Homeಆರೋಗ್ಯDelhi | ಮೊಮೊಸ್ ಪ್ರಿಯರೇ ಎಚ್ಚರ!: ಪ್ರತಿದಿನ 'ಮೊಮೊಸ್' ತಿಂದಿದ್ದಕ್ಕೆ ದೆಹಲಿಯ 10 ವರ್ಷದ ಬಾಲಕಿಯ...

Delhi | ಮೊಮೊಸ್ ಪ್ರಿಯರೇ ಎಚ್ಚರ!: ಪ್ರತಿದಿನ ‘ಮೊಮೊಸ್’ ತಿಂದಿದ್ದಕ್ಕೆ ದೆಹಲಿಯ 10 ವರ್ಷದ ಬಾಲಕಿಯ ಲಿವರ್ ಫೇಲ್ಯೂರ್!

ನವದೆಹಲಿ: ಬೀದಿಬದಿಯ ಚಟಪಟ ಆಹಾರಗಳೆಂದರೆ ಮಕ್ಕಳಿಗೆ ಎಲ್ಲಿಲ್ಲದ ಪ್ರೀತಿ. ಆದರೆ ಈ ಪ್ರೀತಿಯೇ ದೆಹಲಿಯ 10 ವರ್ಷದ ಬಾಲಕಿಯ ಪಾಲಿಗೆ ಮುಳುವಾಗಿದೆ. ಪ್ರತಿದಿನ ಹೊರಗಿನ ‘ಮೊಮೊಸ್’ (Momos) ಸೇವಿಸಿದ ಕಾರಣ ಬಾಲಕಿಯ ಯಕೃತ್ತು (Liver) ಸಂಪೂರ್ಣವಾಗಿ ಹಾನಿಗೊಳಗಾಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.


ಏನಿದು ಘಟನೆ?

ದೆಹಲಿಯ ಈ ಬಾಲಕಿ ಕಳೆದ ಹಲವು ದಿನಗಳಿಂದ ಸತತವಾಗಿ ಸ್ಥಳೀಯ ಅಂಗಡಿಗಳಲ್ಲಿ ಮೊಮೊಸ್ ಮತ್ತು ಅದರೊಂದಿಗೆ ನೀಡಲಾಗುವ ಖಾರವಾದ ಚಟ್ನಿಯನ್ನು ಸೇವಿಸುತ್ತಿದ್ದಳು. ಇದ್ದಕ್ಕಿದ್ದಂತೆ ಬಾಲಕಿಯ ಆರೋಗ್ಯದಲ್ಲಿ ಏರುಪೇರಾಗಿದ್ದು, ಹೊಟ್ಟೆ ನೋವು ಮತ್ತು ವಾಂತಿ ಕಾಣಿಸಿಕೊಂಡಿದೆ. ತಕ್ಷಣ ಆಸ್ಪತ್ರೆಗೆ ದಾಖಲಿಸಿದಾಗ, ವೈದ್ಯರು ಆಕೆಯ ಲಿವರ್ ಫೇಲ್ಯೂರ್ ಆಗಿರುವುದನ್ನು ಕಂಡು ದಂಗಾಗಿದ್ದಾರೆ.

ವೈದ್ಯರ ಎಚ್ಚರಿಕೆ

ಮೊಮೊಸ್ ತಯಾರಿಕೆಯಲ್ಲಿ ಬಳಸುವ ಮೈದಾ ಹಿಟ್ಟು ಮತ್ತು ಅದಕ್ಕೆ ರುಚಿ ನೀಡಲು ಸೇರಿಸುವ ‘ಅಜಿನೋಮೊಟೊ’ (MSG) ಹಾಗೂ ಅತ್ಯಂತ ಖಾರವಾದ ಕೆಂಪು ಚಟ್ನಿ ಮಕ್ಕಳ ಜೀರ್ಣಾಂಗ ವ್ಯವಸ್ಥೆಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಅತಿಯಾದ ಸಂಸ್ಕರಿಸಿದ ಆಹಾರ ಮತ್ತು ಶುಚಿತ್ವವಿಲ್ಲದ ಕಡೆ ತಯಾರಿಸುವ ಇಂತಹ ತಿಂಡಿಗಳು ಲಿವರ್ ಮತ್ತು ಕಿಡ್ನಿ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ ಎಂದು ವೈದ್ಯರು ಪೋಷಕರಿಗೆ ಎಚ್ಚರಿಕೆ ನೀಡಿದ್ದಾರೆ. ಸದ್ಯ ಬಾಲಕಿಗೆ ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ನೀಡಲಾಗುತ್ತಿದೆ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments