Thursday, April 2, 2026
HomeLOCALBantwal : ಮಗನ ಸೈಕಲ್‌ಗೆ ಗಾಳಿ ಹಾಕಿಸಲು ಹೋದ ತಂದೆ ಅಪಘಾತದಲ್ಲಿ ಸಾವು!

Bantwal : ಮಗನ ಸೈಕಲ್‌ಗೆ ಗಾಳಿ ಹಾಕಿಸಲು ಹೋದ ತಂದೆ ಅಪಘಾತದಲ್ಲಿ ಸಾವು!

ಬಂಟ್ವಾಳ :  ಬಂಟ್ವಾಳದ ಕೈಕಂಬದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಅತ್ಯಂತ ಮನಕಲಕುವ ಘಟನೆಯೊಂದು ಸಂಭವಿಸಿದೆ. ತನ್ನ ಪುಟ್ಟ ಮಗನ ಆಸೆಯಂತೆ ತಂದುಕೊಟ್ಟಿದ್ದ ಹೊಸ ಸೈಕಲ್‌ಗೆ ಗಾಳಿ ಹಾಕಿಸಲು ಹೋಗುತ್ತಿದ್ದ ತಂದೆಯೊಬ್ಬರು ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮೃತರನ್ನು ಕೈಕಂಬದ ಶಾಂತಿ ಅಂಗಡಿ ನಿವಾಸಿ ಗಾಡ್ವಿನ್ ಪಿಂಟೋ (49) ಎಂದು ಗುರುತಿಸಲಾಗಿದೆ. ಇವರು ಬಿ.ಸಿ.ರೋಡ್‌ನ ತಲಪಾಡಿಯಲ್ಲಿ ವಾಹನಗಳಿಗೆ ಪೇಂಟಿಂಗ್ ಮಾಡುವ ಕೆಲಸ ಮಾಡುತ್ತಿದ್ದರು.

ಗಾಡ್ವಿನ್ ಅವರು ಕಳೆದ ಮಂಗಳವಾರವಷ್ಟೇ ತಮ್ಮ ಮಕ್ಕಳಿಗೆ ಹೊಸ ಸೈಕಲ್ ಅನ್ನು ಮನೆಗೆ ತಂದುಕೊಟ್ಟಿದ್ದರು. ಆ ಸೈಕಲ್‌ನ ಟೈರ್‌ನಲ್ಲಿ ಗಾಳಿ ಇಲ್ಲದ ಕಾರಣ, ಬುಧವಾರದಂದು ಅವರು ಹತ್ತಿರದ ಸೈಕಲ್ ಅಂಗಡಿಗೆ ಹೋಗುತ್ತಿದ್ದರು. ಈ ವೇಳೆ ಅತೀ ವೇಗವಾಗಿ ಬಂದ ಬೊಲೆರೋ ಪಿಕಪ್ ವಾಹನವೊಂದು ಇವರಿಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ತೀವ್ರವಾಗಿ ಗಾಯಗೊಂಡ ಗಾಡ್ವಿನ್ ಅವರು ರಸ್ತೆಯಲ್ಲೇ ಮೃತಪಟ್ಟಿದ್ದಾರೆ. ಮಕ್ಕಳ ಖುಷಿಗಾಗಿ ತಂದ ಹೊಸ ಸೈಕಲ್‌ನ ಕೆಲಸಕ್ಕೆ ಹೋಗುವಾಗ ತಂದೆ ಸಾವನ್ನಪ್ಪಿರುವುದು ಇಡೀ ಗ್ರಾಮವನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ.

ಮೃತ ಗಾಡ್ವಿನ್ ಅವರು ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ. ಮಕ್ಕಳ ಆಟದ ಸಾಮಾನು ತಂದ ಸಂಭ್ರಮದ ಮನೆಯಲ್ಲಿ ಈಗ ಮೌನ ಆವರಿಸಿದ್ದು, ವಿಧಿಯ ಕ್ರೂರ ಆಟಕ್ಕೆ ಕುಟುಂಬ ಕಂಗಾಲಾಗಿದೆ. ಈ ಅಪಘಾತದ ಹಿನ್ನೆಲೆಯಲ್ಲಿ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಬೊಲೆರೋ ವಾಹನ ಮತ್ತು ಚಾಲಕನ ವಿರುದ್ಧ ಮುಂದಿನ ತನಿಖೆ ಕೈಗೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!