Thursday, April 2, 2026
Homeತಾಜಾ ಸುದ್ದಿIran Hormuz Toll : ಹಡಗುಗಳ ಸಂಚಾರಕ್ಕೆ ₹18.8 ಕೋಟಿ ಟ್ಯಾಕ್ಸ್; ಟ್ರಂಪ್ ಎಚ್ಚರಿಕೆಗೆ ಪೆಜೆಶ್ಕಿಯಾನ್...

Iran Hormuz Toll : ಹಡಗುಗಳ ಸಂಚಾರಕ್ಕೆ ₹18.8 ಕೋಟಿ ಟ್ಯಾಕ್ಸ್; ಟ್ರಂಪ್ ಎಚ್ಚರಿಕೆಗೆ ಪೆಜೆಶ್ಕಿಯಾನ್ ಮಾಸ್ಟರ್ ಪ್ಲಾನ್!

ತೆಹ್ರಾನ್ : ಇರಾನ್ ಮತ್ತು ಅಮೆರಿಕ-ಇಸ್ರೇಲ್ ನಡುವಿನ ಯುದ್ಧವು ಈಗ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ದೊಡ್ಡ ಭೂಕಂಪ ಸೃಷ್ಟಿಸಿದೆ. ವಿಶ್ವದ ಅತ್ಯಂತ ಪ್ರಮುಖ ತೈಲ ಸಾಗಾಣಿಕಾ ಮಾರ್ಗವಾದ ‘ಹಾರ್ಮುಜ್ ಜಲಸಂಧಿ’ಯನ್ನು (Strait of Hormuz) ತನ್ನ ಸಂಪೂರ್ಣ ನಿಯಂತ್ರಣಕ್ಕೆ ಪಡೆದಿರುವ ಇರಾನ್, ಅಲ್ಲಿ ಸಂಚರಿಸುವ ಆಯ್ದ ವಾಣಿಜ್ಯ ಹಡಗುಗಳ ಮೇಲೆ ಭಾರಿ ಮೊತ್ತದ ಸಂಚಾರ ಶುಲ್ಕವನ್ನು ವಿಧಿಸಲು ಆರಂಭಿಸಿದೆ. ಇರಾನ್ ಸಂಸತ್ತಿನ ರಾಷ್ಟ್ರೀಯ ಭದ್ರತಾ ಸಮಿತಿಯ ಸದಸ್ಯ ಅಲಾದೀನ್ ಬೊರೌಜೆರ್ಡಿ ನೀಡಿರುವ ಮಾಹಿತಿಯಂತೆ, ಈ ಮಾರ್ಗದ ಮೂಲಕ ಹಾದುಹೋಗುವ ಹಡಗುಗಳು ಇರಾನ್‌ಗೆ ಸುಮಾರು 2 ಮಿಲಿಯನ್ ಡಾಲರ್ (ಅಂದಾಜು ₹18.8 ಕೋಟಿ) ಶುಲ್ಕವನ್ನು ಪಾವತಿಸುವುದು ಈಗ ಕಡ್ಡಾಯವಾಗಿದೆ. ಯುದ್ಧದ ವೆಚ್ಚವನ್ನು ಸರಿದೂಗಿಸಲು ಮತ್ತು ಜಾಗತಿಕ ಮಟ್ಟದಲ್ಲಿ ತನ್ನ ಶಕ್ತಿಯನ್ನು ಪ್ರದರ್ಶಿಸಲು ಇರಾನ್ ಈ ಕಠಿಣ ಹೆಜ್ಜೆ ಇಟ್ಟಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನೀಡಿದ್ದ ಎಚ್ಚರಿಕೆಗೆ ಪ್ರತಿಯಾಗಿ ಇರಾನ್ ಈ ತಂತ್ರ ರೂಪಿಸಿದೆ. “ಹಾರ್ಮುಜ್ ಜಲಸಂಧಿಯನ್ನು ತಕ್ಷಣವೇ ತೆರೆಯದಿದ್ದರೆ ಇರಾನ್‌ನ ಅತಿದೊಡ್ಡ ವಿದ್ಯುತ್ ಸ್ಥಾವರಗಳನ್ನು ನಾಶಪಡಿಸುವುದಾಗಿ” ಟ್ರಂಪ್ ಬೆದರಿಕೆ ಹಾಕಿದ್ದರು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್, “ಹಾರ್ಮುಜ್ ಜಲಸಂಧಿಯು ಎಲ್ಲರಿಗೂ ಮುಕ್ತವಾಗಿದೆ, ಆದರೆ ನಮ್ಮ ದೇಶದ ಮೇಲೆ ದಾಳಿ ಮಾಡುವ ಶತ್ರುಗಳಿಗೆ ಮಾತ್ರ ಇಲ್ಲಿ ಪ್ರವೇಶವಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ಅಷ್ಟೇ ಅಲ್ಲದೆ, ಇಸ್ರೇಲ್‌ನ ಇಂಧನ ಮೂಲಸೌಕರ್ಯಗಳು ತಮ್ಮ ವ್ಯಾಪ್ತಿಯಲ್ಲಿದ್ದು, ಕೇವಲ ಒಂದು ದಿನದಲ್ಲಿ ಅವುಗಳನ್ನು ಧೂಳಿಪಟ ಮಾಡಬಲ್ಲ ಶಕ್ತಿ ಇರಾನ್ಸಿಗಿದೆ ಎಂದು ಇರಾನ್ ನಾಯಕರು ಎಚ್ಚರಿಸಿದ್ದಾರೆ.

ವಿಶ್ವದ ಒಟ್ಟು ತೈಲ ಪೂರೈಕೆಯ ಸುಮಾರು ಐದನೇ ಒಂದು ಭಾಗ (ಶೇ. 20) ಇದೇ ಜಲಸಂಧಿಯ ಮೂಲಕ ಸಾಗುವುದರಿಂದ, ಇರಾನ್‌ನ ಈ ನಿರ್ಧಾರವು ಅಂತರಾಷ್ಟ್ರೀಯ ತೈಲ ಮಾರುಕಟ್ಟೆಯನ್ನು ಸಂಕಷ್ಟಕ್ಕೆ ತಳ್ಳಿದೆ. ಈಗಾಗಲೇ ಹಡಗುಗಳ ಮೇಲಿನ ದಾಳಿಯಿಂದಾಗಿ ಟ್ಯಾಂಕರ್ ಸಂಚಾರ ಬಹುತೇಕ ಸ್ಥಗಿತಗೊಂಡಿದ್ದು, ಈಗ ವಿಧಿಸಲಾಗಿರುವ ಭಾರಿ ಶುಲ್ಕವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಜಾಗತಿಕವಾಗಿ ಗಗನಕ್ಕೇರಲು ಕಾರಣವಾಗಲಿದೆ. ಅಮೆರಿಕವು ತನ್ನ ಬೆದರಿಕೆಯನ್ನು ಮುಂದುವರಿಸಿದರೆ ಹಾರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಬಂದ್ ಮಾಡುವುದಾಗಿ ಇರಾನ್ ಎಚ್ಚರಿಸಿದ್ದು, ಇದು ಜಾಗತಿಕ ಆರ್ಥಿಕತೆಗೆ ದೊಡ್ಡ ಹೊಡೆತ ನೀಡುವ ಮುನ್ಸೂಚನೆ ನೀಡಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!