Tuesday, May 12, 2026
Homeತಾಜಾ ಸುದ್ದಿBargi Dam tragedy update : ನಾಪತ್ತೆಯಾದವರಿಗಾಗಿ ಸೇನೆಯಿಂದ ಕಾರ್ಯಾಚರಣೆ; ದೋಣಿಯಲ್ಲಿದ್ದವರು 41 ಜನರಷ್ಟೇನಾ?

Bargi Dam tragedy update : ನಾಪತ್ತೆಯಾದವರಿಗಾಗಿ ಸೇನೆಯಿಂದ ಕಾರ್ಯಾಚರಣೆ; ದೋಣಿಯಲ್ಲಿದ್ದವರು 41 ಜನರಷ್ಟೇನಾ?

ಜಬಲ್ಪುರ : ದುರಂತದಲ್ಲಿ 9 ಮಂದಿ ಮೃತಪಟ್ಟಿದ್ದು, 28 ಮಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಇನ್ನೂ ಒಬ್ಬ ವ್ಯಕ್ತಿ ಮತ್ತು ಮೂವರು ಮಕ್ಕಳು ನಾಪತ್ತೆಯಾಗಿದ್ದಾರೆ. ಈ ನಾಪತ್ತೆಯಾದವರನ್ನು ಪತ್ತೆಹಚ್ಚಲು ಸುಮಾರು 200ಕ್ಕೂ ಹೆಚ್ಚು ರಕ್ಷಕರು, ಅದರಲ್ಲಿಯೂ ಆಗ್ರಾದಿಂದ ಆಗಮಿಸಿದ 20 ಸೇನಾ ಡೈವರ್‌ಗಳು ಶನಿವಾರ ಬೆಳಗ್ಗೆ 5 ಗಂಟೆಯಿಂದಲೇ ಕಾರ್ಯಾಚರಣೆ ಆರಂಭಿಸಿದ್ದಾರೆ. ಶೋಧನೆಯ ವ್ಯಾಪ್ತಿಯನ್ನು ನರ್ಮದಾ ನದಿಯ ಹಿನ್ನೀರಿನ 5 ಕಿ.ಮೀ. ಪ್ರದೇಶಕ್ಕೆ ವಿಸ್ತರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಅಂಜುಲ್ ಆಯಂಕ್ ಮಿಶ್ರಾ ತಿಳಿಸಿದ್ದಾರೆ.

ದೋಣಿಯಲ್ಲಿದ್ದವರು ಯಾರೆಂಬುದರ ಬಗ್ಗೆ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ. ಬೋರ್ಡಿಂಗ್ ಪಾಯಿಂಟ್ ಬಳಿಯ ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, 43 ಜನರು ದೋಣಿಯತ್ತ ತೆರಳುತ್ತಿರುವುದು ಕಂಡುಬಂದಿದೆ, ಆದರೆ ಸದ್ಯಕ್ಕೆ 41 ಪ್ರಯಾಣಿಕರ ಪಟ್ಟಿಯನ್ನು ದೃಢಪಡಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ (FIR) ದಾಖಲಿಸಲು ಪೊಲೀಸ್ ಇಲಾಖೆ ಸಿದ್ಧತೆ ನಡೆಸುತ್ತಿದೆ. ಈವರೆಗೆ 9 ಮೃತದೇಹಗಳ ಮರಣೋತ್ತರ ಪರೀಕ್ಷೆ ಪೂರ್ಣಗೊಂಡಿದೆ.

ದುರಂತದ ಕುರಿತು ಉನ್ನತ ಮಟ್ಟದ ತನಿಖೆಗೆ ಈಗಾಗಲೇ ರಾಜ್ಯ ಸರ್ಕಾರ ಆದೇಶಿಸಿದೆ. ನಿರ್ಲಕ್ಷ್ಯ ಮತ್ತು ಸುರಕ್ಷತಾ ನಿಯಮಗಳ ಉಲ್ಲಂಘನೆಗಾಗಿ ಮೂವರು ಸಿಬ್ಬಂದಿಯನ್ನು ವಜಾ ಮಾಡಲಾಗಿದೆ. ಇದಲ್ಲದೆ, ರಾಜ್ಯಾದ್ಯಂತ ಇಂತಹ ಕ್ರೂಸ್ ಮತ್ತು ದೋಣಿ ವಿಹಾರ ಸೇವೆಗಳನ್ನು ನಿಷೇಧಿಸಲಾಗಿದೆ. ಗುರುವಾರ ಸಂಜೆ ಸುರಿದ ಭಾರೀ ಮಳೆ ಮತ್ತು ಬಲವಾದ ಗಾಳಿಯ ಸಂದರ್ಭದಲ್ಲಿ ನಡೆದ ಈ ಘಟನೆಯು ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!