Homeತಾಜಾ ಸುದ್ದಿPuttur : ಕೋಡಿಂಬಾಡಿ ಸೇಡಿಯಾಪು ಬಳಿ ಪದೇ ಪದೇ ಅಪಘಾತ!

Puttur : ಕೋಡಿಂಬಾಡಿ ಸೇಡಿಯಾಪು ಬಳಿ ಪದೇ ಪದೇ ಅಪಘಾತ!

ಪುತ್ತೂರು : ಪುತ್ತೂರು-ಉಪ್ಪಿನಂಗಡಿ ರಸ್ತೆಯ ಕೋಡಿಂಬಾಡಿ ಗ್ರಾಮದ ಸೇಡಿಯಾಪು ಸಮೀಪದ ಕಾಪು ಎಂಬಲ್ಲಿ ಸರಣಿ ಅಪಘಾತಗಳು ಸಂಭವಿಸುತ್ತಿದ್ದು, ವಾಹನ ಸವಾರರು ತೀವ್ರ ಆತಂಕದಲ್ಲಿ ಸಂಚರಿಸುವಂತಾಗಿದೆ.

ಆಗಸ್ಟ್ 28 ಹಾಗೂ 29 ರಂದು ಸತತ ಎರಡು ದಿನಗಳ ಕಾಲ ಕಾಪು ಬಳಿ ಪಿಕಪ್ ವಾಹನಗಳು ನಿಯಂತ್ರಣ ತಪ್ಪಿ ರಸ್ತೆಗೆ ಮಗುಚಿ ಬಿದ್ದ ಘಟನೆಗಳು ನಡೆದಿವೆ. ಪ್ರಸ್ತುತ ಪುತ್ತೂರು-ಉಪ್ಪಿನಂಗಡಿ ರಸ್ತೆಯಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ನಡೆಯುವ ಸ್ಥಳದಲ್ಲಿ ಯಾವುದೇ ರೀತಿಯ ಮುನ್ನೆಚ್ಚರಿಕಾ ಫಲಕಗಳನ್ನು (Caution Signboards) ಅಳವಡಿಸಿಲ್ಲ. ರಸ್ತೆಯ ತಿರುವು ಹಾಗೂ ಕಾಮಗಾರಿಯ ಸ್ಥಿತಿ ಅರಿಯದೆ ವೇಗವಾಗಿ ಬರುವ ವಾಹನಗಳು ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಈ ಹಿಂದೆಯೂ ಇದೇ ಸ್ಥಳದಲ್ಲಿ ಪದೇ ಪದೇ ಅಪಘಾತಗಳು ಸಂಭವಿಸಿದ್ದು, ಸಂಬಂಧಪಟ್ಟ ಇಲಾಖೆ ಹಾಗೂ ಗುತ್ತಿಗೆದಾರರು ತಕ್ಷಣವೇ ಮುನ್ನೆಚ್ಚರಿಕಾ ಫಲಕ ಮತ್ತು ಬ್ಯಾರಿಕೇಡ್‌ಗಳನ್ನು ಅಳವಡಿಸಿ ಜೀವಹಾನಿ ತಪ್ಪಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಇದನ್ನು ಓದಿ : Kasaragod : ನಿಯಂತ್ರಣ ತಪ್ಪಿ ಮನೆ ಮೇಲೆ ಉರುಳಿಬಿದ್ದ ಲಾರಿ ಚಾಲಕ ಮೃತ್ಯು!

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments