Homeತಾಜಾ ಸುದ್ದಿNepal : ಪ್ರವಾಹದಲ್ಲಿ ಕೊಚ್ಚಿಬಂದ ಮಹಿಳೆಯ ಶವದಿಂದ ಚಿನ್ನದ ಓಲೆ ಕದ್ದ ಇಬ್ಬರು ಪಾಪಿಗಳು ಅರೆಸ್ಟ್!

Nepal : ಪ್ರವಾಹದಲ್ಲಿ ಕೊಚ್ಚಿಬಂದ ಮಹಿಳೆಯ ಶವದಿಂದ ಚಿನ್ನದ ಓಲೆ ಕದ್ದ ಇಬ್ಬರು ಪಾಪಿಗಳು ಅರೆಸ್ಟ್!

ನೇಪಾಳ :  ನೇಪಾಳದಲ್ಲಿ ಸಂಭವಿಸಿದ ಭೀಕರ ಮಹಾ ಪ್ರವಾಹಕ್ಕೆ ಈವರೆಗೆ ಕನಿಷ್ಠ 469ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು, ಸಾವಿರಾರು ಜನರು ನಾಪತ್ತೆಯಾಗಿದ್ದಾರೆ. ಇಂತಹ ಘೋರ ಪ್ರಾಕೃತಿಕ ವಿಕೋಪದ ನಡುವೆ ನಾರಾಯಣಿ ನದಿಯಲ್ಲಿ ಪ್ರವಾಹಕ್ಕೆ ಸಿಲುಕಿ ಕೊಚ್ಚಿಹೋಗಿದ್ದ ಮಹಿಳೆಯೊಬ್ಬರ ಮೃತದೇಹ ತೇಲಿಬಂದಿತ್ತು. ಈ ವೇಳೆ ಸ್ಥಳದಲ್ಲಿದ್ದ ಇಬ್ಬರು ವ್ಯಕ್ತಿಗಳು ಮರದ ಹಲಗೆಗಳ ಸಹಾಯದಿಂದ ಮಹಿಳೆಯ ಶವವನ್ನು ನದಿಯ ದಡಕ್ಕೆ ಎಳೆದು ತಂದಿದ್ದಾರೆ. ಆದರೆ, ಮಾನವೀಯತೆಯಿಂದ ಶವಸಂಸ್ಕಾರಕ್ಕೆ ನೆರವಾಗುವ ಬದಲು, ಆಕೆಯ ತಲೆಕೂದಲನ್ನು ಹಿಡಿದು ಎಳೆದಾಡಿ ಎರಡೂ ಕಿವಿಗಳಲ್ಲಿದ್ದ ಚಿನ್ನದ ಓಲೆಗಳನ್ನು ಕಿತ್ತುಕೊಂಡು ಬಚ್ಚಿಟ್ಟುಕೊಂಡಿದ್ದಾರೆ.

ಈ ಅಮಾನವೀಯ ಕೃತ್ಯವನ್ನು ಅಲ್ಲೇ ಸಮೀಪದಲ್ಲಿದ್ದ ಸಾರ್ವಜನಿಕರು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದು ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಕೇವಲ 41 ಸೆಕೆಂಡ್‌ಗಳ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿ ಆಕ್ರೋಶಕ್ಕೆ ಕಾರಣವಾಗಿತ್ತು. ವಿಡಿಯೋ ಆಧಾರದ ಮೇಲೆ ತಕ್ಷಣವೇ ಕಾರ್ಯಪ್ರವೃತ್ತರಾದ ಚಿಟ್ವಾನ್ ಪೊಲೀಸರು, ಆರೋಪಿಗಳನ್ನು 25 ವರ್ಷದ ಮದನ್ ಗುರುಂಗ್ ಹಾಗೂ 38 ವರ್ಷದ ಉಮೇಶ್ ಚೌಧರಿ ಎಂದು ಗುರುತಿಸಿದ್ದಾರೆ. ಗುರುವಾರ ಭಾರತ್ಪುರ ಮಹಾನಗರ-1ರ ಪೊಖರಾ ಬಸ್ ಪಾರ್ಕ್ ಸಮೀಪ ಇಬ್ಬರೂ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪ್ರವಾಹ ಪೀಡಿತ ಸಂತ್ರಸ್ತರ ವಸ್ತುಗಳನ್ನು ದೋಚುವ ಅಥವಾ ಅಮಾನವೀಯವಾಗಿ ವರ್ತಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನೇಪಾಳ ಪೊಲೀಸರು ಕಟ್ಟುನಿಟ್ಟಿನ ಎಚ್ಚರಿಕೆ ರವಾನಿಸಿದ್ದಾರೆ.

ಇದನ್ನು ಓದಿ : Belthangady : 16 ವರ್ಷದ ಅಪ್ರಾಪ್ತೆಯ ಮೇಲೆ ಅತ್ಯಾಚಾರ, ಮಗುವಿಗೆ ಜನ್ಮ ನೀಡಿದ ಬಾಲಕಿ; 21ರ ಶ್ರೀಕಾಂತ್ ಅರೆಸ್ಟ್!

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments