HomeLOCALMangaluru : ಮಂಗಳೂರಿನ ಫಾಲ್ನೀರ್ ಬ್ಲಿಂಕಿಟ್ ಸ್ಟೋರ್ ಮೇಲೆ ಆರೋಗ್ಯ ಇಲಾಖೆ ದಿಢೀರ್ ದಾಳಿ ;...

Mangaluru : ಮಂಗಳೂರಿನ ಫಾಲ್ನೀರ್ ಬ್ಲಿಂಕಿಟ್ ಸ್ಟೋರ್ ಮೇಲೆ ಆರೋಗ್ಯ ಇಲಾಖೆ ದಿಢೀರ್ ದಾಳಿ ; ಮೊಟ್ಟೆಯಲ್ಲಿ ಹುಳು ಪತ್ತೆ ದೂರು, ಸ್ಟೋರೇಜ್ ರೂಂ ಸೀಜ್!

ಮಂಗಳೂರು : ಪ್ರಸಿದ್ಧ ಆನ್‌ಲೈನ್ ಡೆಲಿವರಿ ಆ್ಯಪ್ ಬ್ಲಿಂಕಿಟ್ (Blinkit) ಮೂಲಕ ಖರೀದಿಸಿದ ಮೊಟ್ಟೆಯಲ್ಲಿ ಹುಳುಗಳು ಪತ್ತೆಯಾಗಿರುವ ಗಂಭೀರ ಆರೋಪ ಕೇಳಿಬಂದ ಬೆನ್ನಲ್ಲೇ, ಆರೋಗ್ಯ ಇಲಾಖೆಯ ಅಧಿಕಾರಿಗಳ ತಂಡವು ನಗರದ ಫಾಲ್ನೀರ್‌ನಲ್ಲಿರುವ ಬ್ಲಿಂಕಿಟ್ ಮಳಿಗೆ ಮೇಲೆ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದೆ.

ಗ್ರಾಹಕರೊಬ್ಬರು ಬ್ಲಿಂಕಿಟ್ ಆ್ಯಪ್ ಮೂಲಕ ಮೊಟ್ಟೆಗಳನ್ನು ಖರೀದಿಸಿದ್ದು, ಅವುಗಳಲ್ಲಿ ಹುಳುಗಳು ಕಂಡುಬಂದಿದ್ದವು. ಈ ಬಗ್ಗೆ ಗ್ರಾಹಕರು ನೇರವಾಗಿ ಆರೋಗ್ಯ ಸಚಿವ ಯು.ಟಿ. ಖಾದರ್ ಅವರಿಗೆ ದೂರು ಸಲ್ಲಿಸಿದ್ದರು. ದೂರಿನ ಗಂಭೀರತೆಯನ್ನು ಪರಿಗಣಿಸಿ ಸಚಿವರ ಸೂಚನೆಯಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಗುರುವಾರ ರಾತ್ರಿ ಫಾಲ್ನೀರ್ ಸ್ಕ್ವೇರ್ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಬ್ಲಿಂಕಿಟ್ ಡಾರ್ಕ್ ಸ್ಟೋರ್ ಮೇಲೆ ದಾಳಿ ನಡೆಸಿದ್ದಾರೆ.

ಪರಿಶೀಲನೆ ವೇಳೆ ಮಳಿಗೆಯೊಳಗೆ ಒಡೆದು ಹಾಳಾಗಿದ್ದ ಮೊಟ್ಟೆಯ ಪ್ಯಾಕೆಟ್‌ಗಳು ಸಂಗ್ರಹವಾಗಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ತಕ್ಷಣವೇ ಆ ಕೆಟ್ಟ ಮೊಟ್ಟೆಗಳನ್ನು ವಿಲೇವಾರಿ ಮಾಡುವಂತೆ ಸಿಬ್ಬಂದಿಗೆ ಅಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಅಲ್ಲದೆ, ಆಹಾರ ಪದಾರ್ಥಗಳನ್ನು ಶೇಖರಿಸುವ ಜಾಗವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಸ್ಯಾನಿಟೈಸ್ ಮಾಡುವ ಸಲುವಾಗಿ ಮಳಿಗೆಯ ಸ್ಟೋರೇಜ್ ರೂಮ್ ಅನ್ನು ತಾತ್ಕಾಲಿಕವಾಗಿ ಮುಚ್ಚಿಸಿ ಸೀಜ್ ಮಾಡಿದ್ದಾರೆ. ಆಹಾರ ಸುರಕ್ಷತೆ ಮತ್ತು ನೈರ್ಮಲ್ಯದ ಲೋಪದ ಕುರಿತು ಸೂಕ್ತ ಲಿಖಿತ ವಿವರಣೆ ನೀಡುವಂತೆ ಬ್ಲಿಂಕಿಟ್ ಸಂಸ್ಥೆಯ ಮ್ಯಾನೇಜ್‌ಮೆಂಟ್‌ಗೆ ಆರೋಗ್ಯ ಇಲಾಖೆ ನೋಟಿಸ್ ಜಾರಿ ಮಾಡಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments