ಮುಂಬೈ : ಆದಿತ್ಯ ಧರ್ ನಿರ್ದೇಶನದ ಈ ಚಿತ್ರವು ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆಯುವ ಮುನ್ಸೂಚನೆ ನೀಡಿದೆ. ಚಿತ್ರದ ಪ್ರಿವ್ಯೂ ಶೋಗಳ ಮೂಲಕವೇ ಇದು ಜಾಗತಿಕವಾಗಿ 75 ಕೋಟಿ ರೂ. ಗಳಿಕೆ ಮಾಡಿದೆ. ಮೊದಲ ದಿನದ ಅಂತ್ಯಕ್ಕೆ ಈ ಸಿನಿಮಾ ಭಾರತದಲ್ಲಿ 100 ಕೋಟಿ ರೂ. ಗಡಿ ದಾಟುವ ನಿರೀಕ್ಷೆಯಿದೆ. ಇಂದು ಸಂಜೆ 4 ಗಂಟೆಯವರೆಗೆ ಸುಮಾರು 46 ಕೋಟಿ ರೂ. ಗಳಿಸಿದೆ ಎಂದು ವರದಿಯಾಗಿದೆ.
ವಿಮರ್ಶೆ ಮತ್ತು ಪ್ರತಿಕ್ರಿಯೆ: ಸಿನಿಮಾ ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರವು ಸುಮಾರು 4 ಗಂಟೆಗಳಷ್ಟು ಸುದೀರ್ಘವಾಗಿದ್ದು, ಮೊದಲ ಭಾಗದಷ್ಟು ಮಜಾ ನೀಡುವುದಿಲ್ಲ ಎಂದು ಕೆಲವು ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ. ಆದರೂ ರಣವೀರ್ ಸಿಂಗ್ ಅವರ ಆಕ್ಷನ್ ಮತ್ತು ಮಾಸ್ ಎಲಿಮೆಂಟ್ಸ್‌ಗಳಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಈ ಚಿತ್ರವನ್ನು “ಶೋಲೆ X 100” ಎಂದು ಬಣ್ಣಿಸಿದ್ದಾರೆ.
ವಿವಾದ ಮತ್ತು ಶೋ ರದ್ದು: ದಕ್ಷಿಣ ಭಾರತದಲ್ಲಿ ಚಿತ್ರದ ಕೆಲವು ಬೆಳಗಿನ ಪ್ರದರ್ಶನಗಳು ರದ್ದಾಗಿವೆ. ಇದರಿಂದ ಆಕ್ರೋಶಗೊಂಡ ಪ್ರೇಕ್ಷಕರಿಗೆ ಹಣ ಹಿಂತಿರುಗಿಸಲು (Refund) ಚಿತ್ರಮಂದಿರಗಳು ಮುಂದಾಗಿವೆ. ಇದು ಚಿತ್ರದ ಮೊದಲ ದಿನದ ಕಲೆಕ್ಷನ್ ಮೇಲೆ ಸ್ವಲ್ಪ ಪರಿಣಾಮ ಬೀರುವ ಸಾಧ್ಯತೆಯಿದೆ.

