ಬೆಂಗಳೂರು : ಐಪಿಎಲ್ 2026ರ ಅತ್ಯಂತ ಕುತೂಹಲಕಾರಿ ಪಂದ್ಯಗಳಲ್ಲಿ ಒಂದಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ನಡುವಿನ ಹಣಾಹಣಿಗೆ ಕೌಂಟ್ ಡೌನ್ ಶುರುವಾಗಿದೆ. ಈ ಪಂದ್ಯಕ್ಕೆ ಎರಡೂ ತಂಡಗಳ ಸಂಭಾವ್ಯ ಆಡುವ 11ರ ಬಳಗ (Playing 11) ಮತ್ತು ಪ್ರಮುಖ ಬದಲಾವಣೆಗಳ ವಿವರ ಇಲ್ಲಿದೆ:
ಸಿಎಸ್‌ಕೆ ತಂಡಕ್ಕೆ ‘ಬೇಬಿ ಎಬಿ’ ಬಲ!
ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಇಂದು ದೊಡ್ಡ ಬದಲಾವಣೆಯಾಗುವ ಸಾಧ್ಯತೆಯಿದೆ. ದಕ್ಷಿಣ ಆಫ್ರಿಕಾದ ಸ್ಪೋಟಕ ಬ್ಯಾಟರ್ ಡೆವಾಲ್ಡ್ ಬ್ರೆವಿಸ್ (Dewald Brevis) ಆಡುವ 11ರ ಬಳಗಕ್ಕೆ ಮರಳುವ ಸಾಧ್ಯತೆ ಹೆಚ್ಚಿದೆ. ಮಧ್ಯಮ ಕ್ರಮಾಂಕದಲ್ಲಿ ರನ್ ವೇಗ ಹೆಚ್ಚಿಸಲು ಸಿಎಸ್‌ಕೆ ಮ್ಯಾನೇಜ್‌ಮೆಂಟ್ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.
ಆರ್‌ಸಿಬಿ ಬೌಲಿಂಗ್‌ಗೆ ಹ್ಯಾಜಲ್‌ವುಡ್ ಶಕ್ತಿ:
ಮತ್ತೊಂದೆಡೆ, ಆರ್‌ಸಿಬಿ ತಂಡಕ್ಕೆ ಆಸ್ಟ್ರೇಲಿಯಾದ ಅನುಭವಿ ವೇಗಿ ಜೋಶ್ ಹ್ಯಾಜಲ್‌ವುಡ್ ಸೇರ್ಪಡೆಯಾಗಿರುವುದು ಬೌಲಿಂಗ್ ವಿಭಾಗಕ್ಕೆ ಆನೆ ಬಲ ನೀಡಿದೆ. ಚಿನ್ನಸ್ವಾಮಿ ಮೈದಾನದ ಸಣ್ಣ ಬೌಂಡರಿಗಳಲ್ಲಿ ಸಿಎಸ್‌ಕೆ ಬ್ಯಾಟರ್‌ಗಳನ್ನು ಕಟ್ಟಿಹಾಕಲು ಇವರು ಪ್ರಮುಖ ಅಸ್ತ್ರವಾಗಲಿದ್ದಾರೆ.
ಇದನ್ನು ಓದಿ : RCB vs CSK Preview : ಆರ್‌ಸಿಬಿ vs ಸಿಎಸ್‌ಕೆ ಮಹಾ ಯುದ್ಧಕ್ಕೆ ಚಿನ್ನಸ್ವಾಮಿ ಸ್ಟೇಡಿಯಂ ಸಜ್ಜು!
| Order | Royal Challengers Bengaluru (RCB) | Chennai Super Kings (CSK) |
| 1 | Virat Kohli | Ruturaj Gaikwad (C) |
| 2 | Phil Salt (WK) ✈️ | Sanju Samson (WK) |
| 3 | Devdutt Padikkal | Ayush Mhatre |
| 4 | Rajat Patidar (C) | Sarfaraz Khan |
| 5 | Jitesh Sharma | Shivam Dube |
| 6 | Tim David ✈️ | Dewald Brevis ✈️ |
| 7 | Romario Shepherd ✈️ | Kartik Sharma |
| 8 | Krunal Pandya | Prashant Veer |
| 9 | Bhuvneshwar Kumar | Anshul Kamboj |
| 10 | Jacob Duffy ✈️ | Matt Henry ✈️ |
| 11 | Abhinandan Singh | Noor Ahmad ✈️ |
| Sub | Suyash Sharma (Impact) | Khaleel Ahmed (Impact) |

