Home ತಾಜಾ ಸುದ್ದಿ Laxman Savadi vs Ramesh Jarkiholi : “ಬಿಜೆಪಿಗೆ ಬರ್ತೇನೆ ಅನ್ನೋರೇ ಜೆಡಿಎಸ್‌ಗೆ ಹೋಗ್ತಾರೆ!”; ಜಾರಕಿಹೊಳಿಗೆ...

    Laxman Savadi vs Ramesh Jarkiholi : “ಬಿಜೆಪಿಗೆ ಬರ್ತೇನೆ ಅನ್ನೋರೇ ಜೆಡಿಎಸ್‌ಗೆ ಹೋಗ್ತಾರೆ!”; ಜಾರಕಿಹೊಳಿಗೆ ಲಕ್ಷ್ಮಣ ಸವದಿ ಖಡಕ್ ಟಾಂಗ್!

    0
    51
    Laxman Savadi vs Ramesh Jarkiholi: "Those who say I will join BJP will go to JDS!"; Laxman Savadi's taunt for Jarkiholi!

    ಬೆಳಗಾವಿ: ಕುಂದಾನಗರಿಯ ಸಾಂಪ್ರದಾಯಿಕ ರಾಜಕೀಯ ಎದುರಾಳಿಗಳಾದ ರಮೇಶ್ ಜಾರಕಿಹೊಳಿ ಮತ್ತು ಲಕ್ಷ್ಮಣ ಸವದಿ ನಡುವಿನ ವಾಕ್ಸಮರ ಈಗ ಮತ್ತೆ ತಾರಕಕ್ಕೇರಿದೆ. “ಲಕ್ಷ್ಮಣ ಸವದಿ ಅವರು ಶೀಘ್ರವೇ ಬಿಜೆಪಿಗೆ ಮರಳಲಿದ್ದಾರೆ” ಎಂಬ ಸಾಹುಕಾರ್ ರಮೇಶ್ ಜಾರಕಿಹೊಳಿ ಅವರ ಹೇಳಿಕೆಗೆ ಸವದಿ ಅವರು ತಮ್ಮದೇ ಶೈಲಿಯಲ್ಲಿ ವ್ಯಂಗ್ಯಭರಿತ ತಿರುಗೇಟು ನೀಡಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಲಕ್ಷ್ಮಣ ಸವದಿ ಅವರು, “ಯಾರು ಬಿಜೆಪಿಗೆ ಬರ್ತಾರೆ ಎಂದು ರಮೇಶ್ ಜಾರಕಿಹೊಳಿ ಹೇಳುತ್ತಿದ್ದಾರೋ, ಅವರೇ ಈಗ ಜೆಡಿಎಸ್ ಕಡೆ ಮುಖ ಮಾಡುತ್ತಿದ್ದಾರೆ. ಬಿಜೆಪಿಯ ಶಕ್ತಿ ಕುಸಿಯುತ್ತಿದೆ ಎಂಬುದು ಅವರಿಗೇ ಗೊತ್ತು. ಹೀಗಿರುವಾಗ ನಾನು ಕಾಂಗ್ರೆಸ್ ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ” ಎಂದು ಸ್ಪಷ್ಟಪಡಿಸಿದರು. ಜಾರಕಿಹೊಳಿ ಅವರ ಆಹ್ವಾನವನ್ನು ಸಾರಾಸಗಟಾಗಿ ತಿರಸ್ಕರಿಸಿದ ಅವರು, ಬಿಜೆಪಿಯ ಒಳಗಿನ ಪರಿಸ್ಥಿತಿಯನ್ನೇ ಹಾಸ್ಯದ ವಸ್ತುವಾಗಿಸಿಕೊಂಡರು.

    ರಮೇಶ್ ಜಾರಕಿಹೊಳಿ ಅವರು ಇತ್ತೀಚೆಗೆ ಸವದಿ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಮರಳಿ ಬಿಜೆಪಿ ಸೇರಲಿದ್ದಾರೆ ಎಂದು ಭವಿಷ್ಯ ನುಡಿದಿದ್ದರು. ಈ ಬಗ್ಗೆ ಲೇವಡಿ ಮಾಡಿದ ಸವದಿ, “ನನ್ನ ಭವಿಷ್ಯದ ಬಗ್ಗೆ ಚಿಂತಿಸುವ ಬದಲು, ತಮ್ಮ ಪಕ್ಷದ ನಾಯಕರು ಏಕೆ ಬೇರೆಡೆಗೆ ವಲಸೆ ಹೋಗುತ್ತಿದ್ದಾರೆ ಎಂಬುದನ್ನು ಅವರು ಗಮನಿಸಲಿ. ರಾಜಕೀಯದಲ್ಲಿ ಅನಿವಾರ್ಯತೆ ಇರುವುದು ಅವರಿಗೇ ಹೊರತು ನನಗಲ್ಲ” ಎಂದು ಹರಿಹಾಯ್ದಿದ್ದಾರೆ.

    ಈ ಬೆಳವಣಿಗೆಯು ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಮಾತ್ರವಲ್ಲದೆ ರಾಜ್ಯ ರಾಜಕೀಯದಲ್ಲೂ ಸಂಚಲನ ಮೂಡಿಸಿದ್ದು, ಮುಂಬರುವ ಚುನಾವಣೆಗಳ ದೃಷ್ಟಿಯಿಂದ ಉಭಯ ನಾಯಕರ ಈ ಜಿದ್ದಾಜಿದ್ದಿ ತೀವ್ರ ಕುತೂಹಲ ಕೆರಳಿಸಿದೆ. ಸವದಿ ಅವರ ಈ ಹೇಳಿಕೆಯು ಬಿಜೆಪಿಯಲ್ಲಿನ ಆಂತರಿಕ ಗೊಂದಲಗಳನ್ನು ಎತ್ತಿ ತೋರಿಸುವಂತೆ ಮಾಡಿದ್ದು, ರಮೇಶ್ ಜಾರಕಿಹೊಳಿ ಮುಂದಿನ ನಡೆ ಏನು ಎಂಬುದು ಈಗ ಕಾದು ನೋಡಬೇಕಿದೆ.

    ಇದನ್ನು ಓದಿ : Tribute to the brave martyrs of Jallianwala Bagh |ಜಲಿಯನ್‌ವಾಲಾ ಬಾಗ್ ವೀರ ಹುತಾತ್ಮರಿಗೆ ಪ್ರಧಾನಿ ಮೋದಿ ಭಾವಪೂರ್ಣ ನಮನ!: ಬ್ರಿಟಿಷರ ಅನಾಗರಿಕತೆಗೆ ಬಲಿಯಾದ ಅಮಾಯಕರ ಸ್ಮರಣೆ;

    LEAVE A REPLY

    Please enter your comment!
    Please enter your name here

    error: Content is protected !!