ಪುತ್ತೂರು: ಹುಣಸೂರು ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಪುತ್ತೂರು ತಾಲೂಕಿನ ಯುವಕನೊಬ್ಬ ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ. ಕಾವು ಮಾಡನ್ನೂರು ನಿವಾಸಿ ಸುಲೈಮಾನ್ ಅವರ ಪುತ್ರ ಸಂಶುದ್ದೀನ್ ಮೃತ ದುರ್ದೈವಿ. ಹುಣಸೂರು ಸಮೀಪ ಪ್ರಯಾಣಿಸುತ್ತಿದ್ದ ವೇಳೆ ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಸಂಶುದ್ದೀನ್ ಅವರು ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಮೃತರು ತಂದೆ, ಸಹೋದರರು ಹಾಗೂ ಸಹೋದರಿ ಸೇರಿದಂತೆ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಯುವಕನ ಅಕಾಲಿಕ ಸಾವಿನಿಂದ ಕಾವು ಮಾಡನ್ನೂರು ಗ್ರಾಮದಲ್ಲಿ ತೀವ್ರ ಶೋಕದ ಛಾಯೆ ಆವರಿಸಿದೆ.
ಮೃತರ ಅಂತಿಮ ಕಾರ್ಯವು ಆಗಸ್ಟ್ 28ರಂದು ಸಂಜೆ ಮಾಡನ್ನೂರು ಜುಮಾ ಮಸೀದಿಯ ದಫನ ಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಅಪಘಾತ ಸಂಭವಿಸಿದ ನಿಖರ ಕಾರಣ ಹಾಗೂ ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ.
ಇದನ್ನು ಓದಿ : Mangaluru : ನರ್ಸ್ಗೆ ಕೊಲೆ ಬೆದರಿಕೆ ಹಾಕಿದ ನೌಶದ್; ದೂರು ನೀಡಿದ ಬೆನ್ನಲ್ಲೇ ‘ತಲೆ ತೆಗೀತೀನಿ’ ಎಂದು ವಾಟ್ಸಾಪ್ನಲ್ಲಿ ಧಮ್ಕಿ!