Karkala : ಕಾರ್ಕಳ ತಾಲೂಕಿನ ಬೆಳ್ಮಣ್ ಗ್ರಾಮದ ಮುಂಡ್ಕೂರು ರಸ್ತೆಯಲ್ಲಿರುವ ಆಲ್ಬರ್ಟ್ ಎಡ್ವರ್ಡ್ ಕಾರ್ಡೋಜ ಎಂಬವರ ಮನೆಯಲ್ಲಿ ಕಳೆದ ಕೆಲ ವರ್ಷಗಳಿಂದ ಮನೆಗೆಲಸ ಮಾಡಿಕೊಂಡಿದ್ದ ಯುವತಿಯೊಬ್ಬಳು ನೇಣಿಗೆ ಶರಣಾಗಿರುವ ದಾರುಣ ಘಟನೆ ಸಂಭವಿಸಿದೆ.
ಮೃತರನ್ನು ಬಿಜಾಪುರ ಮೂಲದ ಲಕ್ಷ್ಮೀ ಹಿರೇಮಠ (22) ಎಂದು ಗುರುತಿಸಲಾಗಿದೆ. ಮದುವೆಯಾಗಿ ಒಂದು ಮಗುವಿದ್ದ ಲಕ್ಷ್ಮೀ, ಇತ್ತೀಚೆಗೆ ಮತ್ತೊಬ್ಬ ಯುವಕನೊಂದಿಗೆ ತೆರಳಿ ಬೆಂಗಳೂರಿನಲ್ಲಿ ನೆಲೆಸಿದ್ದರು. ಆದರೆ, ಊರಿಗೆ ವಾಪಸ್ ಬರುವಂತೆ ಆತನಲ್ಲಿ ವಿನಂತಿಸಿಕೊಂಡರೂ ಆತ ಒಪ್ಪದಿದ್ದಾಗ, ಮತ್ತೆ ಕಾರ್ಕಳಕ್ಕೆ ಮರಳಿ ಅದೇ ಮನೆಯಲ್ಲಿ ಕೆಲಸ ಮುಂದುವರಿಸಿದ್ದರು.
ಪತಿಯಿಂದ ದೂರವಾದ ನೋವಿನಲ್ಲಿದ್ದ ಲಕ್ಷ್ಮೀ, ತೀವ್ರ ಮನನೊಂದು ಸೋಮವಾರ ಸಂಜೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಘಟನೆ ಸಂಬಂಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನು ಓದಿ : Kodagu car accident : ಕೆರೆಗೆ ಬಿದ್ದ ಕಾರು ; ಕಂದಮ್ಮ ಸೇರಿ ಒಂದೇ ಕುಟುಂಬದ ಮೂವರು ದಾರುಣ ಸಾವು!