Home ತಾಜಾ ಸುದ್ದಿ Delhi | ದೆಹಲಿಯಲ್ಲಿ ಐಆರ್‌ಎಸ್ ಅಧಿಕಾರಿಯ ಮಗಳ ಬರ್ಬರ ಹತ್ಯೆ: ಸಿಸಿಟಿವಿ ಮತ್ತು ಆಟೋ ನೀಡಿದ...

    Delhi | ದೆಹಲಿಯಲ್ಲಿ ಐಆರ್‌ಎಸ್ ಅಧಿಕಾರಿಯ ಮಗಳ ಬರ್ಬರ ಹತ್ಯೆ: ಸಿಸಿಟಿವಿ ಮತ್ತು ಆಟೋ ನೀಡಿದ ಸುಳಿವು ; 12 ಗಂಟೆಗಳೊಳಗೆ ಬಂಧನ

    0
    73

    ಹೊಸದಿಲ್ಲಿ : ರಾಜಸ್ಥಾನದ ಅಲ್ವಾರ್ ಮತ್ತು ಹೊಸದಿಲ್ಲಿಯಲ್ಲಿ ಕೇವಲ 12 ಗಂಟೆಗಳ ಅಂತರದಲ್ಲಿ ನಡೆದ ಎರಡು ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಭಾಗಿಯಾಗಿದ್ದ 23 ವರ್ಷದ ವ್ಯಕ್ತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಹೊಸದಿಲ್ಲಿಯ ಅಮರ್ ಕಾಲೋನಿಯಲ್ಲಿರುವ ಐಆರ್‌ಎಸ್ (IRS) ಅಧಿಕಾರಿಯೊಬ್ಬರ ಮನೆಗೆ ನುಗ್ಗಿದ್ದ ಈತ, ಈ ಹಿಂದೆ ಅಲ್ಲಿ ಕೆಲಸ ಮಾಡಿಕೊಂಡಿದ್ದವನು. ಆರೋಪಿಯು ಅಧಿಕಾರಿಯ 22 ವರ್ಷದ ಮಗಳ ಮೇಲೆ ದೌರ್ಜನ್ಯ ಎಸಗಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದ್ದು, ಬೆಳಿಗ್ಗೆ ಜಿಮ್‌ನಿಂದ ಮನೆಗೆ ಮರಳಿದ ಪೋಷಕರು ಮಗಳನ್ನು ರಕ್ತದ ಮಡುವಿನಲ್ಲಿ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಈ ಪ್ರಕರಣ ಭೇದಿಸಲು ಪೊಲೀಸರು 15 ವಿಶೇಷ ತಂಡಗಳನ್ನು ರಚಿಸಿ ತನಿಖೆ ಕೈಗೊಂಡಿದ್ದರು. ವಸತಿ ಸಂಕೀರ್ಣದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆರೋಪಿಯು ಬೆಳಿಗ್ಗೆ 6.28ರ ಸುಮಾರಿಗೆ ಒಳಪ್ರವೇಶಿಸಿ, ಸುಮಾರು ಒಂದು ಗಂಟೆಯೊಳಗೆ ಬಟ್ಟೆ ಬದಲಾಯಿಸಿಕೊಂಡು ಅಲ್ಲಿಂದ ಪರಾರಿಯಾಗಿರುವುದು ಪತ್ತೆಯಾಯಿತು. ಅಪರಾಧದ ಬಳಿಕ ಆರೋಪಿಯು ಹತ್ತಿದ ಆಟೋರಿಕ್ಷಾವನ್ನು ಗುರುತಿಸಿದ ಪೊಲೀಸರು ಆಟೋ ಚಾಲಕನನ್ನು ಪತ್ತೆಹಚ್ಚಿದರು. ಆತ ಆರೋಪಿಯನ್ನು ಹೋಟೆಲ್‌ವೊಂದರ ಬಳಿ ಇಳಿಸಿದ್ದಾಗಿ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಅಲ್ಲಿಗೆ ತೆರಳಿ ಹಂತಕನನ್ನು ಬಂಧಿಸಿದ್ದಾರೆ.

    ಆರೋಪಿಯು ಈ ಹಿಂದೆ ಇದೇ ಐಆರ್‌ಎಸ್ ಅಧಿಕಾರಿಯ ಮನೆಯಲ್ಲಿ ಕೆಲಸಕ್ಕಿದ್ದನು, ಆದರೆ ಹಣಕಾಸು ಅಕ್ರಮ ಹಾಗೂ ಬೆಟ್ಟಿಂಗ್ ಹವ್ಯಾಸದ ಕಾರಣದಿಂದ ಆತನನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು. ಈ ಘಟನೆಗೂ ಕೆಲವು ಗಂಟೆಗಳ ಮೊದಲು ಆರೋಪಿಯು ರಾಜಸ್ಥಾನದ ಅಲ್ವಾರ್‌ನಲ್ಲಿ ತನ್ನ 22 ವರ್ಷದ ನೆರೆಹೊರೆಯವಳ ಮೇಲೂ ದೌರ್ಜನ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ. ಸಿಸಿಟಿವಿ ದೃಶ್ಯಾವಳಿ ಮತ್ತು ತಳಮಟ್ಟದ ತನಿಖೆ ಈ ಪ್ರಕರಣವನ್ನು ಕೇವಲ 12 ಗಂಟೆಗಳಲ್ಲಿ ಭೇದಿಸಲು ನೆರವಾಗಿದೆ.

    LEAVE A REPLY

    Please enter your comment!
    Please enter your name here

    error: Content is protected !!