Homeತಾಜಾ ಸುದ್ದಿUdupi : ಉಡುಪಿ ಲಾಡ್ಜ್‌ನಲ್ಲಿ ಗದಗ್ ಯುವಕ ಆತ್ಮಹತ್ಯೆ!

Udupi : ಉಡುಪಿ ಲಾಡ್ಜ್‌ನಲ್ಲಿ ಗದಗ್ ಯುವಕ ಆತ್ಮಹತ್ಯೆ!

ಉಡುಪಿ: ನಗರದ ಖಾಸಗಿ ವಸತಿಗೃಹವೊಂದರಲ್ಲಿ ಬಾಡಿಗೆಗೆ ಕೊಠಡಿ ಪಡೆದುಕೊಂಡಿದ್ದ ಯುವಕನೊಬ್ಬ ಭಾನುವಾರ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ನಡೆದಿದೆ.

ಮೃತರನ್ನು ಗದಗ್ ಜಿಲ್ಲೆಯ ಸಂಗಪ್ಪ ಎಂಬುವವರ ಮಗ ಮನೋಹರ್ ಮೂಲಿಮನಿ (24) ಎಂದು ಗುರುತಿಸಲಾಗಿದೆ. ವಸತಿಗೃಹದ ಕೊಠಡಿಯಲ್ಲಿ ಯುವಕ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬರುತ್ತಿದ್ದಂತೆ ಲಾಡ್ಜ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ವಿಷಯ ತಿಳಿದ ತಕ್ಷಣ ಉಡುಪಿ ನಗರ ಪೊಲೀಸ್ ಠಾಣೆಯ ಎಸ್‌ಐ ಭರತೇಶ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮಹಜರು ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಬಳಿಕ ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರ ನೆರವಿನಿಂದ ಮೃತದೇಹವನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ  ದಾಖಲಾಗಿದ್ದು, ತನಿಖೆ ಮುಂದುವರಿದಿದೆ. 

ಇದನ್ನು ಓದಿ : Karkala : ಕಾರ್ಕಳ MLA ಸುನಿಲ್ ಕುಮಾರ್ ತಲೆ ಕತ್ತರಿಸಿದ ಎಡಿಟೆಡ್ ವಿಡಿಯೋ ಪೋಸ್ಟ್! ಆರೋಪಿ ಪೋಲಿಸರ ವಶಕ್ಕೆ!

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments