HomeLOCALKatipalla Youth Missing : ಕ್ಯಾಟರಿಂಗ್ ಕೆಲಸಕ್ಕೆ ತೆರಳಿದ್ದ 19 ವರ್ಷದ ಯುವಕ ಇಸ್ಮಾಯಿಲ್ ಫಹಾಸ್...

Katipalla Youth Missing : ಕ್ಯಾಟರಿಂಗ್ ಕೆಲಸಕ್ಕೆ ತೆರಳಿದ್ದ 19 ವರ್ಷದ ಯುವಕ ಇಸ್ಮಾಯಿಲ್ ಫಹಾಸ್ ನಾಪತ್ತೆ!

ಮಂಗಳೂರು : ಕಾಟಿಪಳ್ಳದ ನಿವಾಸಿ ಇಸ್ಮಾಯಿಲ್ ಫಹಾಸ್ (19) ಎಂಬಾತನೇ ನಾಪತ್ತೆಯಾದ ಯುವಕ. ಜೂನ್ 1ರಂದು ರಾತ್ರಿ 9 ಗಂಟೆಗೆ ಮಂಗಳೂರಿನಲ್ಲಿ ಕ್ಯಾಟರಿಂಗ್ ಕೆಲಸಕ್ಕೆ ಹೋಗುತ್ತೇನೆ ಎಂದು ಹೇಳಿ ಫಹಾಸ್ ಮನೆಯಿಂದ ಹೊರಟಿದ್ದ. ಆದರೆ ಆ ಬಳಿಕ ಆತ ಮನೆಗೆ ಮರಳಿಯೇ ಇಲ್ಲ. ಈ ಹಿಂದೆ ಫಹಾಸ್ ಆಗಾಗ ತಾನು ಕೆಲಸಕ್ಕಾಗಿ ಬೆಂಗಳೂರಿಗೆ ಹೋಗುವುದಾಗಿ ಮನೆಯಲ್ಲಿ ಹೇಳುತ್ತಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆತನ ಸ್ನೇಹಿತರನ್ನು ಸಂಪರ್ಕಿಸಿದಾಗ, ಆತ ಬೆಂಗಳೂರಿಗೆ ಬಂದಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ.

ಪ್ರಸ್ತುತ ಫಹಾಸ್‌ನ ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಆಗಿದೆ. ಇದರಿಂದ ಕಂಗಾಲಾದ ಕುಟುಂಬಸ್ಥರು ಸಂಬಂಧಿಕರು ಹಾಗೂ ಪರಿಚಯಸ್ಥರ ಮನೆ ಸೇರಿದಂತೆ ಎಲ್ಲೆಡೆ ಹುಡುಕಾಟ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಮಗ ಎಲ್ಲೂ ಪತ್ತೆಯಾಗದ ಕಾರಣ ಆತನ ತಂದೆ ಅಬ್ದುಲ್ ರಝಾಕ್ ಅವರು ಸುರತ್ಕಲ್ ಪೊಲೀಸ್ ಠಾಣೆಗೆ ಧಾವಿಸಿ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಯುವಕನ ಪತ್ತೆಗಾಗಿ ತನಿಖೆ ಆರಂಭಿಸಿದ್ದಾರೆ.

Read This : Belthangady : ಮದ್ದಡ್ಕ ಸಮೀಪ ಕಾರು-ಸ್ಕೂಟರ್ ಭೀಕರ ಢಿಕ್ಕಿ; ಚರಂಡಿಗೆ ಬಿದ್ದ ವಾಹನಗಳು, ಸವಾರರಿಗೆ ಗಾಯ!

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments