Homeತಾಜಾ ಸುದ್ದಿNoida Death Case : ನೂಡಲ್ಸ್‌ಗೆ ವಿಷ ಬೆರೆಸಿ ಹೆಂಡತಿ-ಮಕ್ಕಳನ್ನು ಕೊಂದ ತಂದೆ!

Noida Death Case : ನೂಡಲ್ಸ್‌ಗೆ ವಿಷ ಬೆರೆಸಿ ಹೆಂಡತಿ-ಮಕ್ಕಳನ್ನು ಕೊಂದ ತಂದೆ!

 ನೋಯ್ಡಾ : ಗ್ರೇಟರ್ ನೋಯ್ಡಾದ ಮನೆಯಲ್ಲಿ ಒಂದೇ ಕುಟುಂಬದ ಐವರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಹೊಸ ತಿರುವು ಸಿಕ್ಕಿದೆ. ಕುಟುಂಬದ ಆಸ್ತಿ ಹಂಚಿಕೆ ವಿಚಾರವಾಗಿ ದೀರ್ಘಕಾಲದಿಂದ ವಿವಾದವಿತ್ತು. ಈ ಹಿನ್ನೆಲೆಯಲ್ಲಿ ತಂದೆಯೇ ನೂಡಲ್ಸ್‌ಗೆ ವಿಷ ಬೆರೆಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ನಾಗ್ಲಾ ಶ್ರೀ ಪದಂ ಗ್ರಾಮದ ಮನೆಯ ಕೊಠಡಿಯೊಂದರಲ್ಲಿ ಮಹೇಶ್ (37), ಅವರ ಪತ್ನಿ ಲಲಿತಾ (35), ಮಗಳು ಮಿಷ್ಟಿ (7) ಹಾಗೂ ಪುತ್ರರಾದ ಲಡ್ಡು (11) ಮತ್ತು ಸಾಕ್ಷತ್ (3) ಶನಿವಾರ ಬೆಳಿಗ್ಗೆ 8 ಗಂಟೆ ಸುಮಾರಿಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

