HomeLOCALSurathkal : ಬೆಂಗ್ರೆ ಸೂಪರ್ ಸ್ಟಾರ್ ಗ್ರೌಂಡ್ ಬಳಿ ಇ-ಆಟೋ ಪಲ್ಟಿ; ಮೂವರಿಗೆ ಗಾಯ, ಮಹಿಳೆಯ...

Surathkal : ಬೆಂಗ್ರೆ ಸೂಪರ್ ಸ್ಟಾರ್ ಗ್ರೌಂಡ್ ಬಳಿ ಇ-ಆಟೋ ಪಲ್ಟಿ; ಮೂವರಿಗೆ ಗಾಯ, ಮಹಿಳೆಯ ಬೆರಳು ತುಂಡು!

ಸುರತ್ಕಲ್ : ಕೃಷ್ಣಾಪುರದಿಂದ ಬೆಂಗ್ರೆಗೆ ತೆರಳುತ್ತಿದ್ದ ಇ-ಆಟೋವೊಂದು ಚಾಲಕನ ದುಡುಕುತನ ಮತ್ತು ನಿರ್ಲಕ್ಷ್ಯದಿಂದಾಗಿ ಬೆಂಗ್ರೆ ಸೂಪರ್ ಸ್ಟಾರ್ ಗ್ರೌಂಡ್ ಬಳಿ ಪಲ್ಟಿಯಾದ ಪರಿಣಾಮ ಮೂವರು ಗಾಯಗೊಂಡಿದ್ದಾರೆ.

ರಿಕ್ಷಾದಲ್ಲಿ ಜೋಹರಾ (68), ಅವರ ಮಗಳು ಸಫ್ರಾಜ್ (33) ಹಾಗೂ ಮೊಮ್ಮಕ್ಕಳಾದ ಮಹಮ್ಮದ್ ಸಲ್ಮಾನ್ (4) ಮತ್ತು 10 ತಿಂಗಳ ಮಗು ಮಹಮ್ಮದ್ ಶೇಹಾಜಾನ್ ಪ್ರಯಾಣಿಸುತ್ತಿದ್ದರು. ಅಪಘಾತದ ರಭಸಕ್ಕೆ ಜೋಹರಾ ಅವರ ಬಲಗೈ ಹೆಬ್ಬೆರಳು ತುಂಡಾಗಿದ್ದು, ಸಫ್ರಾಜ್ ಅವರ ತಲೆಯ ಹಿಂಭಾಗಕ್ಕೆ ಗಾಯವಾಗಿದೆ. ಆಟೋ ಚಾಲಕ ಅಬ್ದುಲ್ ಅಜೀಜ್ ಅವರ ಬಲಗೈ ಭುಜಕ್ಕೂ ಗಾಯಗಳಾಗಿವೆ.

ಗಾಯಾಳುಗಳನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನು ಓದಿ : Mangaluru : ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ವ್ಯಕ್ತಿ ಸಾವು!

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments