Thursday, April 2, 2026
Homeತಾಜಾ ಸುದ್ದಿDay 13 of the Iran War : 1,300 ನಾಗರಿಕರ ಸಾವು! ತೈಲ...

Day 13 of the Iran War : 1,300 ನಾಗರಿಕರ ಸಾವು! ತೈಲ ಬೆಲೆ ಬ್ಯಾರೆಲ್‌ಗೆ $100 ದಾಟುವ ಭೀತಿ! ವಿಶ್ವ ಆರ್ಥಿಕತೆಗೆ ಭಾರಿ ಪೆಟ್ಟು!

 Day 13 of the Iran War : 1,300ಕ್ಕೂ ಹೆಚ್ಚು ನಾಗರಿಕರ ಸಾವು! ತೈಲ ಬೆಲೆ ಬ್ಯಾರೆಲ್‌ಗೆ 100 ಡಾಲರ್ ದಾಟುವ ಭೀತಿ!

ನಾಗರಿಕರ ಸಾವು-ನೋವು: ಫೆಬ್ರವರಿ 28 ರಿಂದ ಆರಂಭವಾದ ಅಮೆರಿಕ ಮತ್ತು ಇಸ್ರೇಲ್ ದಾಳಿಯಲ್ಲಿ ಇರಾನ್‌ನ ಕನಿಷ್ಠ 1,348 ನಾಗರಿಕರು ಮೃತಪಟ್ಟಿದ್ದಾರೆ ಮತ್ತು 17,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವಿಶ್ವಸಂಸ್ಥೆಗೆ ಇರಾನ್ ಪ್ರತಿನಿಧಿ ಅಮೀರ್ ಸಯೀದ್ ಇರವಾನಿ ತಿಳಿಸಿದ್ದಾರೆ. ಇಂಜುರಿಗೊಂಡವರಲ್ಲಿ 1,100 ಕ್ಕೂ ಹೆಚ್ಚು ಮಕ್ಕಳು ಸೇರಿದ್ದಾರೆ ಎಂದು ಯುನಿಸೆಫ್ (UNICEF) ವರದಿ ಮಾಡಿದೆ.

ಇರಾನ್‌ನ ಪ್ರಮುಖ ಬೆಳವಣಿಗೆಗಳು:

  • ಪರಿಸ್ಥಿತಿ ಉದ್ವಿಗ್ನ: ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC), ಹೆಜ್ಬೊಲ್ಲಾ ಜೊತೆಗೂಡಿ ಇಸ್ರೇಲ್ ಮೇಲೆ ಜಂಟಿ ಕ್ಷಿಪಣಿ ದಾಳಿ ನಡೆಸಿದೆ.
  • ಸೈಬರ್ ಅಟ್ಯಾಕ್: ಹ್ಯಾಕಿಂಗ್ ಗುಂಪು ‘ಹಂಡಾಲ’ ಅಮೆರಿಕದ ವೈದ್ಯಕೀಯ ಸಂಸ್ಥೆ ‘ಸ್ಟ್ರೈಕರ್’ನಿಂದ 50TB ಡೇಟಾ ಕಳವು ಮಾಡಿದೆ.
  • ವಾರ್ನಿಂಗ್: ಇರಾನ್‌ನ ಸುಪ್ರೀಂ ಲೀಡರ್ ಮೋಜ್ಟಾಬಾ ಖಮೇನಿ ಅವರ ಸಲಹೆಗಾರರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು “ಸೈತಾನ” ಎಂದು ಕರೆದು ಕಿಡಿಕಾರಿದ್ದಾರೆ.

ಗಲ್ಫ್ ರಾಷ್ಟ್ರಗಳ ಸ್ಥಿತಿ:

  • ಯುಎಇ: ಇರಾನ್ ಉಡಾಯಿಸಿದ 6 ಬ್ಯಾಲಿಸ್ಟಿಕ್ ಕ್ಷಿಪಣಿಗಳು, 7 ಕ್ರೂಸ್ ಕ್ಷಿಪಣಿಗಳು ಮತ್ತು 39 ಡ್ರೋನ್‌ಗಳನ್ನು ಯುಎಇ ತಡೆಹಿಡಿದಿದೆ.
  • ಕುವೈತ್: ಇರಾನ್‌ನ ಡ್ರೋನ್‌ಗಳನ್ನು ಹೊಡೆದುರುಳಿಸಿದಾಗ ಉಂಟಾದ ಅವಶೇಷಗಳಿಂದ ಕುವೈತ್‌ನ 6 ವಿದ್ಯುತ್ ತಂತಿಗಳು ಹಾನಿಯಾಗಿದ್ದು, ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.
  • ಓಮನ್: ಇರಾನ್ ದಾಳಿಗೆ ಒಳಗಾಗಿದ್ದ ಥಾಯ್ಲೆಂಡ್ ಹಡಗಿನ 20 ಸಿಬ್ಬಂದಿಗಳನ್ನು ಓಮನ್ ನೌಕಾಪಡೆ ರಕ್ಷಿಸಿದೆ.

ಅಮೆರಿಕ ಮತ್ತು ಇಸ್ರೇಲ್ ನಿಲುವು:

  • ಟ್ರಂಪ್ ಹೇಳಿಕೆ: ಅಮೆರಿಕ ಈಗಾಗಲೇ ಇರಾನ್ ಮೇಲೆ ಗೆದ್ದಿದೆ ಎಂದು ಟ್ರಂಪ್ ಹೇಳಿದ್ದಾರೆ. “ಮೊದಲ ಗಂಟೆಯಲ್ಲೇ ಯುದ್ಧ ಮುಗಿದಿದೆ” ಎಂದು ಅವರು ಪ್ರತಿಪಾದಿಸಿದ್ದಾರೆ.
  • ಇಸ್ರೇಲ್ ಪ್ರತಿಜ್ಞೆ: ಯುದ್ಧದ ಗುರಿಗಳನ್ನು ಸಾಧಿಸುವವರೆಗೆ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಹೇಳಿದ್ದಾರೆ.

ಜಾಗತಿಕ ಆರ್ಥಿಕತೆ ಮೇಲೆ ಹೊಡೆತ: ಯುದ್ಧದಿಂದಾಗಿ ತೈಲ ಬೆಲೆ ಬ್ಯಾರೆಲ್‌ಗೆ 100 ಡಾಲರ್ ತಲುಪಿದೆ. ಮಾರುಕಟ್ಟೆಯನ್ನು ಶಾಂತಗೊಳಿಸಲು ಅಂತರರಾಷ್ಟ್ರೀಯ ಇಂಧನ ಸಂಸ್ಥೆ (IEA) ದಾಖಲೆಯ 400 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲವನ್ನು ಬಿಡುಗಡೆ ಮಾಡಲು ಮುಂದಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!