Home ತಾಜಾ ಸುದ್ದಿ Sullia : ಕಳ್ಳತನ ಹಾಗೂ ಕಸ್ಟಡಿಯಿಂದ ಪರಾರಿಯಾಗಿದ್ದ ಅಪರಾಧಿ ಅಜೀಜ್‌ಗೆ ಕಠಿಣ ಜೈಲು ಶಿಕ್ಷೆ ವಿಧಿಸಿದ...

    Sullia : ಕಳ್ಳತನ ಹಾಗೂ ಕಸ್ಟಡಿಯಿಂದ ಪರಾರಿಯಾಗಿದ್ದ ಅಪರಾಧಿ ಅಜೀಜ್‌ಗೆ ಕಠಿಣ ಜೈಲು ಶಿಕ್ಷೆ ವಿಧಿಸಿದ ಕೋರ್ಟ್!

    0
    22
    Sullia: Court sentences Aziz, a criminal who escaped from custody and committed theft, to a stiff prison sentence!

    ಸುಳ್ಯ : ಸುಳ್ಯ ಪೊಲೀಸ್ ಠಾಣೆಯಲ್ಲಿ 2018ರಲ್ಲಿ ದಾಖಲಾಗಿದ್ದ ಪೊಲೀಸ್ ಕಸ್ಟಡಿಯಿಂದ ಪರಾರಿಯಾದ ಗಂಭೀರ ಪ್ರಕರಣಕ್ಕೆ (IPC ಸೆಕ್ಷನ್ 224) ಸಂಬಂಧಿಸಿದಂತೆ ನ್ಯಾಯಾಲಯವು ವಿಚಾರಣೆ ನಡೆಸಿ ಮಹತ್ವದ ತೀರ್ಪು ನೀಡಿದೆ. ಅಜ್ಜಾವರ ನಿವಾಸಿ ಎ.ಎಂ. ಅಜೀಜ್ ಅಪರಾಧಿ ಎಂದು ಸಾಬೀತಾಗಿದ್ದು, ಆತನಿಗೆ ಒಂದು ವರ್ಷದ ಸಾಧಾರಣ ಜೈಲು ಶಿಕ್ಷೆ ಹಾಗೂ 5,000 ರೂಪಾಯಿ ದಂಡ ವಿಧಿಸಲಾಗಿದೆ. ಒಂದು ವೇಳೆ ದಂಡ ಪಾವತಿಸಲು ವಿಫಲನಾದರೆ ಹೆಚ್ಚುವರಿ 45 ದಿನಗಳ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ನ್ಯಾಯಾಲಯ ತಿಳಿಸಿದೆ.

    ಇದಲ್ಲದೆ, ಕಳೆದು ಎರಡು ದಶಕಗಳ ಹಿಂದೆ ಅಂದರೆ 2006ರಲ್ಲಿ ನಡೆದಿದ್ದ ಕಳ್ಳತನ ಪ್ರಕರಣದಲ್ಲೂ ಅಜೀಜ್ ತಪ್ಪಿತಸ್ಥ ಎಂದು ಸಾಬೀತಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್ 457ರ ಅಡಿಯಲ್ಲಿ 3 ವರ್ಷಗಳ ಸಾಧಾರಣ ಜೈಲು ಶಿಕ್ಷೆ ಮತ್ತು 5,000 ರೂಪಾಯಿ ದಂಡ ವಿಧಿಸಲಾಗಿದ್ದು, ಸೆಕ್ಷನ್ 380ರ ಅಡಿಯಲ್ಲೂ ಮತ್ತೊಂದು 3 ವರ್ಷಗಳ ಸಾಧಾರಣ ಜೈಲು ಶಿಕ್ಷೆ ಹಾಗೂ 5,000 ರೂಪಾಯಿ ದಂಡ ವಿಧಿಸಲಾಗಿದೆ. ಸುಳ್ಯದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಟಿ. ದಮಯಂತಿ ಸೋಮಯ್ಯ ಅವರು ಇಡೀ ಪ್ರಕರಣದ ಸುದೀರ್ಘ ವಾದ-ಪ್ರತಿವಾದ ಆಲಿಸಿ ಈ ಕಠಿಣ ತೀರ್ಪನ್ನು ಪ್ರಕಟಿಸಿದ್ದಾರೆ.

    Read This : Bantwal : ಮೆಲ್ಕಾರ್‌ನಲ್ಲಿ ಭೀಕರ ಡ್ರಗ್ಸ್ ಬೇಟೆ; 7.64 ಲಕ್ಷ ಮೌಲ್ಯದ MDMA ಸಹಿತ ಮೂವರ ಬಂಧನ!

    LEAVE A REPLY

    Please enter your comment!
    Please enter your name here

    error: Content is protected !!