Homeತಾಜಾ ಸುದ್ದಿUppinangady : ಪತಿ-ಪತ್ನಿ ಜಗಳ ; ನಾದಿನಿಯ ಮಗುವನ್ನು ಬಾವಿಗೆ ಎಸೆದು ಕೊಂದ ತಾಯಿ!

Uppinangady : ಪತಿ-ಪತ್ನಿ ಜಗಳ ; ನಾದಿನಿಯ ಮಗುವನ್ನು ಬಾವಿಗೆ ಎಸೆದು ಕೊಂದ ತಾಯಿ!

Uppinangady : ಉಪ್ಪಿನಂಗಡಿಯ ಪೇರ್ನೆಯ ಮೈರಕಟ್ಟೆಯಲ್ಲಿ ಸೆಪ್ಟೆಂಬರ್ 19 ರಂದು ದಂಪತಿ ನಡುವೆ ಫೋನ್‌ನಲ್ಲಿ ನಡೆದ ಸಣ್ಣ ಮಾತಿನ ಚಕಮಕಿ ಅತ್ಯಂತ ಘೋರ ದುರಂತಕ್ಕೆ ಸಾಕ್ಷಿಯಾಗಿದೆ. ಮಂಗಳೂರಿನಲ್ಲಿ ಗ್ಯಾರೇಜ್ ನಡೆಸುತ್ತಿರುವ ಸಿಫಾನ್ (32) ಹಾಗೂ ಆತನ ಪತ್ನಿ ನೂರುನ್ನಿಸಾ (28) ನಡುವೆ ಮೊಬೈಲ್ ಕರೆಯಲ್ಲಿ ವೈವಾಹಿಕ ಕಲಹ ನಡೆದಿದೆ.

ಇದರಿಂದ ತೀವ್ರ ಕೋಪಗೊಂಡ ನೂರುನ್ನಿಸಾ, ಮನೆಯಲ್ಲಿದ್ದ ತನ್ನ ಮೂರೂವರೆ ವರ್ಷದ ಹೆಣ್ಣು ಮಗು ಹಾಗೂ ಪತಿಯ ತಂಗಿಯ (ವಿದೇಶದಲ್ಲಿದ್ದ ನಾದಿನಿ) ಮೂರು ವರ್ಷದ ಗಂಡು ಮಗು ‘ರಬೀಹ್’ನನ್ನು ಮನೆ ಸಮೀಪದ ಬಾವಿಗೆ ಎಸೆದಿದ್ದಾಳೆ.

ನಾದಿನಿಯ ಬೊಬ್ಬೆ ಕೇಳಿ ಸ್ಥಳೀಯರು ಹಾಗೂ ಹತ್ತಿರದಲ್ಲಿದ್ದ ಹೋಟೆಲ್‌ನವರು ತಕ್ಷಣ ಓಡಿಬಂದು ಮಕ್ಕಳನ್ನು ಮೇಲಕ್ಕೆತ್ತಿದ್ದಾರೆ. ಆದರೆ, ದುರದೃಷ್ಟವಶಾತ್ ನಾದಿನಿಯ ಮಗು ರಬೀಹ್ ಮೃತಪಟ್ಟಿದ್ದು, ನೂರುನ್ನಿಸಾಳ ಮಗುವನ್ನು ಗಂಭೀರ ಸ್ಥಿತಿಯಲ್ಲಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೇ ವೇಳೆ ಆಕೆ ತನ್ನ ಇನ್ನೊಂದು ಮಗುವನ್ನೂ ಬಾವಿಗೆ ಎಸೆಯಲು ಹಿಡಿದುಕೊಂಡು ಬರುತ್ತಿದ್ದಾಗ, ಸ್ಥಳೀಯರು ಕಸಿದುಕೊಂಡು ಮಗುವನ್ನು ರಕ್ಷಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ನೂರುನ್ನಿಸಾಳನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments