Homeತಾಜಾ ಸುದ್ದಿUppinangadi : ಬಾರ್ ಎದುರು ತಲವಾರು ಗಲಾಟೆ ; ಇಬ್ಬರು ವಶಕ್ಕೆ, ಓರ್ವ ಪರಾರಿ!

Uppinangadi : ಬಾರ್ ಎದುರು ತಲವಾರು ಗಲಾಟೆ ; ಇಬ್ಬರು ವಶಕ್ಕೆ, ಓರ್ವ ಪರಾರಿ!

ಉಪ್ಪಿನಂಗಡಿ : ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ಅಕ್ಟೋಬರ್ 18ರ ರಾತ್ರಿ ಭೀಕರ ಘಟನೆಯೊಂದು ಸಂಭವಿಸಿದೆ. ಇಲ್ಲಿನ ‘ಕಾರ್ತಿಕ್ ಬಾರ್’ ಎದುರು ಎರಡು ಗುಂಪುಗಳ ನಡುವೆ ತಲವಾರು ಮತ್ತು ಬಿಯರ್ ಬಾಟಲಿಗಳನ್ನು ಹಿಡಿದು ಗಲಾಟೆ ನಡೆದಿದ್ದು, ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ.

ಈ ಘಟನೆಗೆ ಸಂಬಂಧಿಸಿದಂತೆ ಉಪ್ಪಿನಂಗಡಿ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದವರನ್ನು ಇಳಂತಿಲ ನಿವಾಸಿ ಮಂಜುನಾಥ ಹಾಗೂ ಕರ್ವೇಲು ನಿವಾಸಿ ವಿಶ್ವನಾಥ ಎಂದು ಗುರುತಿಸಲಾಗಿದೆ. ಇದೇ ವೇಳೆ ಕರ್ವೇಲು ನಿವಾಸಿ ಮುನ್ನಾ ಎಂಬಾತ ಸ್ಥಳದಿಂದ ಪರಾರಿಯಾಗಿದ್ದಾನೆ.

ಪೊಲೀಸ್ ಮೂಲಗಳ ಪ್ರಕಾರ, ಮದ್ಯ ಸೇವಿಸಿದ್ದ ಎರಡು ತಂಡಗಳ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ವಿಕೋಪಕ್ಕೆ ತಿರುಗಿದೆ. ಬಾರಿನ ಹೊರಗಿನ ಸಾರ್ವಜನಿಕ ಸ್ಥಳದಲ್ಲಿ ನಡೆದ ಈ ಜಗಳದಲ್ಲಿ ಆರೋಪಿಗಳು ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸಿದ್ದಾರೆ. ಮಂಜುನಾಥ ತಲವಾರು ಝಳಪಿಸುತ್ತಿದ್ದರೆ, ಮುನ್ನಾ ಕೈಯಲ್ಲಿ ಬಿಯರ್ ಬಾಟಲಿ ಹಿಡಿದುಕೊಂಡು ಬೆದರಿಕೆ ಹಾಕುತ್ತಿದ್ದ ಎಂದು ತಿಳಿದುಬಂದಿದೆ.

ಗಲಾಟೆಯ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಉಪ್ಪಿನಂಗಡಿ ಪೊಲೀಸರು, ಮಂಜುನಾಥನನ್ನು ವಶಕ್ಕೆ ಪಡೆದು ಆತನ ಕೈಯಲ್ಲಿದ್ದ ತಲವಾರನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಪೊಲೀಸರನ್ನು ಕಂಡ ಮುನ್ನಾ ಸ್ಥಳದಿಂದ ಪರಾರಿಯಾಗಿದ್ದಾನೆ. ತಲೆಮರೆಸಿಕೊಂಡಿರುವ ಆರೋಪಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.

ಇದನ್ನು ಓದಿ : Mangaluru : ಧರ್ಮದ ಹೆಸರಿನಲ್ಲಿ ಬಾಲಕರ ಮೇಲೆ ಕಾಮಕೃತ್ಯ ; ಪೋಕ್ಸೋ ಕೇಸ್ ಬೀಳುತ್ತಿದ್ದಂತೆ ಓಡಿಹೋಗಿದ್ದ ಪಾಪಿ ಫಾದರ್ ವಶಕ್ಕೆ!

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments