Home ತಾಜಾ ಸುದ್ದಿ Ali Larijani : ಇರಾನ್‌ನ ಪ್ರಭಾವಿ ನಾಯಕ ಅಲಿ ಲಾರಿಜಾನಿ ಮೇಲೆ ಇಸ್ರೇಲ್ ಅಟ್ಯಾಕ್! ...

    Ali Larijani : ಇರಾನ್‌ನ ಪ್ರಭಾವಿ ನಾಯಕ ಅಲಿ ಲಾರಿಜಾನಿ ಮೇಲೆ ಇಸ್ರೇಲ್ ಅಟ್ಯಾಕ್! ಹತ್ಯೆಯೋ ಅಥವಾ ಗಾಯವೋ?

    0
    42
    Ali Larijani: Israeli attack on Iran's influential leader Ali Larijani! Assassination or injury?

    ಇರಾನ್‌ : ಇಸ್ರೇಲ್ ಸೇನೆಯು ಇರಾನ್‌ನ ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯದರ್ಶಿ ಅಲಿ ಲಾರಿಜಾನಿ (Ali Larijani) ಅವರನ್ನು ಗುರಿಯಾಗಿಸಿಕೊಂಡು ಭೀಕರ ವೈಮಾನಿಕ ದಾಳಿ ನಡೆಸಿದೆ ಎಂದು ವರದಿಯಾಗಿದೆ. ಸೋಮವಾರ ತಡರಾತ್ರಿ ನಡೆದ ಈ ಕಾರ್ಯಾಚರಣೆಯಲ್ಲಿ ಲಾರಿಜಾನಿ ಅವರು ಮೃತಪಟ್ಟಿದ್ದಾರೆಯೇ ಅಥವಾ ತೀವ್ರವಾಗಿ ಗಾಯಗೊಂಡಿದ್ದಾರೆಯೇ ಎಂಬುದು ಇನ್ನು ಸ್ಪಷ್ಟವಾಗಿಲ್ಲ.

    ಇರಾನ್ ಮೌನ: ಈ ಸ್ಫೋಟಕ ವರದಿಯ ಬಗ್ಗೆ ಇರಾನ್ ಸರ್ಕಾರ ಇದುವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಅಲಿ ಲಾರಿಜಾನಿ ಅವರು ದಾಳಿಗೆ ಒಂದು ದಿನ ಮೊದಲಷ್ಟೇ “ಇರಾನ್ ಅಮೆರಿಕ ಮತ್ತು ಇಸ್ರೇಲ್ ವಿರುದ್ಧದ ಹೋರಾಟದಲ್ಲಿ ದೃಢವಾಗಿ ನಿಲ್ಲಲಿದೆ” ಎಂದು ಮುಸ್ಲಿಂ ಜಗತ್ತಿಗೆ ಸಂದೇಶ ನೀಡಿದ್ದರು. ಅಲ್ಲದೆ, ಇರಾನ್ ಮೇಲೆ ನಡೆಯುತ್ತಿರುವ ಆಕ್ರಮಣವನ್ನು ಎದುರಿಸಲು ಮುಸ್ಲಿಂ ರಾಷ್ಟ್ರಗಳು ಒಂದಾಗಬೇಕು ಎಂದು ಕರೆ ನೀಡಿದ್ದರು.

    ಹಿನ್ನೆಲೆ: ಇತ್ತೀಚಿನ ದಿನಗಳಲ್ಲಿ ಇರಾನ್‌ನ ಪ್ರಮುಖ ನಾಯಕರನ್ನು ಇಸ್ರೇಲ್ ಸರಣಿಯಾಗಿ ಗುರಿಯಾಗಿಸುತ್ತಿದೆ. ಅಲಿ ಲಾರಿಜಾನಿ ಅವರು ಇರಾನ್‌ನ ಕಾರ್ಯತಂತ್ರಗಳನ್ನು ರೂಪಿಸುವಲ್ಲಿ ಅತ್ಯಂತ ಪ್ರಮುಖ ವ್ಯಕ್ತಿಯಾಗಿದ್ದರು. ಅವರ ಮೇಲಿನ ಈ ದಾಳಿಯು ಇರಾನ್‌ನ ಭದ್ರತಾ ವ್ಯವಸ್ಥೆಗೆ ಬಿದ್ದ ದೊಡ್ಡ ಹೊಡೆತ ಎಂದು ವಿಶ್ಲೇಷಿಸಲಾಗುತ್ತಿದೆ.

    LEAVE A REPLY

    Please enter your comment!
    Please enter your name here

    error: Content is protected !!