Homeತಾಜಾ ಸುದ್ದಿGreater Noida : ರಾತ್ರಿ ನೂಡಲ್ಸ್ ತಿಂದು ಮಲಗಿದ ಒಂದೇ ಕುಟುಂಬದ ಐವರ ದಾರುಣ ಸಾವು!

Greater Noida : ರಾತ್ರಿ ನೂಡಲ್ಸ್ ತಿಂದು ಮಲಗಿದ ಒಂದೇ ಕುಟುಂಬದ ಐವರ ದಾರುಣ ಸಾವು!

ನವದೆಹಲಿ : ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ಒಂದೇ ಕುಟುಂಬದ ಐವರು ಸದಸ್ಯರು ಸಾವನ್ನಪ್ಪಿರುವ ದಾರುಣ ಘಟನೆ ಸಂಭವಿಸಿದ್ದು, ಸ್ಥಳದಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾಗಿದೆ. ಹಿಂದಿನ ರಾತ್ರಿ ಈ ಮನೆಯ ಸದಸ್ಯರು ನೂಡಲ್ಸ್ ತಿಂದಿದ್ದು, ಮರುದಿನ ಬೆಳಿಗ್ಗೆ ಮನೆಯಲ್ಲಿ ಐವರ ಶವಗಳು ಪತ್ತೆಯಾಗಿವೆ.

ರಬುಪುರ ಪೊಲೀಸ್ ಠಾಣೆ ವ್ಯಾಪ್ತಿಯ ನಾಗ್ಲಾ ಶ್ರೀ ಪದಮ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತರನ್ನು ಮಹೇಶ್ ಕುಮಾರ್, ಅವರ ಪತ್ನಿ ಲಲಿತಾ ಮತ್ತು ಅವರ ಮಕ್ಕಳಾದ ಲಡ್ಡು, ಮಿಶ್ತಿ ಹಾಗೂ ಸಾಕ್ಷತ್ ಎಂದು ಗುರುತಿಸಲಾಗಿದೆ. ಮೃತರಲ್ಲಿ ಪತಿ, ಪತ್ನಿ ಮತ್ತು ಅವರ ಮೂವರು ಮುಗ್ಧ ಮಕ್ಕಳು ಸೇರಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ಪಡೆದ ತಕ್ಷಣವೇ ಪೊಲೀಸರು, ಆರೋಗ್ಯ ಇಲಾಖೆ ಹಾಗೂ ವಿಧಿವಿಜ್ಞಾನ (FSL) ತಂಡಗಳು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿವೆ. ಅಲ್ಲದೆ, ಸ್ಥಳದಿಂದ ಅಗತ್ಯ ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತಿದ್ದು, ಆಹಾರ ಸುರಕ್ಷತಾ ಇಲಾಖೆಯ ತಂಡವೂ ಈ ಪ್ರಕರಣದ ಕುರಿತು ತನಿಖೆ ನಡೆಸುತ್ತಿದೆ.

ಪ್ರಾಥಮಿಕ ತನಿಖೆಗಳು ಇದು ಆಹಾರ ವಿಷಪ್ರಾಶನ (Food Poisoning) ಆಗಿರಬಹುದು ಎಂದು ಸೂಚಿಸುತ್ತಿವೆಯಾದರೂ, ಸಾವಿಗೆ ನಿಖರವಾದ ಕಾರಣವೇನೆಂದು ಇನ್ನೂ ಸ್ಪಷ್ಟವಾಗಿಲ್ಲ. ಕುಟುಂಬದ ಐದು ಸದಸ್ಯರ ಏಕಕಾಲಿಕ ಸಾವು ಇ ಗ್ರಾಮದಲ್ಲಿ ತೀವ್ರ ದುಃಖ ಹಾಗೂ ಆತಂಕದ ವಾತಾವರಣವನ್ನು ಮೂಡಿಸಿದೆ.

ಇದನ್ನು ಓದಿ : Mangaluru : ಎಂಆರ್‌ಪಿಎಲ್ ಸ್ಫೋಟದಲ್ಲಿ ಗಾಯಗೊಂಡಿದ್ದ ಮತ್ತೋರ್ವ ನೌಕರ ರಾಜೇಶ್ ಸಾವು!

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments