ಉಡುಪಿ: ರಾಯಚೂರು ಮೂಲದ ಕೂಲಿ ಕಾರ್ಮಿಕರೊಬ್ಬರು ಬ್ರಹ್ಮಾವರ ತಾಲೂಕಿನ ವಾರಂಬಳ್ಳಿಯಿಂದ ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ನಡೆದಿದ್ದು, ಅವರ ಸುಳಿವಿಗಾಗಿ ಬ್ರಹ್ಮಾವರ ಪೊಲೀಸ್ ಠಾಣೆಯ ಪೊಲೀಸರು ಸಾರ್ವಜನಿಕರ ನೆರವು ಕೋರಿದ್ದಾರೆ.
ನಾಪತ್ತೆಯಾದ ವ್ಯಕ್ತಿಯನ್ನು ಮೂಲತಃ ರಾಯಚೂರು ಜಿಲ್ಲೆಯ ಲಿಂಗಸೂರು ತಾಲೂಕಿನ ಮುದ್ಗಲ್ ಗ್ರಾಮಾಂತರ ಮೇಗಳ ಪೇಟೆ ನಿವಾಸಿ ನಿಂಗಪ್ಪ (44) ಎಂದು ಗುರುತಿಸಲಾಗಿದೆ. ಇವರು ಪ್ರಸ್ತುತ ಉಡುಪಿಯ ವಾರಂಬಳ್ಳಿ ಗ್ರಾಮದ ಎಸ್‌ಎಂಎಸ್ ಶಾಲೆ ಬಳಿ ನೆಲೆಸಿದ್ದು ಕೂಲಿ ಕೆಲಸ ಮಾಡಿಕೊಂಡಿದ್ದರು.
ಮೇ 24ರಂದು ಅಪರಾಹ್ನ ಸುಮಾರು 12:00 ಗಂಟೆಗೆ ನಿಂಗಪ್ಪ ಅವರು ತಮ್ಮ ಪತ್ನಿಗೆ ಫೋನ್ ಕರೆ ಮಾಡಿ ಮಾತನಾಡಿದ್ದರು. ಆದರೆ, ಆ ಕರೆಯ ನಂತರ ಅವರು ಮನೆಗೂ ಮರಳದೆ, ಅವರ ಮೊಬೈಲ್ ಸಂಪರ್ಕಕ್ಕೂ ಸಿಗದೆ ದಿಢೀರನೆ ನಾಪತ್ತೆಯಾಗಿದ್ದಾರೆ.
ಚಹರೆ ವಿವರ: ನಿಂಗಪ್ಪ ಅವರು 5 ಅಡಿ 8 ಇಂಚು ಎತ್ತರ, ಎಣ್ಣೆಕಪ್ಪು ಮೈಬಣ್ಣ ಹಾಗೂ ಸಣಕಲು ಶರೀರ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಯಾವುದೇ ಮಾಹಿತಿ ಅಥವಾ ಸುಳಿವು ದೊರೆತಲ್ಲಿ ಸಾರ್ವಜನಿಕರು ತಕ್ಷಣವೇ ಬ್ರಹ್ಮಾವರ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ 0820-2461044 ಅಥವಾ ಮೊಬೈಲ್ ಸಂಖ್ಯೆ 9480805453 ಸಂಪರ್ಕಿಸುವಂತೆ ಬ್ರಹ್ಮಾವರ ಪೊಲೀಸ್ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನು ಓದಿ : Mangaluru | ಉಳ್ಳಾಲದಲ್ಲಿ ಭೀಕರ ಕಡಲ ದುರಂತ: ಸಮುದ್ರದಲ್ಲಿ ಮುಳುಗಿಹೋದ ಬೋಟ್, ಐವರು ಮೀನುಗಾರರ ಅದ್ಭುತ ರಕ್ಷಣೆ!