ಸುಳ್ಯ, ಆಗಸ್ಟ್ 27: ಗುಜರಾತ್ನ ಅಹಮದಾಬಾದ್ ಮೂಲದ ಪ್ರವಾಸಿಗರ ತಂಡವೊಂದು ಟೆಂಪೋ ಟ್ರಾವೆಲರ್ (TT) ವಾಹನದಲ್ಲಿ ಮಡಿಕೇರಿಯಿಂದ ಮಂಗಳೂರು ಕಡೆಗೆ ಪ್ರಯಾಣಿಸುತ್ತಿತ್ತು. ಬುಧವಾರ, ಆಗಸ್ಟ್ 26ರ ಸಂಜೆ ದೇವರಕೊಲ್ಲಿ ಅಬ್ಬಿ ಜಲಪಾತದ ಬಳಿ ರಸ್ತೆ ಬದಿಯಲ್ಲಿ ಪ್ರವಾಸಿಗರು ತಮ್ಮ ಟಿಟಿ ವಾಹನವನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದರು.
ಇದೇ ಮಾರ್ಗವಾಗಿ ಸುಳ್ಯ ಕಡೆಗೆ ಚಲಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಟಿಟಿ ವಾಹನದ ಮೇಲೆಯೇ ಉರುಳಿ ಬಿದ್ದಿದೆ. ಪರಿಣಾಮವಾಗಿ ಟಿಟಿಯಲ್ಲಿದ್ದ ಏಳು ಮಂದಿ ಪ್ರವಾಸಿಗರ ಪೈಕಿ ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಲಾರಿ ಚಾಲಕ ಹಾಗೂ ಕ್ಲೀನರ್ ಕೂಡ ತೀವ್ರ ಸ್ವರೂಪದ ಗಾಯಗಳಿಗೆ ತುತ್ತಾಗಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಆಂಬುಲೆನ್ಸ್ ಮೂಲಕ ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಂತರ ಕ್ರೇನ್ ಸಹಾಯದಿಂದ ಹೆದ್ದಾರಿಯಲ್ಲಿ ಉರುಳಿಬಿದ್ದಿದ್ದ ಲಾರಿಯನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ಇದನ್ನು ಓದಿ : Puttur : ಕದ್ದ ಓಮ್ನಿ ಕಾರನ್ನು ಆಂಬುಲೆನ್ಸ್ ಮಾಡಿದ್ದ ಅಂತರರಾಜ್ಯ ಕಳ್ಳರ ಗ್ಯಾಂಗ್ ಅರೆಸ್ಟ್!