Homeತಾಜಾ ಸುದ್ದಿBengaluru : ಜ್ವರಕ್ಕೆಂದು ಆಸ್ಪತ್ರೆಗೆ ಹೋದ 57 ದಿನಗಳ ಹಸುಗೂಸಿನ ಕಾಲ್ಬೆರಳುಗಳೇ ಕಟ್! ವೈದ್ಯರ ನಿರ್ಲಕ್ಷ್ಯಕ್ಕೆ...

Bengaluru : ಜ್ವರಕ್ಕೆಂದು ಆಸ್ಪತ್ರೆಗೆ ಹೋದ 57 ದಿನಗಳ ಹಸುಗೂಸಿನ ಕಾಲ್ಬೆರಳುಗಳೇ ಕಟ್! ವೈದ್ಯರ ನಿರ್ಲಕ್ಷ್ಯಕ್ಕೆ ಪೋಷಕರ ಆಕ್ರೋಶ

Bengaluru : ಬೆಂಗಳೂರಿನ ಖ್ಯಾತ ವಾಣಿ ವಿಲಾಸ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದ ಆರೋಪವೊಂದು ಅತ್ಯಂತ ಗಂಭೀರ ಸ್ವರೂಪ ಪಡೆದುಕೊಂಡಿದೆ. ಅಕ್ಟೋಬರ್ 15ರಂದು ಕೇವಲ ಸಾಮಾನ್ಯ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ 57 ದಿನಗಳ ಹಸುಗೂಸನ್ನು ಪೋಷಕರು ಚಿಕಿತ್ಸೆಗಾಗಿ ಈ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು.

ಮಗುವನ್ನು ಪರೀಕ್ಷಿಸಿದ ವೈದ್ಯರು ಜ್ವರಕ್ಕೆ ಔಷಧ ನೀಡಿ, ಬಳಿಕ ಐವಿ (IV) ಇಂಜೆಕ್ಷನ್ ಕೂಡ ಹಾಕಿದ್ದರು. ಆದರೆ, ಇಂಜೆಕ್ಷನ್ ನೀಡಿದ ಕೆಲವೇ ಸಮಯದಲ್ಲಿ ಮಗುವಿನ ಕಾಲು ಸಂಪೂರ್ಣವಾಗಿ ನೀಲಿ ಬಣ್ಣಕ್ಕೆ ತಿರುಗಲಾರಂಭಿಸಿದೆ.

ಇದನ್ನು ಕಂಡು ಆತಂಕಗೊಂಡ ಪೋಷಕರು ವೈದ್ಯರಲ್ಲಿ ವಿಚಾರಿಸಿದರೂ ಸರಿಯಾದ ಸ್ಪಷ್ಟನೆ ಸಿಕ್ಕಿಲ್ಲ ಎನ್ನಲಾಗಿದೆ. ದಿನ ಕಳೆದಂತೆ ಮಗುವಿನ ಕಾಲಿನ ಸ್ಥಿತಿ ಮತ್ತಷ್ಟು ಹದಗೆಟ್ಟು, ಅಂಗಾಂಶಗಳು ಕೊಳೆಯಲು ಶುರುವಾಗಿವೆ.

ಕೊನೆಗೆ ಮಗುವಿನ ಪ್ರಾಣ ಉಳಿಸಲು ಬೇರೆ ದಾರಿಯಿಲ್ಲದೆ, ಕೊಳೆತಿದ್ದ ಕಾಲಿನ ಬೆರಳುಗಳನ್ನು ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಕತ್ತರಿಸಿ ತೆಗೆದಿದ್ದಾರೆ. ಕಣ್ಣುಮುಂದೆಯೇ ಹಸುಗೂಸಿಗೆ ಈ ದುಸ್ಥಿತಿ ಬಂದಿರುವುದನ್ನು ಕಂಡು ಪೋಷಕರು ಕಣ್ಣೀರುಹಾಕುತ್ತಿದ್ದಾರೆ.

ಇಂಜೆಕ್ಷನ್ ನೀಡುವಾಗ ವೈದ್ಯರು ಅಥವಾ ಸಿಬ್ಬಂದಿ ಮಾಡಿದ ಪ್ರಮಾದದಿಂದಲೇ ರಕ್ತಪೂರೈಕೆಯಲ್ಲಿ ತೊಂದರೆಯಾಗಿ ಈ ಅನಾಹುತ ಸಂಭವಿಸಿದೆ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದು, ತಪ್ಪಿತಸ್ಥ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments