Home LOCAL Police shock rowdy sheeter’s house in Malpe :ಮಲ್ಪೆಯಲ್ಲಿ ರೌಡಿ ಶೀಟರ್ ಮನೆಗೆ ಪೊಲೀಸರ...

Police shock rowdy sheeter’s house in Malpe :ಮಲ್ಪೆಯಲ್ಲಿ ರೌಡಿ ಶೀಟರ್ ಮನೆಗೆ ಪೊಲೀಸರ ಶಾಕ್: ಅಕ್ರಮವಾಗಿ ಅಡಗಿಸಿಟ್ಟಿದ್ದ ₹7 ಲಕ್ಷದ ಕಾರುಗಳು ಸೀಜ್!; ಟೆರೆಸ್‌ನಿಂದ ಜಿಗಿದು ಪರಾರಿಯಾದ ಸದಾಫ್!

0
59
olice shock rowdy sheeter's house in Malpe Cars worth ₹7 lakhs illegally hidden seized!; Sadaf escapes by jumping off terrace!

ಮಲ್ಪೆ :ರೌಡಿ ಶೀಟರ್ ಸದಾಫ್ ಮನೆ ಮೇಲೆ ಪೊಲೀಸರ ಮಿಂಚಿನ ದಾಳಿ; ನಕಲಿ ನಂಬರ್ ಪ್ಲೇಟ್‌ನ ಐಷಾರಾಮಿ ಕಾರುಗಳು ಜಪ್ತಿ!

ಮಲ್ಪೆ/ಉಡುಪಿ: ಉಡುಪಿ ಜಿಲ್ಲೆಯ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಕಲಿ ನಂಬರ್ ಪ್ಲೇಟ್ ಬಳಸಿ ಅಕ್ರಮ ಚಟುವಟಿಕೆ ನಡೆಸುತ್ತಿದ್ದ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಕುಖ್ಯಾತ ರೌಡಿ ಶೀಟರ್ ಸದಾಫ್ ಜಿ ಮೊಹಮ್ಮದ್ ಮನೆ ಮೇಲೆ ಮಲ್ಪೆ ಪೊಲೀಸರು ದಾಳಿ ನಡೆಸಿದ್ದು, ಅಕ್ರಮವಾಗಿ ಇರಿಸಲಾಗಿದ್ದ ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ.

ಸಿನಿಮೀಯ ಮಾದರಿಯಲ್ಲಿ ಪರಾರಿಯಾದ ಆರೋಪಿ: ಪಡುತೋನ್ಸೆ ಗ್ರಾಮದ ಕೆಮ್ಮಣ್ಣು ಎಂಬಲ್ಲಿರುವ ಸದಾಫ್ ನಿವಾಸದ ಮೇಲೆ ಪಿಎಸ್‌ಐ ಅನಿಲ್ ಮತ್ತು ಗಂಗಪ್ಪ ನೇತೃತ್ವದ ತಂಡ ದಾಳಿ ನಡೆಸಿತು. ಈ ವೇಳೆ ಪೊಲೀಸರನ್ನು ಕಂಡ ಸದಾಫ್, ಸಿನಿಮೀಯ ಮಾದರಿಯಲ್ಲಿ ತನ್ನ ಮನೆಯ ಟೆರೆಸ್‌ನಿಂದ ಪಕ್ಕದ ಶೆಡ್‌ನ ಮೇಲ್ಚಾವಣಿಗೆ ಜಿಗಿದು ಪರಾರಿಯಾಗಿದ್ದಾನೆ. ಸದ್ಯ ಆರೋಪಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

ಸಿಕ್ಕಿಬಿದ್ದವು ನಕಲಿ ನಂಬರ್ ಪ್ಲೇಟ್ ಕಾರುಗಳು: ಸ್ಥಳೀಯರ ಮಾಹಿತಿಯ ಮೇರೆಗೆ ಪೊಲೀಸರು ನಡೆಸಿದ ಮಹಜರು ವೇಳೆ ಸುಮಾರು ₹7 ಲಕ್ಷ ಮೌಲ್ಯದ ಮೂರು ಕಾರುಗಳನ್ನು ಜಪ್ತಿ ಮಾಡಲಾಗಿದೆ. ಇದರಲ್ಲಿ ಒಂದು ಹುಂಡೈ ಐ20 ಕಾರಿಗೆ ಮಾರುತಿ ಸುಜುಕಿ ಬಲೆನೊ ಕಾರಿನ ನಕಲಿ ನಂಬರ್ ಪ್ಲೇಟ್ ಅಳವಡಿಸಿರುವುದು ಪತ್ತೆಯಾಗಿದೆ. ಇದರೊಂದಿಗೆ ಹೊಂಡಾ ಸಿಟಿ ಮತ್ತು ಸ್ವಿಫ್ಟ್ ಕಾರುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇವುಗಳನ್ನು ಅಕ್ರಮ ಕೃತ್ಯಗಳಿಗೆ ಬಳಸಲಾಗುತ್ತಿತ್ತು ಎಂಬ ಶಂಕೆ ವ್ಯಕ್ತವಾಗಿದೆ.

ದನ ಕಳ್ಳತನದ ನಂಟು?: ಆರೋಪಿ ಸದಾಫ್ ಈಗಾಗಲೇ ದನ ಕಳ್ಳತನ ಸೇರಿದಂತೆ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಮಲ್ಪೆ, ಹೂಡೆ ಹಾಗೂ ಬೆಂಗ್ರೆ ಪರಿಸರದಲ್ಲಿ ಇತ್ತೀಚೆಗೆ ದನ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು, ಈ ಕೃತ್ಯಗಳಿಗೆ ನಕಲಿ ನಂಬರ್ ಪ್ಲೇಟ್ ಕಾರುಗಳನ್ನು ಬಳಸಲಾಗುತ್ತಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಇದನ್ನು ಓದಿ : ACCIDENT :ಮಗನ ಬೈಕ್ ದರ್ಪಕ್ಕೆ ತಾಯಿ ಬಲಿಪಶು!: ನಡೆದುಕೊಂಡು ಹೋಗುತ್ತಿದ್ದ ತಾಯಿಗೇ ಡಿಕ್ಕಿ ಹೊಡೆದ ಮಗ; ಕಡಬ ಪೊಲೀಸರಿಂದ ಎಫ್‌ಐಆರ್ ದಾಖಲು!

LEAVE A REPLY

Please enter your comment!
Please enter your name here

error: Content is protected !!