Homeತಾಜಾ ಸುದ್ದಿBengaluru : ವಿಧಾನಸೌಧ ಸ್ಫೋಟಿಸಿದಂತೆ AI ವೀಡಿಯೊ ಪೋಸ್ಟ್ — ಆರೋಪಿ ಬಂಧನ!

Bengaluru : ವಿಧಾನಸೌಧ ಸ್ಫೋಟಿಸಿದಂತೆ AI ವೀಡಿಯೊ ಪೋಸ್ಟ್ — ಆರೋಪಿ ಬಂಧನ!

ಬೆಂಗಳೂರು: ‘ವಿಧಾನಸೌಧವನ್ನು ಬಾಂಬ್ ಇಟ್ಟು ಉಡಾಯಿಸಿದೆ‘ ಎಂದು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ವೀಡಿಯೊ ತಯಾರಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಆರೋಪಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಬಿಹಾರ್ ಮೂಲದ ಹರುರತ್ ಅಲಿ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.

AI ತಂತ್ರಜ್ಞಾನ ಬಳಸಿ ವಿಧಾನಸೌಧವನ್ನು ಬಾಂಬ್ ಮೂಲಕ ಸ್ಫೋಟಿಸುವಂತೆ ವೀಡಿಯೊ ಮಾಡಿ ‘Jnx king Hg’ ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದ ಆರೋಪಿ, ‘ವಿಧಾನಸೌಧ ಉಡಾ ದಿಯಾ’ ಎಂಬ ಶೀರ್ಷಿಕೆ ನೀಡಿದ್ದನು.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಈ ಕುರಿತು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಾರ್ವಜನಿಕರಿಗೆ ಭಯ ಹುಟ್ಟಿಸುವ ರೀತಿಯ ವೀಡಿಯೊ ಇದೆ ಎಂಬ ಆರೋಪದಡಿ ಕಾನೂನು ಕ್ರಮ ಜರುಗಿಸಲಾಗಿದೆ.

ತನಿಖೆ ನಡೆಸಿದ ಪೊಲೀಸರು ಬೆಂಗಳೂರಿನ ಪೈಪ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಹರುರತ್ ಅಲಿಯನ್ನು ವಶಕ್ಕೆ ಪಡೆದು ಬಂಧಿಸಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನು ಓದಿ : Moodbidri : ಬಟ್ಟೆ ಒಣಗಿಸುವಾಗ ದುರಂತ — ಕರೆಂಟ್ ಶಾಕ್ ತಗುಲಿ ತಾಯಿ, ಮಗ ಸಾವು!

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments