ಬೆಳ್ತಂಗಡಿ : ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಕರಿಮಣೇಲು ಗ್ರಾಮದ ಬೋಳಾರಗುತ್ತು ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಜೂಜಾಟ ಆಡುತ್ತಿದ್ದ ಜಾಗಕ್ಕೆ ಪೊಲೀಸರು ಭರ್ಜರಿ ದಾಳಿ ನಡೆಸಿದ್ದು, ಬರೋಬ್ಬರಿ 17 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಕಾರ್ಯಾಚರಣೆ ಮೇ 17 ರಂದು ಭಾನುವಾರ ರಾತ್ರಿ 7:30 ರ ಸುಮಾರಿಗೆ ನಡೆದಿದೆ.
ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಜೂಜಾಟ ಆಡುತ್ತಿದ್ದ ಬಗ್ಗೆ ವೇಣೂರು ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಅಕ್ಷಯ್ ಡವಗಿ ಅವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಈ ಮಿಂಚಿನ ದಾಳಿ ನಡೆಸಲಾಗಿದೆ. ದಾಳಿಯ ವೇಳೆ ಜೂಜಾಟ ನಿರತರಾಗಿದ್ದ 17 ಮಂದಿಯನ್ನು ಪೊಲೀಸರು ಸ್ಥಳದಲ್ಲೇ ಹೆಡೆಮುರಿ ಕಟ್ಟಿದ್ದಾರೆ. ಬಂಧಿತ ಆರೋಪಿಗಳನ್ನು ಪಡಂಗಡಿಯ ಅಶೋಕ್ (37), ಹಿತೇಶ್ (33), ವೇಣೂರು ಕರಿಮಣೇಲಿನ ರಾಜೇಶ್ (35), ಕತ್ತೋಡಿಬೈಲಿನ ರಮೇಶ್ (40), ಕುಕ್ಕೇಡಿ ಬನರ್ತ್ತಾರಿನ ರಾಜೇಶ್ (42), ಕಾರ್ಕಳ ಮುಗಿರಡ್ಕದ ಪ್ರಮೀತ್ (35), ನಾರಾವಿ ಅರಸಿಕಟ್ಟೆಯ ಕರುಣಾಕರ (38), ವೇಣೂರು ಶಿವಾಜಿನಗರದ ಶೇಖರ್ (50), ಮರೋಡಿಯ ಸುಧಾಕರ್ (42), ಗಡಾಯಿಯ ನವಾಝ್ (26), ಗೇರುಕಟ್ಟೆ ಜನತಾಕಾಲೋನಿಯ ಇಕ್ಬಾಲ್ (37), ಕುಕ್ಕೇಡಿಯ ಕಿರಣ್ (35), ವೇಣೂರು ಶಿವಾಜಿನಗರದ ಲಕ್ಷ್ಮಣ (51), ಬೆಳ್ತಂಗಡಿ ಲಾಯಿಲದ ನಿಸಾರ್ (47), ಬೆಳ್ತಂಗಡಿ ತೆಂಕಎಡಪದವು ಜೀವಂಧರ್ ಕುಮಾರ್ (36), ಗುರುವಾಯನಕೆರೆಯ ಸಂತೋಷ್ (37) ಮತ್ತು ಸೊಣಂದೂರು ಅಬ್ದುಲ್ ಅಝೀಝ್ (40) ಎಂದು ಗುರುತಿಸಲಾಗಿದೆ.
ಕಾರ್ಯಾಚರಣೆಯ ವೇಳೆ ಆರೋಪಿಗಳು ಜೂಜಾಟಕ್ಕೆ ಬಳಸಿದ್ದ 69 ಸಾವಿರ ರೂಪಾಯಿ ನಗದು ಹಣ, ಎರಡು ಆಟೋ ರಿಕ್ಷಾಗಳು ಹಾಗೂ 20 ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ವೇಣೂರು ಪೊಲೀಸ್ ಠಾಣೆಯಲ್ಲಿ ಬಂಧಿತ 17 ಮಂದಿ ಆರೋಪಿಗಳ ವಿರುದ್ಧ ಕಲಂ 87 ಕೆ.ಪಿ. ಆಕ್ಟ್ ಹಾಗೂ 112 BNS ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ತನಿಖೆ ಪ್ರಗತಿಯಲ್ಲಿದೆ. ಬೆಳ್ತಂಗಡಿ ಉಪವಿಭಾಗದ ಡಿವೈಎಸ್ಪಿ ರೋಹಿಣಿ ಸಿ.ಕೆ. ಅವರ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ವೃತ್ತ ನಿರೀಕ್ಷಕ ರವಿ ಬಿ.ಎಸ್., ವೇಣೂರು ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ಅಕ್ಷಯ್ ಡವಗಿ, ಎಎಸ್‌ಐ ವೆಂಕಟೇಶ್ ಮತ್ತು ಸಿಬ್ಬಂದಿಗಳಾದ ಅಬ್ದುಲ್ ಲತೀಫ್, ಕೃಷ್ಣ, ವಸಂತ್, ಮೋಹನ, ರಾಕೇಶ್, ಕಾಳಮ್ಮ ಮತ್ತು ಕಾವೇರಿ ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.
ಇದನ್ನು ಓದಿ : Kasaragod : ಕ್ರಿಕೆಟ್ ಪಂದ್ಯದ ವಿವಾದದ ನಂತರ ಬ್ಯಾಂಕ್ ಸೆಕ್ಯೂರಿಟಿ ಗಾರ್ಡ್ಗೆ ಇರಿತ – ಮಾರಕ ಸಾವು!