ಶುಕ್ರವಾರ ಸಂಜೆ ಸ್ಥಳೀಯ ಜಾತ್ರೆಗೆ ತೆರಳಿದ್ದ ಕುಟುಂಬ ರಾತ್ರಿ 10 ಗಂಟೆ ಸುಮಾರಿಗೆ ಮನೆಗೆ ಮರಳಿತ್ತು. ಬಳಿಕ ರಾತ್ರಿ ಊಟಕ್ಕೆ ನೂಡಲ್ಸ್ ಸೇವಿಸಿತ್ತು. ಹೀಗಾಗಿ, ಆರಂಭದಲ್ಲಿ ಇದು ಫುಡ್ ಪಾಯಿಸನ್ ನಿಂದ ಸಂಭವಿಸಿದ ಮೃತ್ಯು ಪ್ರಕರಣವಿರಬಹುದು ಎಂದು ಶಂಕಿಸಲಾಗಿತ್ತು. ಆದರೆ, ಮಹೇಶ್ ಅವರೇ ನೂಡಲ್ಸ್ ಗೆ ವಿಷ ಬೆರೆಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮಹೇಶ್ ಅವರ ಮೊಬೈಲ್ ನಲ್ಲಿ ಆಡಿಯೋ ಟಿಪ್ಪಣಿಯೊಂದು ಪತ್ತೆಯಾಗಿದ್ದು ಅದರಲ್ಲಿ ತಮ್ಮ ಇಬ್ಬರು ಸಹೋದರಿಯರು ಮತ್ತು ಭಾವನನ್ನು ಈ ಸಾವುಗಳಿಗೆ ಹೊಣೆಗಾರರನ್ನಾಗಿ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಮಹೇಶ್ ಅವರ ಇಬ್ಬರು ಸಹೋದರಿಯರು ಮತ್ತು ಭಾವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಹೇಶ್ ಅವರ ಭಾವನ ಪತ್ನಿ ನೀರಜ್ ಅವರು, ಕುಟುಂಬದ ಆಸ್ತಿ ಹಂಚಿಕೆ ವಿಚಾರವಾಗಿ ದೀರ್ಘಕಾಲದಿಂದ ವಿವಾದವಿತ್ತು, ಇದರಿಂದ ಕುಟುಂಬದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ತಿಳಿಸಿದ್ದಾರೆ. ತಮ್ಮ ಪತಿಯ ಮರಣದ ಬಳಿಕ ತಮ್ಮನ್ನು ಮನೆಯಿಂದ ಹೊರಹಾಕಲಾಗಿತ್ತು, ಬಳಿಕ ಎಲ್ಲರೂ ಮತ್ತೆ ಒಟ್ಟಿಗೆ ವಾಸಿಸುವುದಾಗಿ ಮಹೇಶ್ ಭರವಸೆ ನೀಡಿದ್ದರು ಎಂದೂ ಅವರು ಆರೋಪಿಸಿದ್ದಾರೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಆಹಾರ ಸುರಕ್ಷತಾ ಅಧಿಕಾರಿಗಳೂ ಇದು ಸಾಮಾನ್ಯ ಫುಡ್ ಪಾಯಿಸನ್ ಪ್ರಕರಣವಲ್ಲ ಎಂದು ಶಂಕಿಸಿದ್ದಾರೆ. ಉದ್ದೇಶಪೂರ್ವಕವಾಗಿ ವಿಷ ನೀಡಿರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಹಾರ ಸುರಕ್ಷತಾ ಅಧಿಕಾರಿ ಒ.ಪಿ. ಸಿಂಗ್ ಅವರ ಪ್ರಕಾರ, ಅಧಿಕಾರಿಗಳ ತಂಡವು ಸ್ಥಳದಲ್ಲಿ ಪತ್ತೆಯಾದ ಆಹಾರದ ಪ್ಯಾಕೇಟ್ ಗಳು ಮತ್ತು ಇತರ ವಸ್ತುಗಳನ್ನು ಪರಿಶೀಲಿಸಿದೆ. ಆದರೆ, ಯಾವುದೇ ಅವಧಿ ಮೀರಿದ ಆಹಾರ ಪದಾರ್ಥಗಳು ಪತ್ತೆಯಾಗಿಲ್ಲ. ‘ಇದು ಫುಡ್ ಪಾಯಿಸನ್ ಪ್ರಕರಣದಂತೆ ಕಾಣುತ್ತಿಲ್ಲ, ವಿಷಕಾರಿ ವಸ್ತುವನ್ನು ಬಳಸಿರುವ ಸಾಧ್ಯತೆಯಿದೆ ಎಂದು ನಾವು ಶಂಕಿಸುತ್ತಿದ್ದೇವೆ’ ಎಂದು ಅವರು ತಿಳಿಸಿದ್ದಾರೆ. ಫುಡ್ ಪಾಯಿಸನ್ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ವಾಂತಿ ಮತ್ತು ಭೇದಿಯಂತಹ ಲಕ್ಷಣಗಳು ಸಂತ್ರಸ್ತರಲ್ಲ ಕಂಡುಬಂದಿಲ್ಲ. ಸ್ಥಳೀಯರು ನೀಡಿದ ಮಾಹಿತಿಯ ಪ್ರಕಾರ, ಮಕ್ಕಳ ಪೈಕಿ ಒಬ್ಬನ ಬಾಯಿಯಿಂದ ನೊರೆ ಬರುತ್ತಿರುವುದು ಕಂಡುಬಂದಿತ್ತು ಎಂದು ಸಿಂಗ್ ತಿಳಿಸಿದ್ದಾರೆ. ಕುಟುಂಬದ ಐವರ ಸಾವುಗೆ ನಿಖರ ಕಾರಣವೇನೆಂಬುದನ್ನು ತಿಳಿಯಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇದನ್ನು ಓದಿ : Greater Noida : ರಾತ್ರಿ ನೂಡಲ್ಸ್ ತಿಂದು ಮಲಗಿದ ಒಂದೇ ಕುಟುಂಬದ ಐವರ ದಾರುಣ ಸಾವು!

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments