ಲಕ್ನೊ: ಉತ್ತರ ಪ್ರದೇಶದಲ್ಲಿ ಬುಧವಾರ ಬೀಸಿದ ಭೀಕರ ಬಿರುಗಾಳಿ, ಮಳೆ ಮತ್ತು ಸಿಡಿಲಿಗೆ ರಾಜ್ಯಾದ್ಯಂತ ಕನಿಷ್ಠ 87 ಮಂದಿ ಮೃತಪಟ್ಟಿದ್ದು, ಭಾರಿ ಪ್ರಮಾಣದ ಆಸ್ತಿಪಾಸ್ತಿ ನಾಶ ಸಂಭವಿಸಿದೆ. ಈ ನೈಸರ್ಗಿಕ ವಿಕೋಪದ ನಡುವೆ ಬರೇಲಿಯ ಭಮೋರಾ ಎಂಬಲ್ಲಿ ನಡೆದ ಅಚ್ಚರಿಯ ಘಟನೆಯೊಂದು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗಿದೆ. ದೈನಿಕ್ ಜಾಗರಣ್ ವರದಿಯ ಪ್ರಕಾರ, ವ್ಯಕ್ತಿಯೊಬ್ಬರು ಬಿರುಗಾಳಿಯ ತೀವ್ರತೆಗೆ ಸಿಲುಕಿ ಗಾಳಿಯಲ್ಲಿ ಹಾರಿ ಹೋಗಿರುವ ಘಟನೆ ವರದಿಯಾಗಿದೆ.
ಈ ಘಟನೆಯ ವಿವರಗಳ ಪ್ರಕಾರ, ಭಮೋರಾ ಪ್ರದೇಶದ ಬಬಿಯಾನ ಗ್ರಾಮದ ನಿವಾಸಿ ನಮ್ಹೆ ನಿಯಾನ್ ಎಂಬವರು ಬಿರುಗಾಳಿಯಿಂದ ತಪ್ಪಿಸಿಕೊಳ್ಳಲು ವಿವಾಹ ಕಾರ್ಯಕ್ರಮವೊಂದರಲ್ಲಿ ಆಶ್ರಯ ಪಡೆಯಲು ಹೋಗಿದ್ದರು. ಅಲ್ಲಿ ಸ್ಥಾಪಿಸಲಾಗಿದ್ದ ತಗಡಿನ ಶೆಡ್‌ನಲ್ಲಿ ಅವರು ಆಶ್ರಯ ಪಡೆದಿದ್ದರು. ಆದರೆ, ಬಲವಾಗಿ ಬೀಸಿದ ಬಿರುಗಾಳಿಗೆ ಇಡೀ ಶೆಡ್‌ನೊಂದಿಗೆ ನಿಯಾನ್ ಅವರು ಹಾರಿಕೊಂಡು ಹೋಗಿದ್ದಾರೆ. ಸುಮಾರು 300 ಮೀಟರ್ ದೂರದಷ್ಟು ಗಾಳಿಯಲ್ಲಿ ಹಾರಿದ ಅವರು ಕೊನೆಗೆ ಬಯಲೊಂದರಲ್ಲಿ ಪತನಗೊಂಡಿದ್ದಾರೆ.
ಶೆಡ್ ಸಮೇತ ಹಾರಿದ ಈ ಘಟನೆಯಲ್ಲಿ ನಮ್ಹೆ ನಿಯಾನ್ ಅವರ ಮೂಳೆ ಮುರಿತಕ್ಕೊಳಗಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನು ಓದಿ : Abdul Rahim Saudi Arabia release : 20 ವರ್ಷಗಳ ಜೈಲುವಾಸದ ನಂತರ ಕೇರಳದ ಅಬ್ದುಲ್ ರಹೀಮ್ ಮೇ 20 ರಂದು ಬಿಡುಗಡೆಯಾಗುವ ಸಾಧ್ಯತೆ!

