Home ತಾಜಾ ಸುದ್ದಿ Chhattisgarh : ಪತ್ನಿಯ ತಲೆ ಕಡಿದು ಕೈಯಲ್ಲಿ ಹಿಡಿದು ಊರೆಲ್ಲಾ ಮೆರವಣಿಗೆ!

    Chhattisgarh : ಪತ್ನಿಯ ತಲೆ ಕಡಿದು ಕೈಯಲ್ಲಿ ಹಿಡಿದು ಊರೆಲ್ಲಾ ಮೆರವಣಿಗೆ!

    0
    100
    Chhattisgarh: A procession through the town, holding the head of his wife in his hand!

    ಕೊರ್ಬಾ, ಏಪ್ರಿಲ್ 24 : ಛತ್ತೀಸ್‌ಗಢದ ಕೊರ್ಬಾ ಜಿಲ್ಲೆಯ ಬುಂದೇಲಿ ಗ್ರಾಮದಲ್ಲಿ ಮನುಕುಲವೇ ತಲೆತಗ್ಗಿಸುವಂತಹ ಭೀಕರ ಘಟನೆಯೊಂದು ನಡೆದಿದೆ. 58 ವರ್ಷದ ಸಲಿಕ್ ರಾಮ್ ಯಾದವ್ ಎಂಬಾತ ಮದ್ಯದ ಅಮಲು ಮತ್ತು ಕ್ಷುಲ್ಲಕ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತನ್ನ ಪತ್ನಿ ಸುಮತಿ (50) ಅವರ ತಲೆಯನ್ನು ಹರಿತವಾದ ಆಯುಧದಿಂದ ಕಡಿದು ಕೊಲೆ ಮಾಡಿದ್ದಾನೆ. ಈ ಘಟನೆಯು ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದು, ಕ್ರೌರ್ಯದ ಪರಮಾವಧಿಯನ್ನು ಬಿಂಬಿಸಿದೆ.

    ಕೋಳಿ ಸಾಕಣೆ ಕೇಂದ್ರದಲ್ಲಿ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ ಸಲಿಕ್, ಬುಧವಾರ ಸಂಜೆ ಪತ್ನಿಯೊಂದಿಗೆ ಜಗಳವಾಡಿದ್ದಾನೆ. ಜಗಳ ವಿಕೋಪಕ್ಕೆ ಹೋದಾಗ ಕೋಳಿ ಕತ್ತರಿಸಲು ಬಳಸುವ ಆಯುಧದಿಂದ ಪತ್ನಿಯ ಶಿರಚ್ಛೇದ ಮಾಡಿದ್ದಾನೆ. ಹತ್ಯೆಯ ನಂತರ ಆತ ಒಂದು ಕೈಯಲ್ಲಿ ಕತ್ತರಿಸಿದ ತಲೆ ಹಾಗೂ ಇನ್ನೊಂದು ಕೈಯಲ್ಲಿ ರಕ್ತಸಿಕ್ತ ಆಯುಧ ಹಿಡಿದು ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ಮಾಡಿದ್ದಾನೆ. ಬಳಿಕ ತಲೆಯನ್ನು ಚೀಲದಲ್ಲಿ ತುಂಬಿಕೊಂಡು ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.

    ಮೂಲತಃ ಅಜ್ಗರ್‌ಬಹಾರ್ ಹಲ್ದಿಮಾಡ ಗ್ರಾಮದ ಈ ದಂಪತಿ ಕಳೆದ ಮೂರು ವರ್ಷಗಳಿಂದ ಕೋಳಿ ಸಾಕಣೆ ಕೇಂದ್ರದಲ್ಲೇ ವಾಸವಿದ್ದರು. ಈ ದಂಪತಿಗೆ ನಾಲ್ವರು ಮಕ್ಕಳಿದ್ದು, ತಂದೆ ಜೈಲು ಪಾಲಾಗಿ ತಾಯಿ ಸಾವನ್ನಪ್ಪಿರುವುದರಿಂದ ಮಕ್ಕಳ ಭವಿಷ್ಯ ಈಗ ಅಂಧಕಾರಕ್ಕೆ ದೂಡಲ್ಪಟ್ಟಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    LEAVE A REPLY

    Please enter your comment!
    Please enter your name here

    error: Content is protected !!