Home ತಾಜಾ ಸುದ್ದಿ Nepal Election Results | ಮಾಜಿ ರಾಪರ್ ಬಲೇಂದ್ರ ಶಾ ಪಕ್ಷದ ಭರ್ಜರಿ ಮುನ್ನಡೆ; ‘Gen-Z’...

    Nepal Election Results | ಮಾಜಿ ರಾಪರ್ ಬಲೇಂದ್ರ ಶಾ ಪಕ್ಷದ ಭರ್ಜರಿ ಮುನ್ನಡೆ; ‘Gen-Z’ ಅಲೆಗೆ ಕೊಚ್ಚಿಹೋದರೇ ಹಳೆಯ ರಾಜಕೀಯ ದಿಗ್ಗಜರು?

    0
    54
    Nepal Election Results | Former rapper Balendra Shah's party leads by a landslide; Were old political stalwarts swept away by the 'Gen-z' wave?

    Nepal Election Results : ನೇಪಾಳದ ಇತಿಹಾಸದಲ್ಲಿ ಅತ್ಯಂತ ಪ್ರಮುಖವೆನ್ನಲಾದ 2026ರ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆ ಇಂದು (ಮಾರ್ಚ್ 6) ನಡೆಯುತ್ತಿದೆ. ಕಳೆದ ವರ್ಷ ನಡೆದ ಭೀಕರ ಯುವ ಪ್ರತಿಭಟನೆಗಳ ನಂತರ ಸಾರ್ವತ್ರಿಕ ಚುನಾವಣೆ ನಡೆದಿದ್ದು, ಜನಸಾಮಾನ್ಯರು ಬದಲಾವಣೆಯ ಪರವಾಗಿ ಮತ ಚಲಾಯಿಸಿರುವುದು ಆರಂಭಿಕ ಟ್ರೆಂಡ್‌ಗಳಿಂದ ಸ್ಪಷ್ಟವಾಗುತ್ತಿದೆ. ಬಲೇಂದ್ರ ಶಾ ಅವರ ಆರ್‌ಎಸ್‌ಪಿ ಪಕ್ಷವು ಹಳೆ ತಲೆಮಾರಿನ ನಾಯಕರಾದ ಕೆ.ಪಿ. ಶರ್ಮಾ ಓಲಿ ಮತ್ತು ಗಗನ್ ಥಾಪಾ ಅವರ ಪಕ್ಷಗಳನ್ನು ಹಿಂದಿಕ್ಕಿ ಮುನ್ನುಗ್ಗುತ್ತಿದೆ.
    ಮತ ಎಣಿಕೆಯ ಇತ್ತೀಚಿನ ಚಿತ್ರಣ ಹೀಗಿದೆ:

    ಆರ್‌ಎಸ್‌ಪಿ ಸುನಾಮಿ: ಬಲೇಂದ್ರ ಶಾ ನೇತೃತ್ವದ ರಾಷ್ಟ್ರೀಯ ಸ್ವತಂತ್ರ ಪಾರ್ಟಿ (RSP) ಸದ್ಯಕ್ಕೆ ಸುಮಾರು 47 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಕಠ್ಮಂಡುವಿನ ಎಲ್ಲಾ 10 ಕ್ಷೇತ್ರಗಳಲ್ಲೂ ಆರ್‌ಎಸ್‌ಪಿ ಅಭ್ಯರ್ಥಿಗಳೇ ಪ್ರಾಬಲ್ಯ ಸಾಧಿಸಿದ್ದಾರೆ.

    ಬಾಲೆನ್ ವರ್ಸಸ್ ಓಲಿ: ಅತ್ಯಂತ ಕುತೂಹಲಕಾರಿ ಕಣವಾದ ಝಾಪಾ-5 ಕ್ಷೇತ್ರದಲ್ಲಿ, ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ ವಿರುದ್ಧ ಬಲೇಂದ್ರ ಶಾ ಅವರು ಮುನ್ನಡೆ ಸಾಧಿಸಿರುವುದು ದೊಡ್ಡ ಮಟ್ಟದ ಸಂಚಲನ ಮೂಡಿಸಿದೆ.

