜಾರ್ಜ್ ಎಂದು ಗುರುತಿಸಲಾಗಿದೆ.

ಅಶ್ವಿನ್ ಅವರು ಪುತ್ತೂರಿನ ಕಾಲೇಜೊಂದರಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು.

ಢಿಕ್ಕಿಯ ತೀವ್ರತೆ ಎಷ್ಟಿತ್ತೆಂದರೆ, ಗಂಭೀರ ಗಾಯಗೊಂಡ ಅಶ್ವಿನ್ ಅವರು ಸ್ಥಳದಲ್ಲೇ ಕೊನೆಯೊಸಿರೆಳೆದಿದ್ದಾರೆ.

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments