HomeEducationBOSSE MARKCARD : ವಿದ್ಯಾರ್ಥಿ ಪೋರ್ಟಲ್‌ನಿಂದ ಡಿಜಿಟಲ್ ಮಾರ್ಕ್ಸ್ ಕಾರ್ಡ್ ಡೌನ್‌ಲೋಡ್ ಮಾಡುವುದು ಹೇಗೆ? ಹಾರ್ಡ್...

BOSSE MARKCARD : ವಿದ್ಯಾರ್ಥಿ ಪೋರ್ಟಲ್‌ನಿಂದ ಡಿಜಿಟಲ್ ಮಾರ್ಕ್ಸ್ ಕಾರ್ಡ್ ಡೌನ್‌ಲೋಡ್ ಮಾಡುವುದು ಹೇಗೆ? ಹಾರ್ಡ್ ಕಾಪಿ ಮಾರ್ಕ್ಸ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?

BOSSE ವಿದ್ಯಾರ್ಥಿಗಳು ತಮ್ಮ Digital Marksheet ಹಾಗೂ Migration Certificate ಅನ್ನು ನೇರವಾಗಿ Student Portal ಮೂಲಕ ಡೌನ್‌ಲೋಡ್ ಮಾಡಬಹುದು.

ಡೌನ್‌ಲೋಡ್ ಮಾಡುವ ವಿಧಾನ:

1. BOSSE Student Portal ಗೆ ಲಾಗಿನ್ ಮಾಡಿ.
2. Result ವಿಭಾಗಕ್ಕೆ ತೆರಳಿ.
3. Download ಆಯ್ಕೆಯನ್ನು ಕ್ಲಿಕ್ ಮಾಡಿ.
4. Digital Marksheet ಅಥವಾ Migration Certificate ಆಯ್ಕೆ ಮಾಡಿ PDF ರೂಪದಲ್ಲಿ ಡೌನ್‌ಲೋಡ್ ಮಾಡಿಕೊಳ್ಳಿ.

ಹಾರ್ಡ್ ಕಾಪಿ ಮಾರ್ಕ್ಸ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?

ಹಾರ್ಡ್ ಕಾಪಿ ಮಾರ್ಕ್ಸ್ ಕಾರ್ಡ್ ವಿದ್ಯಾರ್ಥಿಗಳ ಮನೆಗೆ ಸ್ವಯಂಚಾಲಿತವಾಗಿ ಕಳುಹಿಸಲಾಗುವುದಿಲ್ಲ. ಅದನ್ನು ಪಡೆಯಲು ವಿದ್ಯಾರ್ಥಿಗಳು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸುವ ವಿಧಾನ:

1. BOSSE Student Portal ಗೆ ಲಾಗಿನ್ ಮಾಡಿ.
2. Apply for Documents ವಿಭಾಗಕ್ಕೆ ತೆರಳಿ.
3. ಬೇಕಾದ ದಾಖಲೆ (Marksheet ಅಥವಾ Migration Certificate) ಆಯ್ಕೆಮಾಡಿ.
4. ನಿಮ್ಮ ವಿಳಾಸದ ವಿವರಗಳನ್ನು ಪರಿಶೀಲಿಸಿ ಅಥವಾ ಅಗತ್ಯವಿದ್ದರೆ ನವೀಕರಿಸಿ.
5. ನಿಗದಿತ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಿ.
6. ಅರ್ಜಿ ಸಲ್ಲಿಸಿದ ಬಳಿಕ Document Status ವಿಭಾಗದಲ್ಲಿ ಅರ್ಜಿಯ ಸ್ಥಿತಿ ಹಾಗೂ ಕೂರಿಯರ್ ಟ್ರ್ಯಾಕಿಂಗ್ ವಿವರವನ್ನು ಪರಿಶೀಲಿಸಬಹುದು.

DigiLocker ಮೂಲಕ ಮಾರ್ಕ್ಸ್ ಕಾರ್ಡ್ ಡೌನ್‌ಲೋಡ್ ಮಾಡುವುದು ಹೇಗೆ?

ಆನ್‌ಲೈನ್ ಫಲಿತಾಂಶ ಪ್ರಕಟವಾದ 10–15 ದಿನಗಳೊಳಗೆ ವಿದ್ಯಾರ್ಥಿಗಳ Marksheet DigiLockerನಲ್ಲಿ ಲಭ್ಯವಾಗುತ್ತದೆ.

ಡೌನ್‌ಲೋಡ್ ಮಾಡುವ ವಿಧಾನ:

1. DigiLocker ಆಪ್ ಅಥವಾ ವೆಬ್‌ಸೈಟ್‌ಗೆ ಲಾಗಿನ್ ಮಾಡಿ.
2. Board of Open Schooling and Skill Education (BOSSE) ಅನ್ನು ಆಯ್ಕೆಮಾಡಿ.
3. ಅಗತ್ಯವಿರುವ ವಿವರಗಳು (Roll Number ಮುಂತಾದವು) ನಮೂದಿಸಿ.
4. Marksheet ಆಯ್ಕೆ ಮಾಡಿ PDF ರೂಪದಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments