Homeತಾಜಾ ಸುದ್ದಿNepal Floods : ಮಾನಸ ಸರೋವರ ಯಾತ್ರೆಗೆ ತೆರಳಿದ್ದ ನಾಲ್ವರು ಎನ್‌ಆರ್‌ಐ ಕನ್ನಡಿಗರು ನಾಪತ್ತೆ –...

Nepal Floods : ಮಾನಸ ಸರೋವರ ಯಾತ್ರೆಗೆ ತೆರಳಿದ್ದ ನಾಲ್ವರು ಎನ್‌ಆರ್‌ಐ ಕನ್ನಡಿಗರು ನಾಪತ್ತೆ – ಕಲಬುರಗಿಯ ಇಬ್ಬರು ಸುರಕ್ಷಿತ.

ಬೆಂಗಳೂರು : ಮೂಲತಃ ಬೆಂಗಳೂರಿನವರಾಗಿದ್ದು ಪ್ರಸ್ತುತ ಅಮೆರಿಕದಲ್ಲಿ ನೆಲೆಸಿರುವ ನಾಲ್ವರು ಕನ್ನಡಿಗರು ಮಾನಸ ಸರೋವರ ಯಾತ್ರೆಗಾಗಿ ಅಮೆರಿಕದಿಂದ ನೇಪಾಳಕ್ಕೆ ಆಗಮಿಸಿದ್ದರು. ಪ್ರವಾಹ ಸಂಭವಿಸಿದ ಪ್ರದೇಶದಲ್ಲಿದ್ದ ಚೀನಾ ಎಂಬೆಸ್ಸಿಗೆ ತೆರಳಿದ್ದ ಈ ಯಾತ್ರಿಕರು, ಪ್ರಕೃತಿ ವಿಕೋಪದ ಬಳಿಕ ಕುಟುಂಬಸ್ಥರು ಹಾಗೂ ಸ್ನೇಹಿತರ ಸಂಪರ್ಕಕ್ಕೆ ಸಿಗದೆ ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಈ ಸಂಬಂಧ ಅವರ ಆಪ್ತ ಸ್ನೇಹಿತರು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ (KSDMA) ಮಾಹಿತಿ ನೀಡಿ ತುರ್ತು ರಕ್ಷಣೆಗಾಗಿ ನೆರವು ಕೋರಿದ್ದಾರೆ.

ಇದೇ ವೇಳೆ, ಹೈದರಾಬಾದ್‌ನ 23 ಮಂದಿ ಹಾಗೂ ಕರ್ನಾಟಕದ ಇಬ್ಬರು ಸೇರಿದಂತೆ ಒಟ್ಟು 25 ಮಂದಿಯ ಯಾತ್ರಾರ್ಥಿ ತಂಡ ಪ್ರವಾಹದ ಸುಳಿಗೆ ಸಿಲುಕಿತ್ತು. ಅವರಲ್ಲಿದ್ದ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಮಲ್ಲಿನಾಥ್ ಕೊಲಕುಂದಿ ಹಾಗೂ ಸಂಗಮೇಶ್ ಕನಕಪುರ ಎಂಬ ಇಬ್ಬರು ಕನ್ನಡಿಗರನ್ನು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಯಶಸ್ವಿಯಾಗಿ ಸಂಪರ್ಕಿಸಿ ರಕ್ಷಿಸಿದೆ. ಸದ್ಯ ಇಬ್ಬರೂ ಸುರಕ್ಷಿತವಾಗಿದ್ದು, ಅವರನ್ನು ನೇಪಾಳದಿಂದ ನವದೆಹಲಿ ಮಾರ್ಗವಾಗಿ ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ರಾಜ್ಯ ಸರ್ಕಾರ ಎಲ್ಲಾ ಅಗತ್ಯ ವ್ಯವಸ್ಥೆಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳುತ್ತಿದೆ.

ಇದನ್ನು ಓದಿ : Sullia : ಅರಂತೋಡು ದೇವರಕೊಲ್ಲಿ ಬಳಿ ನಿಲ್ಲಿಸಿದ್ದ ಟಿಟಿ ಮೇಲೆ ಪಲ್ಟಿಯಾದ ಲಾರಿ; ಮೂವರಿಗೆ ಗಂಭೀರ ಗಾಯ!

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments