Home ತಾಜಾ ಸುದ್ದಿ Kasargod bank guard murder case : ಬದಿಯಡ್ಕದಲ್ಲಿ ಕ್ರಿಕೆಟ್ ವಿವಾದ ಮಾರಕವಾಗಿ ಮಾರ್ಪಟ್ಟ ನಂತರ...

    Kasargod bank guard murder case : ಬದಿಯಡ್ಕದಲ್ಲಿ ಕ್ರಿಕೆಟ್ ವಿವಾದ ಮಾರಕವಾಗಿ ಮಾರ್ಪಟ್ಟ ನಂತರ 24 ಗಂಟೆಗಳಲ್ಲಿ ಇಬ್ಬರ ಬಂಧನ

    0
    33
    Kasargod bank guard murder case: Two arrested within 24 hours after cricket dispute turns deadly in Badiyadka

    ಕಾಸರಗೋಡು, ಮೇ 19 : ಕುಂಬ್ಡಾಜೆ ಸೇವಾ ಸಹಕಾರಿ ಬ್ಯಾಂಕ್‌ನ ಭದ್ರತಾ ಸಿಬ್ಬಂದಿಯಾಗಿದ್ದ ಸುರೇಶ್ (42) ಅವರ ಭೀಕರ ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಗಳಾದ ಕಿರಣ್ ಮತ್ತು ಅಖಿಲೇಶ್ ಎಂಬಿಬ್ಬರನ್ನು ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ. ಕೊಲೆ ನಡೆದ ಕೇವಲ 24 ಗಂಟೆಗಳ ಅವಧಿಯೊಳಗೆ ಆರೋಪಿಗಳನ್ನು ಬಂಧಿಸುವ ಮೂಲಕ ಪೊಲೀಸರು ಭರ್ಜರಿ ಯಶಸ್ಸು ಸಾಧಿಸಿದ್ದಾರೆ.

    ಪೊಲೀಸರು ನೀಡಿರುವ ಅಧಿಕೃತ ಮಾಹಿತಿಯ ಪ್ರಕಾರ, ಈ ಭೀಕರ ರಕ್ತಪಾತ ನಡೆದಿರುವುದು ಬ್ಯಾಂಕ್ ಆವರಣದ ಒಳಗೇ ಎಂಬ ಆಘಾತಕಾರಿ ಸತ್ಯ ಬೆಳಕಿಗೆ ಬಂದಿದೆ. ಭಾನುವಾರ ಸಂಜೆ ನಡೆದಿದ್ದ ಕ್ರಿಕೆಟ್ ಪಂದ್ಯದ ಜಗಳದ ದ್ವೇಷದಲ್ಲಿ, ಆರೋಪಿಗಳು ಬ್ಯಾಂಕ್ ಕಾಂಪೌಂಡ್ ಒಳಗೆ ನುಗ್ಗಿ ಸುರೇಶ್ ಅವರೊಂದಿಗೆ ತೀವ್ರ ಮಾತಿನ ಚಕಮಕಿ ನಡೆಸಿದ್ದಾರೆ. ಈ ವಾಗ್ವಾದ ಬೆನ್ನಲ್ಲೇ ಪರಿಸ್ಥಿತಿ ಕೈಮೀರಿ ಹೋಗಿದ್ದು, ಆರೋಪಿಗಳು ಸುರೇಶ್ ಅವರಿಗೆ ಚಾಕುವಿನಿಂದ ಇರಿದು ಮರ್ಡರ್ ಮಾಡಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.

    ಕ್ರಿಕೆಟ್ ಮೈದಾನದ ಸಣ್ಣ ವಿವಾದವೊಂದು ಇಷ್ಟೊಂದು ದೊಡ್ಡ ಮಟ್ಟದ ದ್ವೇಷಕ್ಕೆ ತಿರುಗಿ, ಬ್ಯಾಂಕ್ ಆವರಣದಲ್ಲೇ ಕೊಲೆಯಲ್ಲಿ ಅಂತ್ಯವಾಗಿರುವುದು ಇಡೀ ಗಡಿಭಾಗದಲ್ಲಿ ತಲ್ಲಣ ಮೂಡಿಸಿತ್ತು. ಘಟನೆ ನಡೆದ ತಕ್ಷಣವೇ ಅಲರ್ಟ್ ಆಗಿದ್ದ ಬದಿಯಡ್ಕ ಪೊಲೀಸರು ವಿಶೇಷ ತಂಡ ರಚಿಸಿ, ಆರೋಪಿಗಳ ಸುಳಿವು ಪತ್ತೆಹಚ್ಚಿ ಕಂಬಿ ಹಿಂದೆ ತಳ್ಳಿದ್ದಾರೆ. ಸದ್ಯ ಬಂಧಿತ ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

    ಇದನ್ನು ಓದಿ : Kasaragod : ಕ್ರಿಕೆಟ್ ಪಂದ್ಯದ ವಿವಾದದ ನಂತರ ಬ್ಯಾಂಕ್ ಸೆಕ್ಯೂರಿಟಿ ಗಾರ್ಡ್ಗೆ ಇರಿತ – ಮಾರಕ ಸಾವು!

    LEAVE A REPLY

    Please enter your comment!
    Please enter your name here

    error: Content is protected !!