    ಸಂಪ್ರದಾಯಿಕ ಪಕ್ಷಗಳ ಸ್ಥಿತಿ: ಗಗನ್ ಥಾಪಾ ನೇತೃತ್ವದ ನೇಪಾಳಿ ಕಾಂಗ್ರೆಸ್ ಮತ್ತು ಕೆ.ಪಿ. ಓಲಿ ಅವರ ಸಿಪಿಎನ್ (ಯುಎಂಎಲ್) ತಲಾ 5 ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿವೆ. ಪುಷ್ಪಕಮಲ್ ದಹಾಲ್ ‘ಪ್ರಚಂಡ’ ಅವರ ಪಕ್ಷವು ಕೇವಲ 2 ಸ್ಥಾನಗಳಲ್ಲಿ ಮುಂದಿದೆ.

    ಮತದಾನದ ಪ್ರಮಾಣ: ಗುರುವಾರ ನಡೆದ ಮತದಾನದಲ್ಲಿ ಶೇ. 60 ರಷ್ಟು ಮತದಾನ ದಾಖಲಾಗಿತ್ತು. ಇದು ಕಳೆದ ಎರಡು ದಶಕಗಳಲ್ಲೇ ಅತ್ಯಂತ ಕಡಿಮೆ ಮತದಾನ ಎನ್ನಲಾಗಿದ್ದರೂ, ಯುವ ಮತದಾರರು ಹೊಸ ಪಕ್ಷಗಳತ್ತ ಹೆಚ್ಚಿನ ಒಲವು ತೋರಿದ್ದಾರೆ.

    ಗೆಲುವಿನ ನಗೆ: ಈಗಾಗಲೇ ಕಠ್ಮಂಡು-1 ಕ್ಷೇತ್ರದಲ್ಲಿ ರಂಜು ದರ್ಶನಾ ಮತ್ತು ಕಠ್ಮಂಡು-8 ರಲ್ಲಿ ಬಿರಾಜ್ ಭಕ್ತ ಶ್ರೇಷ್ಠ ಅವರು ದೊಡ್ಡ ಅಂತರದಿಂದ ಜಯಗಳಿಸಿದ್ದಾರೆ ಎಂದು ವರದಿಯಾಗಿದೆ.

     “ನೇಪಾಳದ ರಾಜಕೀಯದಲ್ಲಿ ಹೊಸ ಯುಗ ಆರಂಭವಾಗುತ್ತಿದೆ.” ಕಳೆದ ಸೆಪ್ಟೆಂಬರ್‌ನಲ್ಲಿ ಭ್ರಷ್ಟಾಚಾರ ಮತ್ತು ಆರ್ಥಿಕ ಸಂಕಷ್ಟದ ವಿರುದ್ಧ ಭುಗಿಲೆದ್ದಿದ್ದ ಜೆನ್-ಜೆ ಪ್ರತಿಭಟನೆಯೇ ಇಂದಿನ ಈ ರಾಜಕೀಯ ಬದಲಾವಣೆಗೆ ಮೂಲ ಕಾರಣ. ಹಳೆಯ ನಾಯಕರ ಅಧಿಕಾರ ದಾಹಕ್ಕೆ ಬೇಸತ್ತ ನೇಪಾಳದ ಯುವಜನತೆ, 35 ವರ್ಷದ ಬಲೇಂದ್ರ ಶಾ ಅವರಂತಹ ಹೊಸ ತಲೆಮಾರಿನ ನಾಯಕರಲ್ಲಿ ಭರವಸೆ

    LEAVE A REPLY

    Please enter your comment!
    Please enter your name here

    error: Content is protected !!