Homeತಾಜಾ ಸುದ್ದಿGuruwayanakere : ಬಸ್ ನಿಲ್ದಾಣದ ಬಳಿಯ ಬಾರ್ ಎದುರು ಶಿವಮೊಗ್ಗ ಮೂಲದ ವೃದ್ಧ ಮರಿಯಪ್ಪ ಮೃತದೇಹ...

Guruwayanakere : ಬಸ್ ನಿಲ್ದಾಣದ ಬಳಿಯ ಬಾರ್ ಎದುರು ಶಿವಮೊಗ್ಗ ಮೂಲದ ವೃದ್ಧ ಮರಿಯಪ್ಪ ಮೃತದೇಹ ಪತ್ತೆ!

ಗುರುವಾಯನಕೆರೆ :  ಮೃತಪಟ್ಟ ವ್ಯಕ್ತಿಯನ್ನು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೆಂಚಾಳ ನಿವಾಸಿ ಮರಿಯಪ್ಪ (70) ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ಗುರುತಿಸಲಾಗಿದೆ. ಆಗಸ್ಟ್ 18ರ ಮಂಗಳವಾರ ಬೆಳಿಗ್ಗೆ ಗುರುವಾಯನಕೆರೆ ಬಸ್ ನಿಲ್ದಾಣದ ಬಳಿಯಿರುವ ಬಾರ್ ಮುಂಭಾಗದಲ್ಲಿ ವೃದ್ಧರೊಬ್ಬರು ಅಚೇತನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಗಮನಿಸಿದ ಸಾರ್ವಜನಿಕರು ತಕ್ಷಣವೇ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ.

ಮರಿಯಪ್ಪ ಅವರು ಕಳೆದ ಕೆಲವು ಸಮಯದಿಂದ ತೀವ್ರ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದ್ದು, ಅನಾರೋಗ್ಯದ ಕಾರಣದಿಂದಾಗಿ ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಬೆಳ್ತಂಗಡಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ಇದನ್ನು ಓದಿ : Udupi : ಅಮೆಜಾನ್ ಡೆಲಿವರಿ ಹಬ್ ಹೆಸರಲ್ಲಿ 4.20 ಲಕ್ಷ ರೂ. ವಂಚನೆ; ಮಣಿಪಾಲದಲ್ಲಿ ಐವರ ವಿರುದ್ಧ BNS ಕೇಸ್!

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments