Home LOCAL Udupi Rowdy Sheeters : ಉಡುಪಿಯಲ್ಲಿ ರೌಡಿಗಳ ದರ್ಬಾರ್‌ಗೆ ಬ್ರೇಕ್! ಇಬ್ಬರು ರೌಡಿಶೀಟರ್ ಸೇರಿ ಮೂವರು...

Udupi Rowdy Sheeters : ಉಡುಪಿಯಲ್ಲಿ ರೌಡಿಗಳ ದರ್ಬಾರ್‌ಗೆ ಬ್ರೇಕ್! ಇಬ್ಬರು ರೌಡಿಶೀಟರ್ ಸೇರಿ ಮೂವರು ಜಿಲ್ಲೆಯಿಂದ ಗಡಿಪಾರು!

0
78
Udupi Rowdy Sheeters: Break in the rowdy court in Udupi! Three people, including two rowdy sheeters, deported from the district!

Udupi Rowdy Sheeters:ಎಸ್ಪಿ ಹರಿರಾಂ ಶಂಕರ್ ಅವರ ಗಡಿಪಾರು ಆದೇಶ: ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹಾಗೂ ವಿಶೇಷ ಕಾರ್ಯಾಂಗ ದಂಡಾಧಿಕಾರಿ ಹರಿರಾಂ ಶಂಕರ್ ಅವರು ಮಾರ್ಚ್ 12ರಂದು ಈ ಮಹತ್ವದ ಆದೇಶವನ್ನು ಹೊರಡಿಸಿದ್ದಾರೆ. ಜಿಲ್ಲೆಯಲ್ಲಿ ಅಪರಾಧ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದ ಮತ್ತು ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿದ್ದ ಆರೋಪಿಗಳನ್ನು ಗುರುತಿಸಿ, ಅವರನ್ನು ಬೇರೆ ಜಿಲ್ಲೆಗಳಿಗೆ ಗಡಿಪಾರು ಮಾಡುವ ಮೂಲಕ ಸಮಾಜದಲ್ಲಿ ಶಾಂತಿ ನೆಲೆಸುವಂತೆ ಮಾಡುವುದು ಈ ಕ್ರಮದ ಮುಖ್ಯ ಉದ್ದೇಶವಾಗಿದೆ.

ಕುಖ್ಯಾತ ರೌಡಿ ಜಬ್ಬಾರ್ ಹುಸೇನ್ ಗಡಿಪಾರು: ಗಡಿಪಾರುಗೊಂಡವರಲ್ಲಿ ಪ್ರಮುಖನಾದ ಜಬ್ಬಾರ್ ಹುಸೇನ್ ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ನಡ್ಸಾಲು ಗ್ರಾಮದ ನಿವಾಸಿಯಾಗಿದ್ದಾನೆ. ಈತನ ವಿರುದ್ಧ ಈಗಾಗಲೇ ರೌಡಿಶೀಟ್ ತೆರೆಯಲಾಗಿದ್ದು, ಉಡುಪಿ ಮಾತ್ರವಲ್ಲದೆ ಮಂಗಳೂರು ನಗರ, ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಈತನ ವಿರುದ್ಧ ಒಟ್ಟು 16 ವಿವಿಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಈತನನ್ನು ಈಗ ಹಾಸನ ಜಿಲ್ಲೆಯ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ.

ಸಂದೇಶ ನಾಯ್ಕ್ ಮತ್ತು ಸುಶಾಂತ್ ಪೂಜಾರಿ ವಿರುದ್ಧ ಕ್ರಮ: ಇನ್ನುಳಿದಂತೆ ಹಿರಿಯಡ್ಕ ಠಾಣಾ ವ್ಯಾಪ್ತಿಯ ರೌಡಿಶೀಟರ್ ಸಂದೇಶ ನಾಯ್ಕ್‌ನನ್ನು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಗೆ ಮತ್ತು ಹಿರಿಯಡಕದ ಸುಶಾಂತ್ ಪೂಜಾರಿಯನ್ನು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ. ಸಂದೇಶ ನಾಯ್ಕ್ ವಿರುದ್ಧ 5 ಪ್ರಕರಣಗಳು ಹಾಗೂ ಸುಶಾಂತ್ ಪೂಜಾರಿ ವಿರುದ್ಧ 3 ಪ್ರಕರಣಗಳು ದಾಖಲಾಗಿವೆ. ಜಿಲ್ಲೆಯ ಗಡಿ ದಾಟಿರುವ ಇವರು ಆದೇಶದ ಅವಧಿ ಮುಗಿಯುವವರೆಗೆ ಉಡುಪಿ ಜಿಲ್ಲೆಗೆ ಪ್ರವೇಶಿಸುವಂತಿಲ್ಲ ಎಂದು ಸೂಚಿಸಲಾಗಿದೆ.

LEAVE A REPLY

Please enter your comment!
Please enter your name here

error: Content is protected !!