Monday, May 11, 2026
Homeತಾಜಾ ಸುದ್ದಿKerala KSRTC gender ticketing : ಕೇರಳ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಇಂದಿನಿಂದ 'ಲಿಂಗಾಧಾರಿತ ಟಿಕೆಟ್' ಜಾರಿ!

Kerala KSRTC gender ticketing : ಕೇರಳ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಇಂದಿನಿಂದ ‘ಲಿಂಗಾಧಾರಿತ ಟಿಕೆಟ್’ ಜಾರಿ!

ತಿರುವನಂತಪುರಂ : ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (KSRTC) ಶನಿವಾರದಿಂದ ರಾಜ್ಯಾದ್ಯಂತ ಕಾರ್ಯನಿರ್ವಹಿಸುವ ತನ್ನ ಎಲ್ಲಾ ಬಸ್‌ಗಳಲ್ಲಿ ‘ಲಿಂಗಾಧಾರಿತ ಟಿಕೆಟಿಂಗ್’ (Gender Ticketing) ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಈ ಕುರಿತು ಶುಕ್ರವಾರವೇ ಸುತ್ತೋಲೆ ಹೊರಡಿಸಲಾಗಿದ್ದು, ಬಸ್‌ನಲ್ಲಿ ಪ್ರಯಾಣಿಸುವವರು ಮಹಿಳೆಯೋ, ಪುರುಷನೋ ಅಥವಾ ಮಗುವೋ ಎಂಬುದನ್ನು ಟಿಕೆಟ್‌ನಲ್ಲಿ ನಮೂದಿಸುವುದು ಇಂದಿನಿಂದ ಕಡ್ಡಾಯವಾಗಿದೆ.

ಈ  ಹೊಸ ವ್ಯವಸ್ಥೆಯನ್ನು ಸುಗಮಗೊಳಿಸಲು ವಿದ್ಯುನ್ಮಾನ ಟಿಕೆಟ್ ಯಂತ್ರಗಳನ್ನು (ETM) ನವೀಕರಿಸಲಾಗಿದೆ. ಇನ್ನು ಮುಂದೆ ನಿರ್ವಾಹಕರು ಟಿಕೆಟ್ ನೀಡುವಾಗ ಪ್ರಯಾಣಿಕರ ಲಿಂಗದ ವರ್ಗವನ್ನು ಇಟಿಎಂನಲ್ಲಿ ದಾಖಲಿಸಬೇಕಾಗುತ್ತದೆ. ಟಿಕೆಟ್ ಮುದ್ರಿತಗೊಂಡ ನಂತರ ಅದರಲ್ಲಿ ಪ್ರಯಾಣಿಕರ ವರ್ಗವೂ ಸ್ಪಷ್ಟವಾಗಿ ಕಾಣಿಸಿಕೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ 140 ಸ್ಥಾನಗಳ ಪೈಕಿ 102 ಸ್ಥಾನಗಳನ್ನು ಗೆದ್ದಿರುವ ಯುಡಿಎಫ್ (UDF) ಮೈತ್ರಿಕೂಟವು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಭರವಸೆ ನೀಡಿತ್ತು. ಕಾಂಗ್ರೆಸ್ ಪಕ್ಷವು ಮುಂದಿನ ಮುಖ್ಯಮಂತ್ರಿಯನ್ನು ಅಂತಿಮಗೊಳಿಸಿದ ನಂತರ ಸರ್ಕಾರ ರಚನೆಯಾಗಲಿದ್ದು, ಈ ಉಚಿತ ಪ್ರಯಾಣದ ಭರವಸೆಯನ್ನು ಜಾರಿಗೆ ತರುವ ಮುನ್ನ ಪ್ರತಿದಿನ ಎಷ್ಟು ಮಹಿಳೆಯರು ಪ್ರಯಾಣಿಸುತ್ತಾರೆ ಎಂಬುದನ್ನು ಅಂದಾಜಿಸಲು ಈ ಲಿಂಗಾಧಾರಿತ ಟಿಕೆಟಿಂಗ್ ವ್ಯವಸ್ಥೆಯನ್ನು ತರಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಆದರೆ, ಈ ಹೊಸ ಪ್ರಕ್ರಿಯೆಯಿಂದಾಗಿ ಟಿಕೆಟ್ ನೀಡಲು ಹೆಚ್ಚಿನ ಸಮಯ ವ್ಯಯವಾಗುತ್ತಿದೆ ಎಂದು ಕೆಲವು ನಿರ್ವಾಹಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಬಸ್‌ಗಳಲ್ಲಿ ಜನದಟ್ಟಣೆ ಹೆಚ್ಚಿರುವ ಸಮಯದಲ್ಲಿ ಪ್ರತಿಯೊಬ್ಬರ ಲಿಂಗದ ವಿವರ ದಾಖಲಿಸುವುದು ಸವಾಲಿನ ಕೆಲಸವಾಗಿದೆ ಎಂಬುದು ಅವರ ಅಳಲಾಗಿದೆ.

ಇದನ್ನು ಓದಿ : Sringeri postal ballot controversy : ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ರಾಜೇಗೌಡ; ಮೇ 11ಕ್ಕೆ ತುರ್ತು ವಿಚಾರಣೆ ನಿಗದಿ! ಶಾಸಕ ಸ್ಥಾನಕ್ಕೆ ಸಂಚಕಾರ ತರುತ್ತಾ ಅಂಚೆ ಮತಗಳ ಎಣಿಕೆ?

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!