Home ತಾಜಾ ಸುದ್ದಿ Valero Refinery Explosion : ಅಮೆರಿಕದ ಅತಿದೊಡ್ಡ ತೈಲ ಸಂಸ್ಕರಣಾಗಾರದಲ್ಲಿ ಭೀಕರ ಸ್ಫೋಟ! ಟೆಕ್ಸಾಸ್‌ನಲ್ಲಿ...

    Valero Refinery Explosion : ಅಮೆರಿಕದ ಅತಿದೊಡ್ಡ ತೈಲ ಸಂಸ್ಕರಣಾಗಾರದಲ್ಲಿ ಭೀಕರ ಸ್ಫೋಟ! ಟೆಕ್ಸಾಸ್‌ನಲ್ಲಿ ತಲ್ಲಣ

    0
    69
    Valero Refinery Explosion: Massive explosion at America's largest oil refinery! Panic in Texas

    ಪೋರ್ಟ್ ಆರ್ಥರ್, ಟೆಕ್ಸಾಸ್ : ಅಮೆರಿಕದ ಟೆಕ್ಸಾಸ್ ರಾಜ್ಯದ ಪೋರ್ಟ್ ಆರ್ಥರ್‌ನಲ್ಲಿರುವ ‘ವ್ಯಾಲೆರೊ’ (Valero) ಎಂಬ ದೇಶದ ಅತಿದೊಡ್ಡ ತೈಲ ಸಂಸ್ಕರಣಾಗಾರದಲ್ಲಿ ಸೋಮವಾರ ಸಂಜೆ ಭೀಕರ ಸ್ಫೋಟ ಸಂಭವಿಸಿದೆ. ಈ ಸ್ಫೋಟದ ಸದ್ದು ಎಷ್ಟು ತೀವ್ರವಾಗಿತ್ತೆಂದರೆ ಸುತ್ತಮುತ್ತಲಿನ ನಿವಾಸಿಗಳ ಮನೆಗಳು ನಡುಗಿದ್ದು, ಜನರಲ್ಲಿ ತೀವ್ರ ಆತಂಕ ಮೂಡಿಸಿದೆ. ಘಟನೆಯ ನಂತರ ಸಂಸ್ಕರಣಾಗಾರದಿಂದ ದಟ್ಟವಾದ ಕಪ್ಪು ಹೊಗೆ ಆಕಾಶವನ್ನು ಆವರಿಸಿದ್ದು, ಕಿಲೋಮೀಟರ್ ದೂರದವರೆಗೂ ಕಾಣಿಸುತ್ತಿದೆ.

    ಸ್ಥಳೀಯ ಶೆರಿಫ್ ಝೆನಾ ಸ್ಟೀಫನ್ಸ್ ಮತ್ತು ಪೋರ್ಟ್ ಆರ್ಥರ್ ಪೊಲೀಸ್ ಮುಖ್ಯಸ್ಥ ಟಿಮ್ ದುರಿಸೊ ಅವರು ನೀಡಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ, ಸಂಸ್ಕರಣಾಗಾರದ ಒಳಗಿದ್ದ ‘ಕೈಗಾರಿಕಾ ಹೀಟರ್’ (Industrial Heater) ಸ್ಫೋಟಗೊಂಡಿದ್ದರಿಂದ ಈ ದುರಂತ ಸಂಭವಿಸಿದೆ. ಅದೃಷ್ಟವಶಾತ್, ಸ್ಫೋಟದ ಸಮಯದಲ್ಲಿ ಅಲ್ಲಿದ್ದ ಎಲ್ಲಾ ಸಿಬ್ಬಂದಿಗಳು ಸುರಕ್ಷಿತವಾಗಿದ್ದಾರೆ ಮತ್ತು ಯಾವುದೇ ಪ್ರಾಣಾಪಾಯ ಅಥವಾ ಗಾಯಗಳಾದ ಬಗ್ಗೆ ಈವರೆಗೆ ವರದಿಯಾಗಿಲ್ಲ ಎಂದು ವ್ಯಾಲೆರೊ ಸಂಸ್ಥೆ ಖಚಿತಪಡಿಸಿದೆ.

    ಮುನ್ನೆಚ್ಚರಿಕೆ ಕ್ರಮವಾಗಿ, ಹೊಗೆಯಿಂದ ಉಂಟಾಗಬಹುದಾದ ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಲು ಪೋರ್ಟ್ ಆರ್ಥರ್‌ನ ಪಶ್ಚಿಮ ಭಾಗದ ನಿವಾಸಿಗಳಿಗೆ ಮನೆಯಿಂದ ಹೊರಬರದಂತೆ (Shelter-in-place) ಸೂಚಿಸಲಾಗಿದೆ. ಅಲ್ಲದೆ, ಮುನ್ನೆಚ್ಚರಿಕೆಯಾಗಿ ಜಫರ್ಸನ್ ಕೌಂಟಿ ಅಧಿಕಾರಿಗಳು ಸ್ಟೇಟ್ ಹೈವೇ 82 ಮತ್ತು 87 ಅನ್ನು ತಾತ್ಕಾಲಿಕವಾಗಿ ಬಂದ್ ಮಾಡಿದ್ದಾರೆ. ವ್ಯಾಲೆರೊ ತುರ್ತು ಸ್ಪಂದನಾ ತಂಡವು ಸ್ಥಳೀಯ ಅಧಿಕಾರಿಗಳೊಂದಿಗೆ ಸೇರಿ ಬೆಂಕಿಯನ್ನು ನಂದಿಸುವ ಕಾರ್ಯಾಚರಣೆಯನ್ನು ಮುಂದುವರಿಸಿದೆ.

    ಜಾಗತಿಕವಾಗಿ ತೈಲ ಪೂರೈಕೆಯಲ್ಲಿ ಈಗಾಗಲೇ ಏರುಪೇರು ಉಂಟಾಗಿರುವ ಇಂದಿನ ಸಂದರ್ಭದಲ್ಲಿ, ಅಮೆರಿಕದ ಅತಿದೊಡ್ಡ ಸ್ವತಂತ್ರ ತೈಲ ಸಂಸ್ಕರಣಾಗಾರದಲ್ಲಿ ನಡೆದಿರುವ ಈ ಸ್ಫೋಟವು ಇಂಧನ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕ ಮೂಡಿಸಿದೆ. ವ್ಯಾಲೆರೊ ಸಂಸ್ಥೆಯು ಪ್ರತಿದಿನ 3.2 ಮಿಲಿಯನ್ ಬ್ಯಾರೆಲ್ ತೈಲ ಸಂಸ್ಕರಿಸುವ ಸಾಮರ್ಥ್ಯ ಹೊಂದಿದ್ದು, ಈ ಘಟನೆಯಿಂದ ಉತ್ಪಾದನೆಗೆ ಎಷ್ಟು ಹಾನಿಯಾಗಿದೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

    LEAVE A REPLY

    Please enter your comment!
    Please enter your name here

    error: Content is protected !!