$15 ಮಿಲಿಯನ್ ಬೌಂಟಿಯ El Mencho ಮೆಕ್ಸಿಕೋ ಕಾರ್ಯಾಚರಣೆಯಲ್ಲಿ ಹತ — ಮಾಜಿ ಪೊಲೀಸ್‌ನಿಂದ ವಿಶ್ವದ ಅತ್ಯಂತ ಖ್ಯಾತ ಡ್ರಗ್ ಲಾರ್ಡ್ ತನಕ
ಮೆಕ್ಸಿಕೋ ಸಿಟಿ: ಮೆಕ್ಸಿಕೋ ಅತ್ಯಂತ ಅಪಾಯಕಾರಿ ಡ್ರಗ್ ಲಾರ್ಡ್ ಮತ್ತು Jalisco New Generation Cartel (CJNG) ನ ಸಂಸ್ಥಾಪಕ Nemesio Oseguera Cervantes ಅಥವಾ “El Mencho” ಮೆಕ್ಸಿಕೋ ಭದ್ರತಾ ಪಡೆಗಳ ಮಹಾ ಕಾರ್ಯಾಚರಣೆಯಲ್ಲಿ ಶನಿವಾರ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. 59 ವರ್ಷ ವಯಸ್ಸಿನ ಈ ಡ್ರಗ್ ಸಾಮ್ರಾಟ ಪಶ್ಚಿಮ ಮೆಕ್ಸಿಕೋದ Jalisco ರಾಜ್ಯದ Tapalpa ಪಟ್ಟಣದಲ್ಲಿ ಭದ್ರತಾ ಪಡೆಗಳ ಜೊತೆ ನಡೆದ ಸಂಘರ್ಷದಲ್ಲಿ ತೀವ್ರ ಗಾಯಗೊಂಡು ನಂತರ ಮೆಕ್ಸಿಕೋ ಸಿಟಿಗೆ ಏರ್‌ಲಿಫ್ಟ್ ಮಾಡುವಾಗ ಮೃತಪಟ್ಟರು.
El Mencho ಯಾರು?
El Mencho ಅಥವಾ Nemesio Ruben Oseguera Cervantes 1966ರಲ್ಲಿ ಮೆಕ್ಸಿಕೋದ Michoacan ರಾಜ್ಯದ ಒಂದು ಬಡ ಹಳ್ಳಿಯಲ್ಲಿ ಹುಟ್ಟಿದರು. 1980ರ ದಶಕದಲ್ಲಿ ಅಮೆರಿಕಕ್ಕೆ ವಲಸೆ ಹೋದ ಅವರು ಅಲ್ಲಿ ಹೆರಾಯಿನ್ ಕಳ್ಳಸಾಗಣೆಯಲ್ಲಿ ಭಾಗಿಯಾಗಿ US ಜೈಲಿನಲ್ಲಿ ಶಿಕ್ಷೆ ಅನುಭವಿಸಿ ನಂತರ ಮೆಕ್ಸಿಕೋಗೆ ಗಡೀಪಾರು ಮಾಡಲ್ಪಟ್ಟರು. ಆಶ್ಚರ್ಯಕರ ಸಂಗತಿ ಎಂದರೆ ಅವರು ಮೆಕ್ಸಿಕೋಗೆ ಮರಳಿ ಸ್ಥಳೀಯ ಪೊಲೀಸ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಆದರೆ ಬಳಿಕ ಅಪರಾಧ ಜಗತ್ತಿಗೆ ಮರಳಿ Milenio Cartel ಮೂಲಕ ಮೇಲೇರಿ 2010ರ ದಶಕದಲ್ಲಿ CJNG ಸ್ಥಾಪಿಸಿದರು.
ಅವರ ನೇತೃತ್ವದಲ್ಲಿ CJNG ಕಾರ್ಟೆಲ್ ಮೆಕ್ಸಿಕೋದ ಅತ್ಯಂತ ಶಕ್ತಿಶಾಲಿ ಅಪರಾಧ ಸಂಘಟನೆಯಾಗಿ ಬೆಳೆದು ಅಮೆರಿಕಕ್ಕೆ ಭಾರಿ ಪ್ರಮಾಣದ Fentanyl, Methamphetamine, Cocaine ಮತ್ತು Heroin ಸಾಗಿಸುತ್ತಿತ್ತು. US ಸರ್ಕಾರ ಅವರ ಬಂಧನಕ್ಕೆ ಕಾರಣವಾಗುವ ಮಾಹಿತಿಗೆ $15 ಮಿಲಿಯನ್ ಬಹುಮಾನ ಘೋಷಿಸಿ ಅವರನ್ನು ವಿಶ್ವದ ಅತ್ಯಂತ ವಾಂಟೆಡ್ ಅಪರಾಧಿಗಳ ಪಟ್ಟಿಯಲ್ಲಿ ಸೇರಿಸಿತ್ತು.
El Mencho ಮೃತ್ಯುವಿನ ನಂತರ Jalisco ಸೇರಿ ಹಲವು ಮೆಕ್ಸಿಕನ್ ರಾಜ್ಯಗಳಲ್ಲಿ ಕಾರ್ಟೆಲ್ ಸದಸ್ಯರು ವ್ಯಾಪಕ ಹಿಂಸಾಚಾರ ನಡೆಸಿದ್ದು ಹಲವು ವಾಹನಗಳನ್ನು ಸುಟ್ಟಿದ್ದಾರೆ. US ಮತ್ತು ಕೆನಡಾ ತಮ್ಮ ಪ್ರಜೆಗಳಿಗೆ ಮೆಕ್ಸಿಕೋ ಪ್ರಯಾಣ ಬಗ್ಗೆ ಎಚ್ಚರಿಕೆ ಸೂಚನೆ ಹೊರಡಿಸಿದ್ದಾರೆ.

