Mangaluru : ಮಂಗಳೂರಿನ ತೊಕ್ಕೊಟ್ಟು ನೇತ್ರಾವತಿ ಸೇತುವೆ ಸಮೀಪ ಮತ್ತೊಂದು ರಸ್ತೆ ಅಪಘಾತ ಸಂಭವಿಸಿದೆ. ತಪ್ಪಾದ ದಿಕ್ಕಿನಲ್ಲಿ (ರಾಂಗ್ ಸೈಡ್) ವೇಗವಾಗಿ ಬಂದ ಆಟೋರಿಕ್ಷಾವೊಂದು ಎದುರಿನಿಂದ ಬರುತ್ತಿದ್ದ ಇನ್ನೊಂದು ಆಟೋಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ತೀವ್ರತೆಗೆ ಆಟೋ ರಸ್ತೆಯಲ್ಲೇ ಮಗುಚಿ ಬಿದ್ದು, ಹತ್ತಿರದಲ್ಲೇ ಚಲಿಸುತ್ತಿದ್ದ ತಾರ್ (Thar) SUV ವಾಹನಕ್ಕೂ ಡಿಕ್ಕಿಯಾಗಿದೆ. ಅಪಘಾತವೆಸಗಿದ ರಾಂಗ್ ಸೈಡ್ ಆಟೋ ಚಾಲಕ ಘಟನೆ ನಡೆದ ತಕ್ಷಣವೇ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಈ ಭೀಕರ ಘಟನೆಯಲ್ಲಿ ಆಟೋ ಚಾಲಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ.